ಸ್ವೀಪ್ ಕಾರ್ಯತಂತ್ರಕ್ಕೆ ಉತ್ತಮ ಸ್ಪಂದನೆ
Team Udayavani, Apr 19, 2019, 3:37 PM IST
ಮಂಗಳೂರು/ಉಡುಪಿ: ಮತದಾನ ಹೆಚ್ಚಿಸುವುದಕ್ಕಾಗಿ ಚುನಾವಣ ಆಯೋಗ ನಡೆಸಿದ ವಿವಿಧ ಜಾಗೃತಿ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರಕಿದೆ.
ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಈ ಹಿಂದಿನ ದಾಖಲೆಗಳನ್ನು ಈ ಬಾರಿ ಮತದಾರರು ಮುರಿದಿದ್ದಾರೆ. ಸ್ವೀಪ್ ವತಿಯಿಂದ ಆಯೋಜಿಸಲಾದ ವಿವಿಧ ರೀತಿಯ ಕಾರ್ಯಕ್ರಮಗಳು ಜನರಿಗೆ ತಲುಪಿರುವುದೇ ಇದಕ್ಕೆ ಕಾರಣವಾಗಿದೆ.
ಮಾಧ್ಯಮಗಳ ಮೂಲಕ ನಡೆಸಿದ ಸ್ವೀಪ್ ರಸಪ್ರಶ್ನೆ ಸ್ಪರ್ಧೆ, ಶಾಲಾ, ಕಾಲೇಜುಗಳಲ್ಲಿ ನಡೆಸಿದ ವಿವಿಧ ಕಾರ್ಯಕ್ರಮಗಳು, ಸ್ಪರ್ಧೆಗಳು ಮುಖ್ಯವಾಗಿ ಯುವಕರ ಮನಗೆದ್ದಿತ್ತು. ಕ್ಯಾಂಪಸ್ ರಾಯಬಾರಿ ಕಾರ್ಯಕ್ರಮ ಕೂಡ ಹೆಚ್ಚಿನ ಫಲ ನೀಡಿದೆ. ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನೇ ಮತದಾನಕ್ಕೆ ರಾಯಬಾರಿಗಳನ್ನಾಗಿ ನಿಯೋಜಿಸಿ ಸಹವರ್ತಿ ಗಳನ್ನು ಮತದಾನಕ್ಕೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಇದು ಉತ್ತಮ ಫಲಿತಾಂಶ ನೀಡಿದೆ.
ಉಡುಪಿ ಜಿಲ್ಲೆಯಲ್ಲಿ ಕೂಡ ಆಯೋಗದ ವತಿಯಿಂದ ಇದೇ ರೀತಿಯ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡದಲ್ಲಿ ಸ್ವೀಪ್ ವತಿಯಿಂದ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಾವಿರಾರು ಯುವ ಮತದಾರರು ಭಾಗವಹಿಸಿದ್ದರು.
ಮಾನವ ಸರಪಳಿ
ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಮಾನವ ಸರಪಳಿಯನ್ನು ತಲಪಾಡಿಯಿಂದ ಸಸಿಹಿತ್ಲುವರೆಗೆ ಆಯೋಜಿಸಿಸಲಾಗಿದ್ದು, ಇದರಲ್ಲಿ ಪರಿಸರದ ಹೆಚ್ಚಿನ ಎಲ್ಲ ಜನರು ಭಾಗವಹಿಸಿ ಮತದಾನ ಮಾಡುವ ಪ್ರತಿಜ್ಞೆ ಕೈಗೊಂಡಿದ್ದರು.
ಸಾಮಾಜಿಕ ಜಾಲತಾಣ
ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಜಾಗೃತಿ ಮೂಡಿಬಂದಿತ್ತು. ಸ್ವೀಪ್ ಕಾರ್ಯಕ್ರಮಗಳಿಗೆ ಪೂರಕವಾಗಿ ಯುವ ಸಮುದಾಯವು ಮತದಾನ ಮಾಡಲೇ ಬೇಕು ಎಂಬ ಮನೋಭಾವನೆಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಸಾರ ಮಾಡಿತ್ತು. ಇದು ಯುವ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಪ್ರೇರಣದಾಯಕವಾಯಿತು. ಇದರಿಂದಾಗಿ ಗುರುವಾರ ಬೆಳಗ್ಗೆಯೇ ಮತದಾನದಲ್ಲಿ ಭಾಗವಹಿಸಿದ ಯುವ ಸಮುದಾಯದವರು ಇದರ ಚಿತ್ರ, ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರಿಗೂ ಮತದಾನದಲ್ಲಿ ಭಾಗವಹಿಸಲು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್- ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.