ಎತ್ತಿನ ಗಾಡಿಯಲ್ಲಿ ಪ್ಲಾಸ್ಟಿಕ್ ರಾಕ್ಷಸನನ್ನು ಎಳೆದೊಯ್ದ ಯಮಧರ್ಮರಾಯ, ಚಿತ್ರಗುಪ್ತ!
ಪೆರ್ಮುದೆ ಗ್ರಾ.ಪಂ.: ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾ
Team Udayavani, Jul 24, 2022, 11:32 AM IST
ಬಜಪೆ: ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಎತ್ತಿನ ಗಾಡಿಯ ಮೂಲಕ ಏರ್ಪಡಿಸಿರುವ ವಿಶೇಷ ಜಾಥಾ ಜನರನ್ನು ಸೆಳೆಯುವಂತೆ ಮಾಡಿದೆ.
ಪ್ಲಾಸ್ಟಿಕ್ ರಾಕ್ಷಸ, ಯಮಧರ್ಮ ರಾಯ, ಚಿತ್ರಗುಪ್ತ ಎತ್ತಿನ ಗಾಡಿಯಲ್ಲಿ ಊರಿನ ಪೇಟೆ ರಸ್ತೆಯಲ್ಲಿ ತಿರುಗಾಟ ನಡೆಸಿದ್ದಾರೆ.
ಯಮಧರ್ಮರಾಯನು ಚಿತ್ರ ಗುಪ್ತನಲ್ಲಿ ಭೂಮಿಯಲ್ಲಿ ಜನರ ಪರಿಸ್ಥಿತಿ ಹೇಗಿದೆ ಎಂದು ಕೇಳುತ್ತಾನೆ; ಅದಕ್ಕೆ ಉತ್ತರವಾಗಿ ಚಿತ್ರಗುಪ್ತ ಎಲ್ಲವೂ ಸರಿಯಾಗಿದೆ. ಆದರೆ ಜನರು ಅವರವರ ಬುದ್ಧಿಯನ್ನು ಉಪಯೋಗಿಸದೇ ಕಸವನ್ನು ಅಲ್ಲಲ್ಲಿ ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್ ರಾಕ್ಷಸ ಜನರಿಗೆ ತೊಂದರೆ ಕೊಡುತ್ತಿದ್ದಾನೆ. ಭೂಮಿ ಬರಡಾಗುತ್ತಾ ಇದೆ. ಜಲಮೂಲಗಳು ಕಲು ಷಿತವಾಗುತ್ತಿದೆ, ನೀರು ಬತ್ತಿ ಹೋಗುತ್ತಾ ಇದೆ ಎಂದು ಹೇಳುತ್ತಾನೆ.
ಹೌದು, ಅದಕ್ಕೆ ಜನರು ಏನೂ ಪರಿಹಾರ ವ್ಯವಸ್ಥೆ ಮಾಡಿಲ್ಲವೇ ಎಂದು ಯಮ ಧರ್ಮರಾಯ ಕೇಳುತ್ತಾನೆ.
ಈಗಾಗಲೇ ಸ್ವಚ್ಛ ಭಾರತ ಮಿಶನ್ ಇದೆ. ಪ್ರತಿ ಗ್ರಾ.ಪಂ., ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಘಟಕ ನಿರ್ಮಿಸಿ, ಒಣ ಕಸ ಸಂಗ್ರಹ ಮಾಡುತ್ತಾ ಇದ್ದಾರೆ. ಇದಕ್ಕಾಗಿ ಪಂಚಾಯತ್‌ನಿಂದ ಜನವಸತಿ ಪ್ರದೇಶಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇದಕ್ಕೆ ಸರಕಾರದಿಂದ ಪ್ರಯತ್ನ ಆಗುತ್ತಿದೆ ಎಂದು ಚಿತ್ರಗುಪ್ತ ಹೇಳುತ್ತಾನೆ.
ಅದರೂ ಕಡಿಮೆಯಾಗಲಿಲ್ಲವೇ ಎಂದು ಯಮಧರ್ಮರಾಯ ಕೇಳುತ್ತಾನೆ. ಒಂದು ಹಂತಕ್ಕೆ ಬಂದಿದೆ ಆದರೂ ಇನ್ನೂ ಕಡಿಮೆಯಾಗಲು ತುಂಬಾ ಇದೆ ಎಂದು ಚಿತ್ರಗುಪ್ತ ಹೇಳುತ್ತಾನೆ. ಹಾಗಾದರೆ ನಾನೇನು ಭೂಮಿಗೆ ಇಳಿದು ಬರಬೇಕಾ ಎಂದು ಯಮಧರ್ಮರಾಯನು ಕೇಳುತ್ತಾನೆ. ಅದಕ್ಕೆ ಹೌದು, ಹೇಗಾದರೂ ಮಾಡಿ ಇದನ್ನು ಸರಿಪಡಿಸಬೇಕೆಂದು ಚಿತ್ರಗುಪ್ತ ಕೇಳಿಕೊಳ್ಳುತ್ತಾನೆ.
ಅದಕ್ಕೆ ಯಮಧರ್ಮರಾಯ ಭೂಮಿಗೆ ಇಳಿದು ಪ್ಲಾಸ್ಟಿಕ್ ರಾಕ್ಷಸನನ್ನು ಯಮ ಪಾಶದಲ್ಲಿ ಎಳೆದುಕೊಂಡು ಹೋಗುತ್ತಾನೆ.
ಪೆರ್ಮುದೆ ಗ್ರಾ.ಪಂ., ಸಾಹಸ್ ಸಂಸ್ಥೆ ಹಾಗೂ ಎಚ್‌ಸಿಎಲ್ ಸಂಸ್ಥೆಯ ಸಹಯೋಗದಲ್ಲಿ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾರದಾ ಯಕ್ಷಗಾನ ಭಜನ ಮಂಡಳಿಯಲ್ಲಿ ಕಿರು ನಾಟಕ ಪ್ರದರ್ಶನ ನಡೆಯಿತು. ಪ್ಲಾಸ್ಟಿಕ್ ಬಳಿಕೆಯ ದುಷ್ಪರಿಣಾಮಗಳ ಕುರಿತು ಸಾಹಸ್ ಸಂಸ್ಥೆಯ ಪ್ರತಿನಿಧಿಗಳು ಮಾಹಿತಿಯನ್ನು ನೀಡಿದರು.
ಪಂಚಾಯತ್ ಸದಸ್ಯರಾದ ಸಂದೇಶ್, ಸಾದಿಕ್, ಸರೋಜಾ, ಪಿಡಿಒ ಶೈಲಜಾ, ಕಾರ್ಯದರ್ಶಿವ ನಾಗೇಶ್, ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ಶೇಖರ್ ಶೆಟ್ಟಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.