Target ಇಲಿಯಾಸ್ ಕೊಲೆ ಪ್ರಕರಣ: ಐವರು ಆರೋಪಿಗಳು ಖುಲಾಸೆ
Team Udayavani, Dec 12, 2023, 12:07 AM IST
ಮಂಗಳೂರು: ಕುಖ್ಯಾತ “ಟಾರ್ಗೆಟ್ ಗ್ಯಾಂಗ್’ನ ನಾಯಕ ನಾಗಿದ್ದ ಟಾರ್ಗೆಟ್ ಇಲಿಯಾಸ್‌ನ ಕೊಲೆ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ಮಂಗಳೂರಿನ ನ್ಯಾಯಾಲಯ ದೋಷಮುಕ್ತ ಗೊಳಿಸಿದೆ. ಉಳ್ಳಾಲ ಧರ್ಮನಗರದ ದಾವೂದ್, ಮಹಮ್ಮದ್ ಶಮೀರ್ ಆಲಿಯಾಸ್ ಕಡಪರ ಶಮೀರ್, ರಿಯಾಜ್, ನಮೀರ್ ಹಂಝ, ಅಬ್ದುಲ್ ಖಾದರ್ ಆಲಿಯಾಸ್ ಜಬ್ಟಾರ್ ದೋಷಮುಕ್ತಗೊಂಡವರು.
ಟಾರ್ಗೆಟ್ ಇಲಿಯಾಸ್‌ನನ್ನು 2018ರ ಜ. 13ರಂದು ನಗರದ ಜೆಪ್ಪು ಕುಡಾ³ಡಿ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಚೂರಿ ಇರಿದು ಕೊಲೆ ಮಾಡಲಾಗಿತ್ತು. ಉಳ್ಳಾಲ ದಾವೂದ್, ಮಹಮ್ಮದ್ ಶಮೀರ್ ಆಲಿಯಾಸ್ ಕಡಪರ ಶಮೀರ್, ಉಮ್ಮರ್ ನವಾಫ್, ನೌಶದ್, ಮೊಹಮ್ಮದ್ ನಾಸಿರ್, ರಿಯಾಜ್, ನಮೀರ್ ಹಂಝ, ಅಸYರ್ ಆಲಿ ಆಲಿಯಾಸ್ ಅಶ್ರಫ್, ಅಬ್ದುಲ್ ಖಾದರ್ ಆಲಿಯಾಸ್ ಜಬ್ಟಾರ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್. ಅವರು ಐವರು ಆರೋಪಿಗಳು ನಿರ್ದೋಷಿಗಳೆಂದು ಡಿ. 11ರಂದು ತೀರ್ಪು ನೀಡಿದ್ದಾರೆ. ಐವರು ಆರೋಪಿಗಳ ಪರವಾಗಿ ಬಿ. ಜಿನೇಂದ್ರ ಕುಮಾರ್, ಅರವಿಂದ ಕುಮಾರ್ ಕೆ., ಬಿ. ಅಭಿಜಿತ್ ಜೈನ್, ವಸುಧಾ ಬಿ. ಮತ್ತು ಅನುಶ್ರೀ ಹೆಗ್ಡೆ ಎಂ. ಅವರು ವಾದಿಸಿದ್ದರು.
ಇತರ ಆರೋಪಿಗಳಾದ ಉಮ್ಮರ್ ನವಾಫ್, ನಾಶದ್, ಮೊಹಮ್ಮದ್ ನಾಸಿರ್, ಅಸYರ್ ಆಲಿ ಆಲಿಯಾಸ್ ಅಶ್ರಫ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.