ಟೇಕಾಫ್ ಸನ್ನದ್ಧ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ
Team Udayavani, Dec 27, 2017, 10:54 AM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ 150ಕ್ಕೂ ಹೆಚ್ಚು ಪ್ರಯಾ ಣಿಕ ರನ್ನು ಹೊತ್ತು ಮುಂಬಯಿಗೆ ಹಾರಲು ಟೇಕಾಫ್ಗೆ ಸಿದ್ಧವಾಗಿದ್ದ ಜೆಟ್ ಏರ್ವೇಸ್ ವಿಮಾನದ ಯಾನವನ್ನು ತಾಂತ್ರಿಕ ದೋಷ ದಿಂದಾಗಿ ರದ್ದುಪಡಿಸಿದ ಘಟನೆ ಮಂಗಳ ವಾರ ನಡೆದಿದೆ. ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಕಳೆದ ಮೂರು ತಿಂಗಳ ಅವಧಿ ಯಲ್ಲಿ ತಾಂತ್ರಿಕ ದೋಷದಿಂದ ವಿಮಾನ ಹಾರಾಟ ವ್ಯತ್ಯಯ ವಾಗಿರುವ ಎರಡನೆಯ ಘಟನೆಯಿದು.
ಸೆ. 21ರಂದು 173 ಪ್ರಯಾಣಿಕರನ್ನು ಹೊತ್ತು ದೋಹಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್ ವಿಫಲಗೊಂಡ ಹಿನ್ನೆಲೆ ಯಲ್ಲಿ ಟೇಕಾಫ್ ನಡೆಸಿದ ಕೇವಲ ಅರ್ಧ ತಾಸಿನಲ್ಲಿ ಅದು ಮರಳಿ ತುರ್ತು ಭೂಸ್ಪರ್ಶ ನಡೆಸಿತ್ತು. ಈ ಘಟನೆ ಮರೆ ಯುವ ಮುನ್ನವೇ ಈಗ ಮತ್ತೆ ಮಂಗಳೂರು ನಿಲ್ದಾಣದಲ್ಲಿ ಇನ್ನೇನು ಟೇಕಾಫ್ ನಡೆಸುವುದಕ್ಕೆ ಅಂತಿಮ ಕ್ಷಣದ ಸಿದ್ಧತೆ ನಡೆಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದು ಗಂಭೀರ ವಿಚಾರ. ಪೈಲಟ್ ಸಮಯ ಪ್ರಜ್ಞೆಯಿಂದಾಗಿ, ಟೇಕಾಫ್ ನಡೆ ಸುವುದಕ್ಕೆ ಮೊದಲೇ ತಾಂತ್ರಿಕ ದೋಷ ಗಮನಕ್ಕೆ ಬಂದಿರುವುದರಿಂದ ಅಪಾಯ ತಪ್ಪಿದೆ.
ಜೆಟ್ ಏರ್‌ವೆàಸ್‌ಗೆ ಸೇರಿದ ಈ ವಿಮಾನವು ಬೆಳಗ್ಗೆ 11.15ಕ್ಕೆ ಮುಂಬಯಿಗೆ ಹೊರಡಬೇಕಿತ್ತು. ಆದರೆ ಮುಂಬಯಿಯಿಂದ ಬರು ವಾಗಲೇ ವಿಳಂಬವಾಗಿದ್ದ ಕಾರಣ 11.30ಕ್ಕೆ ಮರುಯಾನಕ್ಕೆ ಸಿದ್ಧತೆ ನಡೆಸಲಾಗಿತ್ತು. 168 ಪ್ರಯಾಣಿಕ ಸಾಮರ್ಥ್ಯದ ಈ ವಿಮಾನದಲ್ಲಿ ಬಹುತೇಕ ಎಲ್ಲ ಆಸನಗಳು ಭರ್ತಿಯಾಗಿದ್ದವು ಎನ್ನಲಾಗಿದೆ. ಪ್ರಯಾಣಿಕರ ನಿಖರ ಮಾಹಿತಿ ಲಭ್ಯವಾಗಿಲ್ಲ. ವಿಮಾನದ ಅಂತಿಮ ಹಂತದ ತಾಂತ್ರಿಕ ತಪಾಸಣೆ ನಡೆ ಸಿದ ಬಳಿಕ ಪೈಲಟ್ ವಿಮಾನವನ್ನು ರನ್‌ವೇ ಯಲ್ಲಿ ಸ್ವಲ್ಪ ದೂರಕ್ಕೆ ಚಲಾಯಿಸಿದ್ದಾರೆ. ಆಗ ತಾಂತ್ರಿಕ ಸಮಸ್ಯೆ ಅವರ ಗಮನಕ್ಕೆ ಬಂದಿದ್ದು, ಟೇಕಾಫ್ ನಡೆಸುವುದಕ್ಕೆ ಹತ್ತು ನಿಮಿಷಗಳ ಹೆಚ್ಚುವರಿ ಕಾಲಾವಕಾಶ ಕೋರಿದ್ದಾರೆ. ಆದರೆ ಸತತ ಪ್ರಯತ್ನಪಟ್ಟರೂ ತಾಂತ್ರಿಕ ಸಮಸ್ಯೆ ಪರಿಹಾರ ವಾಗದ ಹಿನ್ನೆಲೆಯಲ್ಲಿ ಕೊನೆಗೆ ವಿಮಾನದ ಹಾರಾಟ ವನ್ನೇ ರದ್ದುಪಡಿಸಲಾಯಿತು ಎಂದು ವಿಮಾನ ನಿಲ್ದಾಣದ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಎಂಜಿನ್‌ನಲ್ಲಿ ಆಯಿಲ್ ಸೋರಿಕೆ
ಮೂಲಗಳ ಪ್ರಕಾರ, ಎಂಜಿನ್‌ನಿಂದ ಆಯಿಲ್ ಸೋರಿಕೆ ವಿಮಾನದಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ತೊಂದರೆ. ಸಣ್ಣಪುಟ್ಟ ತಾಂತ್ರಿಕ ದೋಷ ವಾಗಿದ್ದರೆ, ಸ್ಥಳದಲ್ಲೇ ಸರಿ ಪಡಿಸಿಕೊಂಡು ಒಂದುತಾಸಿನೊಳಗೆ ಹಾರಾಟ ಮುಂದುವರಿಸಲಾಗುತ್ತದೆ. ಆದರೆ ಈ ವಿಮಾನದ ಬಿಡಿಭಾಗ ವೊಂದನ್ನು ಬದಲಾಯಿಸುವುದು ಅನಿವಾರ್ಯ ವಾಗಿತ್ತು. ಬೆಂಗಳೂರಿನಿಂದ ಹೊಸ ಬಿಡಿಭಾಗ ತುರ್ತಾಗಿ ತರಿಸಿ ಅಳವಡಿಸಿದ ಅನಂತರವಷ್ಟೇ ಹಾರಾಟ ಮುಂದು ವರಿಸುವುದಕ್ಕೆ ಜೆಟ್ ಏರ್ ವೇಸ್ ಅಧಿಕಾರಿಗಳು ತೀರ್ಮಾನಿಸಿದ್ದರು. ಬಿಡಿಭಾಗ ತರಿಸಿ ದೋಷ ಸರಿಪಡಿಸುವಷ್ಟರಲ್ಲಿ ನಾಲ್ಕೈದು ತಾಸು ಕಳೆದಿತ್ತು. ಬೆಳಗ್ಗೆ 11.15ಕ್ಕೆ ಹೊರಡ ಬೇಕಿದ್ದ ವಿಮಾನ ಸಂಜೆ 6.05ಕ್ಕೆ ಮುಂಬಯಿಗೆ ಹೊರಟಿತು ಎನ್ನಲಾಗಿದೆ.
ನಿಲ್ದಾಣದಲ್ಲೇ ಕಾದ ಪ್ರಯಾಣಿಕರು
ಹಾರಾಟ ರದ್ದಾದ ಕಾರಣ ಈ ವಿಮಾನದ ಎಲ್ಲ ಪ್ರಯಾಣಿಕರು ಮಂಗಳ ವಾರ ಸಂಜೆಯ ವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹುತೇಕ ಪ್ರಯಾ ಣಿಕರು ಮುಂಬಯಿಗೆ ಹೊರಟಿದ್ದರು. ಹೊಸ ವರ್ಷ ಮತ್ತು ಕ್ರಿಸ್ಮಸ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿಯೂ ಪ್ರಯಾ ಣಿಕರ ಒತ್ತಡ ಹೆಚ್ಚಿದೆ. ಎಲ್ಲ ವೈಮಾನಿಕ ಕಂಪೆನಿಗಳ ವಿಮಾನಗಳೂ ಬಿಡುವಿಲ್ಲದೆ ಸಂಚರಿ ಸುತ್ತಿವೆ. ಇದೇ ಸಂದರ್ಭ ಜೆಟ್ ಏರ್‌ವೆàಸ್‌ನಲ್ಲಿ ತೊಂದರೆಯುಂಟಾಗಿ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು.
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್, “ಜೆಟ್ ಏರ್ ವೇಸ್ನ ಮಂಗಳೂರು- ಮುಂಬಯಿ ವಿಮಾನದ ಹಾರಾಟ ತಾಂತ್ರಿಕ ದೋಷದಿಂದ ವಿಳಂಬ ವಾಗಿ ರುವುದು ನನ್ನ ಗಮನಕ್ಕೆ ಬಂದಿಲ್ಲ. ಯಾವುದೇ ವಿಮಾನ ಹಾರಾಟವನ್ನು ಈ ರೀತಿ ತಾಂತ್ರಿಕ ದೋಷ ದಿಂದ ರದ್ದುಪಡಿಸಿದ್ದರೆ, ಪರ್ಯಾಯ ವ್ಯವಸ್ಥೆ ಯನ್ನು ಆಯಾ ವಿಮಾನ ಕಂಪೆನಿಯೇ ನಡೆಸ ಬೇಕು. ಹೀಗಾಗಿ ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ’ ಎಂದಿದ್ದಾರೆ.
ಬೆಂಗಳೂರು ವಿಮಾನ ವಿಳಂಬ
ಬೆಂಗಳೂರಿನ ದೇವನಹಳ್ಳಿ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ ದಟ್ಟ ಮಂಜಿನ ಕಾರಣ ವಿಮಾನ ಹಾರಾಟಗಳಲ್ಲಿ ಸಾಕಷ್ಟು ವಿಳಂಬವಾಗಿತ್ತು. ಬೆಂಗಳೂರಿನಿಂದ ಹೊರಟು ಬೆಳಗ್ಗೆ 6.45ಕ್ಕೆ ಇಲ್ಲಿ ಲ್ಯಾಂಡಿಂಗ್ ನಡೆಸಬೇಕಿದ್ದ ಇಂಡಿಗೊ ವಿಮಾನವು ತಡವಾಗಿ 10 ಗಂಟೆಗೆ ಆಗಮಿಸಿದೆ. ಬೆಳಗ್ಗೆ 7 ಗಂಟೆಗೆ ಬರಬೇಕಿದ್ದ ಸ್ಪೈಸ್ ಜೆಟ್ ವಿಮಾನವು 9.45ಕ್ಕೆ ಲ್ಯಾಂಡ್ ಆಗಿದೆ. ಬೆಳಗ್ಗೆ 8 ಗಂಟೆಗೆ ಆಗಮಿಸಬೇಕಿದ್ದ ಜೆಟ್ ಏರ್‌ವೆàಸ್ ವಿಮಾನ ಬೆಳಗ್ಗೆ 9.50ಕ್ಕೆ ಮಂಗಳೂರಿನಲ್ಲಿ ಲ್ಯಾಂಡಿಂಗ್ ನಡೆಸಿದೆ.
ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.