ಮಕ್ಕಳಿಗೆ ಟೆಡ್ಡಿ ಬೇರ್ ಕ್ಲಿನಿಕ್ ಕಾರ್ಯಕ್ರಮ; ಕೆಎಂಸಿ ಆಸ್ಪತ್ರೆ: ಮಂಗಳೂರು
Team Udayavani, Jul 22, 2022, 12:20 PM IST
ಮಹಾನಗರ: ಶಾಲೆಗೆ ಹೋಗುವ ಮಕ್ಕಳಲ್ಲಿ ಕಂಡು ಬರುವ ತಡೆಗಟ್ಟಬಹುದಾದ ಆರೋಗ್ಯ ಸಮಸ್ಯೆಗಳು ಮತ್ತು ಈ ಕುರಿತು ಶಿಕ್ಷಣ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ವತಿಯಿಂದ ನಗರದ ಅಶೋಕನಗರ ಎಸ್‌ಡಿಎಂ ಶಾಲೆಯಲ್ಲಿ ಟೆಡ್ಡಿ ಬೇರ್ ಕ್ಲಿನಿಕ್ ಕಾರ್ಯಕ್ರಮವನ್ನು ನಡೆಸಲಾಯಿತು.
ಟೆಡ್ಡಿ ಬೇರ್ ಕ್ಲಿನಿಕ್ ಕಾರ್ಯಕ್ರಮ ವೈದ್ಯರು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಕ್ರಮಗಳನ್ನು ಕುರಿತು ಚಿಕ್ಕ ಮಕ್ಕಳ ಭಯವನ್ನು ಕಡಿಮೆ ಮಾಡುವ ಧ್ಯೇಯ ಹೊಂದಿದೆಯಲ್ಲದೇ ಅವರಲ್ಲಿನ ಆರೋಗ್ಯ ಮತ್ತು ರೋಗಗಳನ್ನು ಕುರಿತ ಜ್ಞಾನವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಕೀಯ ವಿಭಾಗದ ಸಲಹಾ ತಜ್ಞ ಡಾ| ಜೀಧು ರಾಧಾಕೃಷ್ಣನ್ ಅವರು ಈ ಉಪಕ್ರಮ ಕುರಿತು ವಿವರಿಸಿದರು. 5ರಿಂದ 7 ವರ್ಷ ವಯಸ್ಸಿನ ಮಕ್ಕಳು ಕ್ಲಿನಿಕ್‌ಗೆ ತಮ್ಮ ನೆಚ್ಚಿನ ಟೆಡ್ಡಿಗಳನ್ನು ತಂದಿದ್ದರು. ಆಸ್ಪತ್ರೆ ವ್ಯವಸ್ಥೆಯಲ್ಲಿರುವಂತೆ, ದೂರುಗಳನ್ನು ಸಾದರಪಡಿಸುವಾಗ ಅವರು ತಮ್ಮ ಟೆಡ್ಡಿ ಹೆಸರನ್ನು ನೋಂದಾಯಿಸಿಕೊಂಡರು. ಟೆಡ್ಡಿಯ ತೂಕ, ಎತ್ತರ ಮತ್ತು ತಾಪಮಾನವನ್ನು ಅಳೆಯಲಾಯಿತು. ವೈದ್ಯರು ವೈದ್ಯಕೀಯ ಪರೀಕ್ಷೆ ಪ್ರದರ್ಶಿಸಿದರಲ್ಲದೇ ಟೆಡ್ಡಿಗಳ ಮೇಲೆ ಸ್ಟೆತೊಸ್ಕೋಪ್ ಗಳು, ಟಂಗ್ ಡಿಪ್ರಸರ್‌ಗಳು ಮತ್ತು ಓಟೋಸ್ಕೋಪ್ ಗಳಂತಹ ಸಾಮಾನ್ಯ ಉಪಕರಣಗಳ ಬಳಕೆಯ ಪ್ರಾತ್ಯಕ್ಷಿಕೆ ನೀಡಿದರು. ಕೈಗಳನ್ನು ಸೋಂಕು ರಹಿತಗೊಳಿಸಲು ಹ್ಯಾಂಡ್ ರಬ್ ಗಳ ಬಳಕೆಯ ಪ್ರಾತ್ಯಕ್ಷಿಕೆಯನ್ನೂ ನೀಡಲಾಯಿತು. ಮಕ್ಕಳು ಅನಂತರ ವೈದ್ಯರಂತೆ ನಟಿಸಿದರಲ್ಲದೇ ಉಪಕರಣಗಳೊಂದಿಗೆ ವೈದ್ಯಕೀಯ ಪರೀಕ್ಷೆಗಳನ್ನು ಪುನರಾವರ್ತಿಸಿದರು. ಮಕ್ಕಳು, ಶಾಲಾ ಅಧಿಕಾರಿಗಳು ಮತ್ತು ಹೆತ್ತವರು ಈ ಕಾರ್ಯಕ್ರಮವನ್ನು ಪ್ರಶಂಸಿಸಿದರು.
ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ದಿಕಿ ಮಾತನಾಡಿ, ಟೆಡ್ಡಿ ಬೇರ್ ಕ್ಲಿನಿಕ್‌ಗಳ ಪರಿಕಲ್ಪನೆ ವಿವರಿಸಿ ಆಸ್ಪತ್ರೆ ಅನುಕರಿಸುವ ವ್ಯವಸ್ಥೆಗೆ ಮಕ್ಕಳು ತೆರೆದುಕೊಳ್ಳುವಂತೆ ಮಾಡುವುದರೊಂದಿಗೆ ಆರೋಗ್ಯ ಸಮಸ್ಯೆ ತಡೆಗಟ್ಟಬಹುದಾದ ಮತ್ತು ಶಿಕ್ಷಣ ನೀಡುವ ಕ್ರಮ ಟೆಡ್ಡಿ ಬೇರ್ ಕ್ಲಿನಿಕ್ ಮಾದರಿಯಾಗಿದೆ. ಈ ಕಾರ್ಯಕ್ರಮವನ್ನು ನಗರದ ಅನೇಕ ಶಾಲೆಗಳಿಗೆ ವಿಸ್ತರಿಸಲಾಗುವುದು. ಆಸ್ಪತ್ರೆಯ ವೈದ್ಯರು ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಿಗೆ ಯೋಗ ಕ್ಷೇಮದ ಬಗ್ಗೆ ಶಿಕ್ಷಣ ನೀಡುತ್ತಾರೆ. ಅವರಿಗೆ ಜ್ಞಾನವನ್ನು ನೀಡುವ ಮೂಲಕ ಆಸ್ಪತ್ರೆಗೆ ಭೇಟಿ ನೀಡುವಲ್ಲಿ ಅವರಿಗೆ ಇರುವ ಆತಂಕವನ್ನು ಕಡಿಮೆ ಮಾಡುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.