ಪ್ರಧಾನಿ ಸಂಕಲ್ಪದ ‘ಜಲಶಕ್ತಿ’ಗೆ ರಾಜ್ಯದ 18 ಜಿಲ್ಲೆಗಳು ಆಯ್ಕೆ
Team Udayavani, Jul 19, 2019, 5:00 AM IST
ಮಂಗಳೂರು: ದೇಶದ 255 ಜಿಲ್ಲೆಗಳಲ್ಲಿ ಜಲವರ್ಧನ ಚಟುವಟಿಕೆಗಳನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದ್ದು, ರಾಜ್ಯದ 18 ಜಿಲ್ಲೆಗಳು ಮಹತ್ವದ ‘ಜಲಶಕ್ತಿ’ ಅಭಿಯಾನಕ್ಕೆ ಆಯ್ಕೆಯಾಗಿವೆ.
ತೀವ್ರ ಜಲಾಭಾವ ಎದುರಿಸುತ್ತಿರುವ ದೇಶದ ಹಲವು ಜಿಲ್ಲೆಗಳನ್ನು ಗುರುತಿಸಿ, ಆ ಜಿಲ್ಲೆಗಳ ಆಯ್ದ ಬ್ಲಾಕ್‌ಗಳಲ್ಲಿ ಜಲಸಂರಕ್ಷಣೆ ಚಟುವಟಿಕೆಗಳನ್ನು ಕೈಗೊಳ್ಳುವುದು ಪ್ರಧಾನಿ ಮೋದಿ ಅವರ ಸಂಕಲ್ಪದ ‘ಜಲಶಕ್ತಿ’ ಆಂದೋಲನದ ಗುರಿ.
ಅಭಿಯಾನದಡಿ ಆಯ್ಕೆಯಾದ ರಾಜ್ಯದ 18ಜಿಲ್ಲೆಗಳಿಗೂ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ ಐಎಎಸ್ ಅಧಿಕಾರಿಗಳ ಉಸ್ತು ವಾರಿಯ ಸಮಿತಿ ರಚಿಸಲಾಗಿದೆ. ಕೇಂದ್ರ ಜಲಶಕ್ತಿ ಇಲಾಖೆ, ಅಭಿವೃದ್ಧಿ, ಬಾಹ್ಯಾಕಾಶ, ರಕ್ಷಣೆ, ಪೆಟ್ರೋಲಿಯಂ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಪರಿಸರ, ಕೃಷಿ, ಕೈಗಾರಿಕೆ ಸಹಿತ ವಿವಿಧ ಇಲಾಖೆಗಳಿಂದ ಈ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಆಯ್ಕೆಯಾದ ಜಿಲ್ಲೆಗಳಲ್ಲಿ ಐಎಎಸ್ ಅಧಿಕಾರಿಯ ಅಧ್ಯಕ್ಷತೆ ಮತ್ತು ಜಿಲ್ಲಾಧಿಕಾರಿಗಳ ಸಂಚಾಲಕತ್ವದಲ್ಲಿ ಇಲಾಖೆ ಮಟ್ಟದ ಸಮನ್ವಯ ಸಮಿತಿ ರಚಿಸಲಾಗುತ್ತದೆ.
ಹೀಗಿರುತ್ತದೆ ‘ಜಲಶಕ್ತಿ’ ಯೋಜನೆ
ಆಯ್ಕೆಯಾದ ಜಿಲ್ಲೆಯಲ್ಲಿ ಜಲಸಂರಕ್ಷಣೆ ಮತ್ತು ಮಳೆನೀರು ಕೊಯ್ಲು, ಜಲಮೂಲಗಳ ಪುನರುತ್ಥಾನ ಮತ್ತು ನವೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಕೊಳವೆಬಾವಿಗಳ ಮರುಪೂರಣ, ಇಂಗುಗುಂಡಿಗಳ ರಚನೆ ಮತ್ತು ನೀರಾವರಿ ದಕ್ಷತೆ ಹೆಚ್ಚಳ ಮಾಡಲಾಗುತ್ತದೆ. ಜತೆಗೆ ಜಲಮೂಲಗಳ ನವೀಕರಣ, ಸಂರಕ್ಷಣೆ, ವ್ಯಾಪಕ ವೃಕ್ಷಾಂದೋಲನ ಕೂಡ ಕೈಗೊಳ್ಳಲಾಗುತ್ತದೆ. ಈ ಎಲ್ಲ ಚಟುವಟಿಕೆಗಳನ್ನು ನೈಋತ್ಯ ಮತ್ತು ಈಶಾನ್ಯ ಮಾರುತ ಚುರುಕಾಗಿರುವ ಪ್ರದೇಶಗಳಿಗೆ ತಕ್ಕ ಹಾಗೆ ಎರಡು ಹಂತಗಳಲ್ಲಿ (ಜು.1-ಸೆ.15 ಮತ್ತು ಅ.1-ನ.30)ಕೈಗೊಳ್ಳಲಾಗುತ್ತದೆ.
ಯಾಕಾಗಿ ‘ಜಲಶಕ್ತಿ’?
ಸದ್ಯ ದೇಶ ಹಿಂದೆಂದೂ ಕಂಡರಿಯದ ಜಲ ಸಂಕಟ ವನ್ನು ಎದುರಿಸುತ್ತಿದ್ದು, ಮಳೆಗಾಲದಲ್ಲಿಯೂ ಜನರು ನೀರಿಗಾಗಿ ಪರದಾಡುವಂತಾಗಿದೆ. ನದಿ-ಹಳ್ಳಗಳಂಥ ಜಲಮೂಲಗಳು ಅತಿಬೇಗನೆ ಬರಿದಾಗುತ್ತಿದ್ದು, ಅಂತರ್ಜಲ ಮಟ್ಟ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಕುಸಿಯುತ್ತಿದೆ. ಪಾರಂಪರಿಕ ಜಲಮೂಲಗಳಾದ ಬಾವಿ, ಕೆರೆ, ಪುಷ್ಕರಿಣಿ ಇತ್ಯಾದಿಗಳ ಬಗ್ಗೆ ಜನತೆ ತೋರಿದ ನಿರ್ಲಕ್ಷ್ಯದಿಂದ ಅವು ಕೂಡ ಅವಸಾನದ ಅಂಚಿನಲ್ಲಿವೆ. 2023ರ ಹೊತ್ತಿಗೆ ದೇಶದ ನೀರಿನ ಬೇಡಿಕೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಇದನ್ನು ಸಂಪೂರ್ಣ ಮನಗಂಡಿರುವ ಪ್ರಧಾನಿ ಮೋದಿ ಜಲಸಂರಕ್ಷಣೆ ಮತ್ತು ಜಲಮರುಪೂರಣದ ರಾಷ್ಟ್ರೀಯ ಜಲಶಕ್ತಿ ಅಭಿಯಾನಕ್ಕೆ ಕರೆ ನೀಡಿದ್ದಾರೆ.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.