ಅಳಕೆ ಮಾರುಕಟ್ಟೆ; ಅಂಗಡಿಗಳಿಗೆ ಮತ್ತೆ ಟೆಂಡರ್
Team Udayavani, Oct 15, 2022, 10:02 AM IST
ಕಂಕನಾಡಿ: ಸುಮಾರು ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡು ವ್ಯಾಪಾರ ಚಟುವಟಿಕೆ ಇನ್ನೂ ಪೂರ್ಣವಾಗಿ ತೆರೆದುಕೊಳ್ಳಲು ವಿಫಲವಾಗಿರುವ ಅಳಕೆ ಮಾರುಕಟ್ಟೆ ಅಂಗಡಿಗಳಿಗೆ ಪಾಲಿಕೆ ಮತ್ತೆ ಟೆಂಡರ್ ಕರೆದಿದೆ.
ಅಳಕೆ ಮಾರುಕಟ್ಟೆ ಗ್ರಾಹಕ ಸ್ನೇಹಿಯಾಗಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಗ್ರಾಹಕರು ಸೇರಿದಂತೆ ವರ್ತಕರು ಕೂಡ ಮಾರುಕಟ್ಟೆಯತ್ತ ಆಸಕ್ತಿ ತೋರುತ್ತಿಲ್ಲ. ಕೆಲವು ಅಂಗಡಿ ಕೋಣೆಗಳು ಮಾತ್ರ ಭರ್ತಿಯಾಗಿತ್ತು. ಇದರಿಂದಾಗಿ ಪಾಲಿಕೆ ಆದಾಯಕ್ಕೆ ಹಿನ್ನಡೆ ಉಂಟಾಗಿದೆ. ಇದೀಗ ಅಂಗಡಿ ಕೋಣೆ/ಸ್ಟಾಲ್‌ಗಳನ್ನು ಇ-ಟೆಂಡರ್ ಮೂಲಕ ಹರಾಜು ಮಾಡಲು ನಿರ್ಧಾರ ಮಾಡಿದೆ.
ವ್ಯಾಪಾರ, ಗ್ರಾಹಕ ಸ್ನೇಹಿಯಾಗಿ ನಿರ್ಮಿಸಲಿಲ್ಲ
ಅಳಕೆ ಮಾರುಕಟ್ಟೆ ವ್ಯಾಪಾರ, ಗ್ರಾಹಕ ಸ್ನೇಹಿಯಾಗಿ ನಿರ್ಮಿಸಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ವ್ಯಾಪಾರಸ್ಥರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೂ ಪೂರಕವಾಗಿ ಕಟ್ಟಡವನ್ನು ನಿರ್ಮಿಸಿಲ್ಲ ಎನ್ನುವ ಆಕ್ಷೇಪವೂ ಇದೆ. ಎಲ್ಲ ಮಳಿಗೆಗಳನ್ನು ಭರ್ತಿ ಮಾಡ ಬೇಕು. ಹೆಚ್ಚಿನ ಸಾಮಗ್ರಿಗಳು ಒಂದೇ ಕಡೆ ದೊರೆತರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹಾಗಾಗಿ ಎಲ್ಲ ಮಳಿಗೆಗಳಲ್ಲಿ ವ್ಯಾಪಾರ ಆರಂಭವಾಗುವಂತೆ ಪಾಲಿಕೆಯವರು ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ. ಅದರಂತೆ ಸದ್ಯ ಟೆಂಡರ್ ಪ್ರಕ್ರಿಯೆಗೆ ಮುಂದಾಗಿದೆ.
1.40 ಕೋ.ರೂ. ವೆಚದಲ್ಲಿ ನಿರ್ಮಾಣ
ಅಳಕೆ ಮಾರುಕಟ್ಟೆಯನ್ನು ಸುಮಾರು 1.40 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 536.19 ಚ.ಮೀ.ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ತರಕಾರಿ, ದಿನಸಿಗೆ, ಹೂ, ಹಣ್ಣು ಹಂಪಲು, ಕೋಳಿ, ಮೀನು, ಮಾಂಸ ಹೀಗೆ ಎಲ್ಲ ರೀತಿಯ ವಸ್ತುಗಳ ಮಾರಾಟಕ್ಕೆ ಸುಮಾರು 25ರಷ್ಟು ಅಂಗಡಿ ಕೋಣೆ, ಮೀನು ಮಾರಾಟಕ್ಕೆ ಪ್ರತ್ಯೇಕ ಕೌಂಟರ್ ನಿರ್ಮಿಸಲಾಗಿದೆ. ಬಹುತೇಕ ಅಂಗಡಿ ಕೋಣೆಗಳು ಖಾಲಿ ಇವೆ. ಟೆಂಡರ್ ಬಳಿಕ ಮತ್ತಷ್ಟು ಅಂಗಡಿ ಕೋಣೆಗಳು ಭರ್ತಿಯಾಗುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.