ರಾಣಿ ಅಬ್ಬಕ್ಕ ಪ್ರತಿಮೆ ರಚಿಸಿದ ಕಲಾವಿದ ಅಜ್ಞಾತ !
Team Udayavani, Feb 4, 2018, 12:00 PM IST
ಉಳ್ಳಾಲ: ಉಳ್ಳಾಲ ಎಂದಾಕ್ಷಣ ನೆನಪಾಗುವುದು ಭಾರತದ ಪ್ರಥಮ ಸ್ವಾತಂತ್ರ್ಯ ಸೇನಾನಿ, ತೌಳವ ರಾಣಿ ವೀರರಾಣಿ ಅಬ್ಬಕ್ಕ.ಧರ್ಮ ಸಮನ್ವಯದ ಬೀಡಾಗಿರುವ ಉಳ್ಳಾಲದ ಹೃದಯ ಭಾಗವನ್ನು ತಲುಪಿದಾಗ ಬೃಹತ್ ಅಬ್ಬಕ್ಕ ವಿಗ್ರಹವನ್ನು ಕಂಡು ರೋಮಾಂಚನ ವಾಗುತ್ತದೆ. ಈ ಮನೋಜ್ಞ ಪ್ರತಿಮೆ ಯನ್ನು ನಿರ್ಮಿಸಿದ ಕಲಾವಿದ ಉಮೇಶ್ ಬೋಳಾರ ಅವರನ್ನು ಅಬ್ಬಕ್ಕ ಉತ್ಸವ ಸಮಿತಿಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಗುರುತಿಸಿಲ್ಲ.
ಕಳೆದ 40 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಉಮೇಶ್ ಬೋಳಾರ ಅವರು ಮಂಗಳೂರಿನ ಬೋಳಾರದಲ್ಲಿ ಜನಿಸಿದವರು. ಪ್ರಸ್ತುತ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ನೆಲೆಸಿದ್ದಾರೆ. ಜಿಲ್ಲೆಯ ವಿವಿಧೆಡೆ ಗಣೇಶ ವಿಗ್ರಹ ಗಳನ್ನು ರಚಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
ಅಬ್ಬಕ್ಕನ ಪ್ರತಿಮೆ
ಸುಮಾರು 35 ವರ್ಷಗಳ ಹಿಂದೆ ಉಳ್ಳಾಲ ಜಂಕ್ಷನ್‌ನಲ್ಲಿ ನಿಯಮಿತವಾಗಿ ಕ್ರಿಕೆಟ್ ಆಟವಾಡುತ್ತಿದ್ದ ವಿದ್ಯಾರಣ್ಯ ಯುವಕ ಸಂಘದ ಸದಸ್ಯರು ಮೂರು ರಸ್ತೆ ಸೇರುವಲ್ಲಿ ಕಾಂಕ್ರೀಟ್ ರಿಂಗ್ ಇರಿಸುವ ಮೂಲಕ ಇದು ಅಬ್ಬಕ್ಕ ವೃತ್ತ ಎಂದು ಗುರುತಿಸಿಕೊಳ್ಳುವುದಕ್ಕೆ ಕಾರಣರಾದರು. ಸ್ಥಳೀಯ ಪೈಂಟರ್ ಪ್ರಭಾಕರ್ ಮತ್ತು ಮಹಾಬಲ ಶೆಟ್ಟಿಗಾರ ಅವರು ಈ ಕಾಂಕ್ರೀಟ್ ರಿಂಗ್‌ನಲ್ಲಿ ಅಬ್ಬಕ್ಕ ವೃತ್ತ ಎಂದು ಬರೆಯುವ ಮೂಲಕ ವೃತ್ತಕ್ಕೆ ಅಬ್ಬಕ್ಕನ ಹೆಸರು ಒದಗಿತು. ಹಲವಾರು ವರ್ಷಗಳ ಬಳಿಕ ಬಿಜೆಪಿ ಮುಖಂಡ ಬಾಬು ಬಂಗೇರ ಅವರು ಪ್ರಭಾರ ಮಂಡಲ ಪ್ರಧಾನರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಶಾಶ್ವತ ವೃತ್ತ ನಿರ್ಮಾಣಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಇನ್ನೋರ್ವ ಮುಖಂಡ ಸೀತಾರಾಮ ಬಂಗೇರ ನೇತೃತ್ವದಲ್ಲಿ ಯುವ ಮುಂದಾಳು ಭರತ್ ಉಳ್ಳಾಲ ಅವರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಬ್ಬಕ್ಕನ ಪ್ರತಿಮೆ ನಿರ್ಮಿಸಲು ಯೋಚಿಸಿದರು. ಪ್ರತಿಮೆ ರಚಿಸಲು ಸೂಕ್ತ ಕಲಾವಿದನ ಹುಡುಕಾಟ ನಡೆದು, ಉಮೇಶ್ ಬೋಳಾರ ಅವರಿಗೆ ಜವಾಬ್ದಾರಿ ವಹಿಸ ಲಾಯಿತು. ರಾಣಿ ಅಬ್ಬಕ್ಕನ ನೈಜ ರೂಪ ಹೇಗಿತ್ತು ಎಂಬುದಕ್ಕೆ ಪುರಾವೆ ಇರದ ಕಾರಣ ಉಮೇಶ್ ಅವರು ಅಬ್ಬಕ್ಕ ರಾಣಿಗೆ ಸಂಬಂಧಿಸಿದ ಪುಸ್ತಕಗಳನ್ನು ಪರಾಮರ್ಶಿಸಿ, ಚಾರಿತ್ರಿಕ ವಿವರಗಳನ್ನು ಮನನ ಮಾಡಿ ಅಬ್ಬಕ್ಕನ ರೂಪವನ್ನು ನೈಜತೆಗೆ ನಿಕಟವಾಗಿ ಕಲ್ಪಿಸಿಕೊಂಡರು. ಅಬ್ಬಕ್ಕನ ಚಿತ್ರವನ್ನು ಬರೆದು ರಾಣಿಗೆ ಶಾಶ್ವತ ರೂಪ ನೀಡಿದರು. ಬಳಿಕ ಚಿತ್ರಕ್ಕೆ ಅನುಗುಣವಾಗಿ ಪ್ರತಿಮೆ ನಿರ್ಮಾಣವನ್ನು 6 ತಿಂಗಳಲ್ಲಿ ಪೂರೈಸಿದರು. ಇಂದು ಉಮೇಶ್ ಅವರು ರಚಿಸಿದ ರಾಣಿ ಅಬ್ಬಕ್ಕನ ಚಿತ್ರವೇ ಎಲ್ಲೆಡೆ ಬಳಕೆಯಾಗುತ್ತಿದೆ.
ಕಲೆಯನ್ನು ಉದ್ಯೋಗವನ್ನಾಗಿಸಿಕೊಂಡು ಮೂವರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದೇನೆ. ಕಲಾವೃತ್ತಿಯನ್ನು ತ್ಯಜಿಸುವ ಸಂದರ್ಭ ಬಂದರೂ ಪತ್ನಿ ಮತ್ತು ಕುಟುಂಬದವರ ಪ್ರೋತ್ಸಾಹದಿಂದ ಮುಂದುವರಿದಿದ್ದೇನೆ. ಪ್ರಸ್ತುತ ಉಚಿತವಾಗಿ ಮಕ್ಕಳಿಗೆ ಕಲೆಯಲ್ಲಿ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ.
– ಉಮೇಶ್ ಬೋಳಾರ, ಕಲಾವಿದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್; ಸುಗಮ ಸಂಚಾರಕ್ಕೆ ಅಡ್ಡಿ
Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
ಮಂಜನಾಡಿ ಗ್ಯಾಸ್ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.