ಗಾಂಧಿನಗರ ಶಾಲೆಯ ಶತಮಾನೋತ್ಸವ ಸಮಾರೋಪ
Team Udayavani, Feb 2, 2018, 2:26 PM IST
ಮಹಾನಗರ: ಸರ್ವಧರ್ಮದ ಮಕ್ಕಳು ಜಾತಿ-ಮತದ ಹಂಗಿಲ್ಲದೆ ಒಟ್ಟಿಗೆ ಓದಿ-ಕಲಿಯುವ ಕಾರಣದಿಂದ ಶಾಲೆ ಎನ್ನುವುದು ನಿಜ ಅರ್ಥದ ದೇವಾಲಯ ವಾಗಿದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಉರ್ವ ಗಾಂಧಿನಗರದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಶತ ಮಾನೋತ್ಸವದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.
ವ್ಯಕ್ತಿ ವಿಕಾಸದಿಂದ ಸಮಾಜದ ಉನ್ನತಿ ಸಾಧ್ಯ. ಇಂತಹ ಆದರ್ಶದಿಂದ ಸ್ಫೂರ್ತಿ ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಗಾಂಧಿನಗರ ಶಾಲೆ ನೂರು ಸಂವತ್ಸರ ಪೂರೈಸುತ್ತಿರುವುದು ಅಭಿನಂದನಾರ್ಹ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಸುರೇಶ್ ರಾವ್, ಉದ್ಯಮಿಗಳಾದ ಜಗದೀಶ್ ಬೋಳೂರು, ಗೋಕುಲ್ ಕದ್ರಿ, ಬದ್ರಿನಾಥ ಕಾಮತ್, ದಿನೇಶ್ ಕೆ., ಆರ್.ಕೆ. ಶೆಣೈ, ಸಂಪತ್ ಶೆಟ್ಟಿ, ಭರತ್ ಭೂಷಣ್, ಪ್ರಸಾದ್ರಾಜ್ ಕಾಂಚನ್, ಕಣ್ಣೂರಿನ ವೈದ್ಯ ಡಾ| ಪ್ರದೀಪ್ಕುಮಾರ್, ಡಾ| ರಾಜೇಶ್ ಭಟ್, ಕಾರ್ಪೊರೇಟರ್ ಜಯಂತಿ ಆಚಾರ್, ರೂಪಾ ಬಂಗೇರ ಭಾಗವಹಿಸಿದ್ದರು.
ಗೌರವಾರ್ಪಣೆ
ಈ ಸಂದರ್ಭ ಶಾಲೆಯಲ್ಲಿ ಕಳೆದ 37 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ, ಶಾಲೆಯ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿರುವ ಹಿರಿಯ ಶಿಕ್ಷಕಿ ವೀಣಾ ಬಿ. ಹಾಗೂ ಅವರ ಪತಿ ದಯಾನಂದ ಬೇಕಲ್ ಅವರನ್ನು ಗೌರವಿಸಲಾಯಿತು. ಶಾಲೆಯ ಸರ್ವ ಶಿಕ್ಷಕರಿಗೆ ಗೌರವಾರ್ಪಣೆ ನೀಡಲಾಯಿತು.
ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಡಾ| ವಿಟ್ಠಲದಾಸ್ ಪೈ, ಅಣ್ಣಪ್ಪ ಪೈ, ಡಾ| ಬಿ.ಜಿ. ಸುವರ್ಣ, ಅಶೋಕ್ ಮೊಲಿ, ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಉರ್ವ, ಅರುಣ್ಕುಮಾರ್ ಉರ್ವ, ಭರತ್ಕುಮಾರ್, ಉಪಾಧ್ಯಕ್ಷ ಲೋಕನಾಥ ಬಂಗೇರ, ಖಜಾಂಚಿ ಲೋಕೇಶ್ ಚೆಟ್ಟಿ ಯಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಸುವರ್ಣ, ತಾರಾನಾಥ ಉರ್ವ, ಮುಖ್ಯ ಶಿಕ್ಷಕಿ ಯಶೋದಾ ಬಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.