ನಗರದಲ್ಲಿ ನೆರೆ ಹಾವಳಿ ತಡೆಗೆ ಕ್ರಮ; 30 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ
ಮಳೆನೀರು ಸಮರ್ಪಕವಾಗಿ ಹರಿಯಲು 35 ಕಡೆಗಳಲ್ಲಿ ರಾಜಕಾಲುವೆ, ತೋಡುಗಳ ಅಭಿವೃದ್ಧಿ
Team Udayavani, Dec 13, 2021, 6:44 PM IST
ಮಹಾನಗರ: ನಗರದಲ್ಲಿ ಭಾರೀ ಮಳೆ ಸುರಿದ ಸಂದರ್ಭ ಸೃಷ್ಟಿಯಾಗುವ ಕೃತಕ ನೆರೆ ತಡೆಯುವ ಉದ್ದೇಶದಿಂದ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ, ತೋಡುಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ.
ನಗರ ವ್ಯಾಪ್ತಿಯ ರಾಜ ಕಾಲುವೆ ಮತ್ತು ತೋಡು ಗಳಿಗೆ ತಡೆಗೋಡೆ ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಹಂತ ಹಂತವಾಗಿ ಆರಂಭವಾಗಲಿದೆ. ಒಟ್ಟಾರೆ ಕಾಮಗಾರಿಯ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿಸಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸುತ್ತಿದೆ. ಮಳೆ ನೀರು ಸಮ ರ್ಪಕವಾಗಿ ಹರಿಯುವ ಉದ್ದೇಶದಿಂದ ನಗರದ ಹಲವು ಕಡೆಗಳಲ್ಲಿರುವ ತೋಡು ಮತ್ತು ರಾಜಕಾಲುವೆಗೆ ತಡೆಗೋಡೆ ರಚನೆ ಯಾಗಿಲ್ಲ. ಜೋರಾಗಿ ಮಳೆ ಬಂದರೆ ರಾಜ ಕಾಲುವೆಯಿಂದ ನೀರು ಉಕ್ಕಿ ಅಕ್ಕ ಪಕ್ಕದ ಮನೆಗಳಿಗೆ ಪ್ರವೇಶಿಸುತ್ತಿದೆ. ಇದರಿಂದಾಗಿ ಹಲವಾರು ಮನೆ ಮಂದಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಎಲ್ಲೆಲ್ಲಿ ಕಾಮಗಾರಿ?
ನಗರದ 35 ಕಡೆಗಳಲ್ಲಿ ಕಾಮಗಾರಿ ನಡೆ ಸಲು ಅಂದಾಜಿಸಲಾಗಿದೆ. ಅದ ರಂತೆ ಚಂದ್ರಿಕಾ ಬಡಾವಣೆ ಬಳಿ ತೋಡಿನ ಅಭಿವೃದ್ಧಿ ಕಾಮಗಾರಿ, ಭಾರತಿ ನಗರ ಬಲಿಪ ತೋಟ ಬಳಿ ರಾಜ ಕಾಲುವೆ ಆಯ್ದ ಭಾಗಗಳಲ್ಲಿ ಕಾಮಗಾರಿ, ಬಲ್ಲಾಳ್‌ಬಾಗ್ ಪತ್ತುಮುಡಿಯಿಂದ ಪ್ರಗತಿ ಸರ್ವಿಸ್ ಸ್ಟೇಶನ್ ವರೆಗೆ ರಾಜಕಾಲುವೆ ಆಯ್ದ ಭಾಗಗಳಲ್ಲಿ ಕಾಮಗಾರಿ, ಕಂಡೆಟ್ಟುವಿ ನಿಂದ ಕುಂಟಲ್ಪಾಡಿವರೆಗೆ ತೋಡಿನ ಆಯ್ದ ಭಾಗಗಳಲ್ಲಿ ಕಾಮಗಾರಿ ನಡೆಯಲಿದೆ.
ಕಟ್ಟಪುಣಿ ರಾಜಕಾಲುವೆಯ ಆಯ್ದ ಭಾಗ, ಎಕ್ಕೂರು ಸೇತುವೆ ಬಳಿ ರಾಜಕಾಲುವೆ ಆಯ್ದ ಭಾಗ, ಹೊಗೆರಾಶಿ ಬಳಿ ರಾಜಕಾಲುವೆ ಆಯ್ದ ಭಾಗ, ಚಿಂತನ ಬಳಿಯ ರಾಜ ಕಾಲುವೆ ಆಯ್ದ ಭಾಗ, ಕುಡುಪಾಡಿ ಬಳಿ, ಭೋಜರಾವ್ ಸೇತುವೆ ಬಳಿಯಿಂದ ಕುದ್ರೋಳಿ ಸೇತುವೆವರೆಗೆ, ಕುದ್ರೋಳಿ ಕಂಡತ್‌ಪಳ್ಳಿ ಬಳಿ ರಾಜಕಾಲುವೆಯ ಆಯ್ದ ಭಾಗ, ನಾಗುರಿಯ ಗರೋಡಿ ಸ್ಟೀಲ್ ಬಳಿ, ಭೂವೈಜ್ಞಾನಿಕ ಸರ್ವೇ ಆಫ್ ಇಂಡಿಯಾ ಕಚೇರಿ ಬಳಿ, ಅತ್ತಾವರ ಶಾಲೆ ಬಳಿ, ಶಿವನಗರ ಬಳಿ, ಅಳಪೆ ಆತ್ಮಶಕ್ತಿ ಬಳಿ ಯಿಂದ ಹೊಗೆಕೋಡಿವರೆಗೆ, ಪಂಪ್‌ವೆಲ್‌ನಿಂದ ಕಂಕನಾಡಿ ಮಹಾಲಿಂಗೇಶ್ವರ ದೇಗುಲದವರೆಗೆ, ಚಿಲಿಂಬಿಯಿಂದ ಹೊಗೆ ಬೈಲುವರೆಗೆ, ಶೇಡಿಗುರಿ ಇರಿ ಪ್ರದೇಶ, ಕದ್ರಿ ಹಿಂದೂ ರುದ್ರಭೂಮಿ ಬಳಿ, ಮಿಷನ್‌ಗೋರಿಯಿಂದ ಬರ್ಕೆವರೆಗೆ, ಸದಾಶಿವನಗರ, ಇಎಸ್‌ಐ ಆಸ್ಪತ್ರೆ ಬಳಿ, ಸಿಲ್ವರ್‌ಗೇಟ್ ನಿಂದ ಕೋಂಗುರು ವೆಟ್‌ವೆಲ್, ಕಣ್ಣೂರು ವಾರ್ಡ್‌ನ ಬಿಎಂಡಬ್ಲ್ಯೂ ಶೋರೂಂ ಬಳಿ, ಕಣ್ಣೂರು ಗಣೇಶೋತ್ಸವ ಸಮಿತಿ, ನಂದಿನಿ ಡೈರಿ ಬಳಿ, ಕೊಡಕ್ಕಲ್ ಬಳಿ, ಸರೋಶ್ ಕಾಲೇಜು ಬಳಿ, ಯೇನಪೊಯ ಆಸ್ಪತ್ರೆ ಹಿಂಬದಿ, ಸೂಟರ್‌ಪೇಟೆ, ಕಕ್ಕೆಬೆಟ್ಟು ಕಾರ್ಮಿಕ ಕಾಲನಿ, ಭಾರತೀನಗರ ಬಳಿ, ಶಿವನಗರ ಬಳಿ, ಅಡು ಮರೋಳಿಯ ಚಾಮುಂಡಿಗುಡಿ, ಪಾಂಪು ಮನೆ ಬಳಿ, ಅಳಪೆ ಉತ್ತರ ವಾರ್ಡ್‌ನ ಪ್ರವೀಣ್ ನಿಡ್ಡೇಲ್ ಮನೆ ಬಳಿಯ, ಮುಲ್ಲ ಗುಡ್ಡೆ ಬಳಿ ಸೇರಿ ಒಟ್ಟಾರೆ 30 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಸಮಸ್ಯೆಗೆ ಪರಿಹಾರ
ಭಾರೀ ಮಳೆಯಾಗುವ ಸಂದರ್ಭ ನಗರದ ಕೆಲವೊಂದು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ. ನಗರದ ಕೆಲವೊಂದು ರಾಜಕಾಲುವೆ, ತೋಡುಗಳಿಂದ ನೀರು ಉಕ್ಕಿ ಅಕ್ಕ ಪಕ್ಕದ ಮನೆಗಳಿಗೆ ಆವೃತವಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ನಗರದ 35 ಕಡೆಗಳಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ. ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ.
-ಡಿ. ವೇದವ್ಯಾಸ ಕಾಮತ್, ಶಾಸಕರು
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.