ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೋವಿಡ್ 19 ಪರಿಣಾಮ

ಪರೀಕ್ಷೆ , ಫಲಿತಾಂಶ ಮುಂದಕ್ಕೆ ; ಶೈಕ್ಷಣಿಕ ವರ್ಷಾರಂಭವೂ ವಿಳಂಬ

Team Udayavani, Apr 9, 2020, 11:23 AM IST

ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೋವಿಡ್ 19 ಪರಿಣಾಮ

ಮಂಗಳೂರು: ಇಡೀ ಜಗತ್ತನ್ನೇ ಬುಡಮೇಲು ಮಾಡಿರುವ ಕೋವಿಡ್ 19 ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೂ ಪರಿಣಾಮ ಬೀರಲಿದೆ. ಪರೀಕ್ಷೆ, ಫಲಿತಾಂಶ ಮುಂದಕ್ಕೆ ಹೋಗಿದ್ದು, ಶೈಕ್ಷಣಿಕ ವರ್ಷಾರಂಭವೂ ವಿಳಂಬವಾಗಲಿದೆ. ಇದರಿಂದ ನಿಗದಿತ ಅವಧಿಯೊಳಗೆ ಮುಂದಿನ ವರ್ಷದ ಪಠ್ಯ ಪೂರ್ಣಗೊಳಿಸುವುದೂ ಶಿಕ್ಷಕರಿಗೆ ಸವಾಲಾಗಲಿದೆ.

ಭಾರತದಲ್ಲಿ ಮಾ. 23ರಿಂದಲೇ ವಿಧಿಸಲಾಗಿರುವ ಲಾಕ್‌ಡೌನ್‌ ಪರಿಣಾಮ ನಿಗ ದಿತ ಪರೀಕ್ಷೆಗಳೆಲ್ಲ ಮುಂದಕ್ಕೆ ಹೋಗಿವೆ. ಪಿಯುಸಿಗೆ ಇಂಗ್ಲಿಷ್‌ಯೊಂದು ಬಾಕಿಯಾಗಿದ್ದು, ಮುಂದೆ ಯಾವಾಗ ನಡೆಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮಾ. 27ಕ್ಕೆ ಆರಂಭವಾಗಿ ಎ. 9ಕ್ಕೆ ಮುಗಿಯಬೇಕಾದ ಎಸೆಸ್ಸೆಲ್ಸಿ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಮಾಹಿತಿಯೂ ಇಲ್ಲ. ಸಾಮಾನ್ಯವಾಗಿ ಎಪ್ರಿಲ್‌ ಎರಡನೇ ವಾರದಲ್ಲಿ ಪರೀಕ್ಷೆಗಳೆಲ್ಲ ಮುಗಿದು, ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಫಲಿತಾಂಶವೂ ಲಭ್ಯವಾಗುತ್ತಿತ್ತು.

ಮೌಲ್ಯಮಾಪನಕ್ಕೂ ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಎ. 14ರ ಬಳಿಕ ಲಾಕ್‌ಡೌನ್‌ ತೆರವಾದಲ್ಲಿ ಬಳಿಕ ವೇಳಾಪಟ್ಟಿ ತಯಾರಿಸಿ ಪರೀಕ್ಷೆ ನಡೆಸಬಹುದು. ತೆರವಾಗದಿದ್ದಲ್ಲಿ ಸರಕಾರದ ಮುಂದಿನ ನಿಲುವೇನು ಎಂಬ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇಲ್ಲ.

ಅಂತಿಮ ಪದವಿ ಪರೀಕ್ಷೆ ಚರ್ಚೆ
ಮಂಗಳೂರು ವಿ.ವಿ. ಮಟ್ಟದಲ್ಲಿ ಎ. 12ರೊಳಗೆ ತರಗತಿ ಮುಗಿದು ಎ. 25ರಿಂದ ಮೇ 15ರ ವರೆಗೆ ಪರೀಕ್ಷೆಗಳು ನಡೆದು ಜೂ. 10ರೊಳಗೆ ಫಲಿತಾಂಶ ನೀಡಬೇಕಿತ್ತು. ಆದರೆ ಈ ಬಾರಿ ಪಾಠ ಪ್ರವಚನಗಳೇ ಅಪೂರ್ಣವಾಗಿವೆ. ವಿ.ವಿ. ವ್ಯಾಪ್ತಿಯ 210 ಕಾಲೇಜುಗಳಲ್ಲಿ ಪ್ರಥಮ, ದ್ವಿತೀಯ ಪದವಿಗಳ ಸೆಮಿಸ್ಟರ್‌ ಪರೀಕ್ಷೆಗಳನ್ನು ಆಯಾ ಕಾಲೇಜು ಹಂತದಲ್ಲಿಯೇ ನಡೆಸಿ ಅಂತಿಮ ವರ್ಷದ ಪರೀಕ್ಷೆಯನ್ನು ಮಾತ್ರ ವಿ.ವಿ. ಅಡಿಯಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತಿಮ ಪದವಿಯವರಿಗೆ ಪರೀಕ್ಷೆ ನಡೆಸಿ ಡಿಜಿಟಲ್‌ ಮೌಲ್ಯಮಾಪನ ನಡೆಸಿ ಶೀಘ್ರ ಫಲಿತಾಂಶ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಆದರೆ ಇದಕ್ಕೆ ಸರಕಾರ ಅನುಮತಿ ನೀಡಿ, ಕೌನ್ಸಿಲ್‌ ಅನುಮತಿ ಸಿಕ್ಕಿದಲ್ಲಿ ಮಾತ್ರ ಮುಂದುವರಿಯಬಹುದು ಎಂದು ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ತಿಳಿಸಿದ್ದಾರೆ.

ತಡವಾಗಲಿದೆ ಶೈಕ್ಷಣಿಕ ವರ್ಷಾರಂಭ
ಸಾಮಾನ್ಯವಾಗಿ ಮೇ ಎರಡನೇ ವಾರ ದೊಳಗೆ ಎಸೆಸ್ಸೆಲ್ಸಿ ಫಲಿತಾಂಶ ಬಂದು ಜೂ. 18ರೊಳಗೆ ಪ್ರಥಮ ಪಿಯುಸಿ ತರಗತಿ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಕನಿಷ್ಠ ಒಂದು ತಿಂಗಳು ತಡವಾಗಬಹುದು ಎನ್ನುತ್ತಾರೆ ಇಲಾಖಾಧಿಕಾರಿಗಳು. ಪಿಯುಸಿ ಪರೀಕ್ಷೆ ಬರೆದವರೂ ಪದವಿ ಯಾ ಇತರ ವೃತ್ತಿಪರ ಶಿಕ್ಷಣಕ್ಕೆ ದಾಖಲಾಗುವುದೂ ತಡವಾಗಲಿದೆ.

ಪಿಯುಸಿಯ ಇಂಗ್ಲಿಷ್‌ ಪರೀಕ್ಷೆ ಯಾವಾಗ ಎಂಬುದು ಲಾಕ್‌ಡೌನ್‌ ಮುಗಿದ ತತ್‌ಕ್ಷಣ ತೀರ್ಮಾನವಾಗಲಿದೆ. ಮೌಲ್ಯಮಾಪನ, ಫಲಿತಾಂಶ, ಮುಂದಿನ ತರಗತಿ ಸೇರ್ಪಡೆ ಎಲ್ಲವೂ ವಿಳಂಬವಾಗಲಿದೆ. ಆದರೆ ಇದು ಅನಿವಾರ್ಯ; ಬೇರೆ ದಾರಿ ಇಲ್ಲ.
– ಕಲ್ಲಯ್ಯ ಸಿ.ಟಿ., ಜಂಟಿ ಉಪ ನಿರ್ದೇಶಕ (ಪರೀಕ್ಷೆ), ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು

ಟಾಪ್ ನ್ಯೂಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.