ರಾಷ್ಟ್ರ ಧರ್ಮದ ರಕ್ಷಣೆ ಧ್ಯೇಯವಾಗಲಿ: ಯೋಗಿ
Team Udayavani, Oct 5, 2017, 11:06 AM IST
ಮಂಗಳೂರು: ಧರ್ಮ ಮತ್ತು ರಾಜನೀತಿ ಸಮ್ಮಿಲನಗೊಂಡರೆ ಸುಭಿಕ್ಷೆ ನೆಲೆಸುತ್ತದೆ. ಧರ್ಮದ ಜತೆಗೆ ರಾಷ್ಟ್ರ ಧರ್ಮದ ರಕ್ಷಣೆ ನಮ್ಮ ಜೀವನದ ಧ್ಯೇಯವಾಗಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಅವರು ಕದ್ರಿ ಶ್ರೀ ಯೋಗೇಶ್ವರ ಮಠ (ಜೋಗಿ ಮಠ)ಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸನಾತನ ಹಿಂದೂ ಧರ್ಮದ ರಕ್ಷಣೆಯಿಂದ ಲೋಕಕಲ್ಯಾಣವಾಗುತ್ತದೆ. ಮಠ- ಮಂದಿರಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಯೋಗಿ ಆದಿತ್ಯನಾಥ ಅವರು ಕದ್ರಿ ಜೋಗಿ ಮಠದಲ್ಲಿ ಶ್ರೀ ಕಾಲಭೈರವ ದೇವರ ದರ್ಶನ ಪಡೆದರು. ಅವರನ್ನು ಕದ್ರಿ ಯೋಗೇಶ್ವರ ಮಠ ಪೀಠಾಧಿಪತಿ ರಾಜ ನಿರ್ಮಲನಾಥ ಸ್ವಾಮೀಜಿ ಸ್ವಾಗತಿಸಿದರು. ನಿಕಟಪೂರ್ವ ಪೀಠಾಧಿಪತಿ ರಾಜ ಸಂಧ್ಯನಾಥ ಸ್ವಾಮೀಜಿ, ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಜೋಗಿ ಸಮಾಜದ ಅಧ್ಯಕ್ಷ ಕಿರಣ್ ಜೋಗಿ, ರಾಜಸ್ಥಾನ ಸಭಾದ ಹಿಮ್ಮತ್‌ಲಾಲ್ ಚೌಧರಿ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ವಾಸ್ತವ್ಯ
ಮಂಗಳೂರು: ಬಿಜೆಪಿ ಕೇರಳ ಘಟಕವು ಹಮ್ಮಿಕೊಂಡಿರುವ “ಜನರಕ್ಷಾ ಯಾತ್ರೆ’ಯಲ್ಲಿ ಪಾಲ್ಗೊ ಳ್ಳಲು ಆಗಮಿಸಿದ್ದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ ಅವರು ಬುಧವಾರ ರಾತ್ರಿ ಕೇರಳದಿಂದ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದಾರೆ.
ಬುಧವಾರ ರಾತ್ರಿ ಬಿಗಿ ಭದ್ರತೆ ಯೊಂದಿಗೆ ಮಂಗಳೂರಿಗೆ ಬಂದ ಯೋಗಿ ಆದಿತ್ಯನಾಥ ಅವರು ಇಲ್ಲಿನ ಕದ್ರಿ ಸಮೀಪವಿರುವ ಜೋಗಿ ಮಠಕ್ಕೆ ಭೇಟಿ ಕೊಟ್ಟರು. ರಾತ್ರಿ ಭೋಜನ ವನ್ನು ಮಠದಲ್ಲೇ ಸ್ವೀಕರಿಸಿ ಅಲ್ಲಿಯೇ ತಂಗಿದ್ದು, ಗುರುವಾರ ಬೆಳಗ್ಗೆ 6 ಗಂಟೆಗೆ ವಿಮಾನದಲ್ಲಿ ಮತ್ತೆ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸು ತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೋಗಿ ಆದಿತ್ಯನಾಥ ಅವರು ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಸ್ವಾಗತಿಸಲಾಗಿತ್ತು. ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಕೇರಳದಿಂದ ನಗರಕ್ಕೆ ಆಗಮಿಸುವ ವೇಳೆಯಲ್ಲಿ ಮುಖ್ಯಮಂತ್ರಿ ಆದಿತ್ಯ ನಾಥ ಅವರಿಗೆ ದಾರಿಯುದ್ದಕ್ಕೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಸಿಎಂ ಆದ ಬಳಿಕ ಮೊದಲ ಭೇಟಿ
ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಅವರು ಕಳೆದ ವರ್ಷ ಸಂಸದ ರಾಗಿದ್ದ ವೇಳೆ ಮಂಗಳೂರಿ ನಲ್ಲಿ ಜೋಗಿ ಮಠದ ಪೀಠಾಧಿ ಪತಿ ಗಳ ಪಟ್ಟಾಭಿ ಷೇಕ ಕಾರ್ಯ ಕ್ರಮ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಮುಖ್ಯ ಮಂತ್ರಿ ಯಾದ ಬಳಿಕ ಇದೇ ಮೊದಲ ಬಾರಿಗೆ ಕರಾ ವಳಿಗೆ ಆಗಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.