Smart City ಸೂಚನ ಫಲಕದಲ್ಲಿ ಮತ್ತೆ ‘ಗುಜ್ಜರಕೆರೆ’ ಹೆಸರು
Team Udayavani, Dec 2, 2024, 2:42 PM IST
ಜಪ್ಪು ಮಾರ್ಕೆಟ್: ಜಪ್ಪು ಮಾರ್ಕೆಟ್ ಬಳಿ ಸ್ಮಾರ್ಟ್ ಸಿಟಿ ವತಿಯಿಂದ ಅಳವಡಿಸಿರುವ ಸ್ಥಳ ಗುರುತು ದಿಕ್ಕು ಸೂಚನ ಫಲಕದಲ್ಲಿ ‘ಗುಜ್ಜರಕೆರೆ’ ಹೆಸರು ಮತ್ತೆ ಬರೆಯಲಾಗಿದೆ.
ಈ ಫಲಕದಲ್ಲಿ ಗುಜ್ಜರಕೆರೆ ಎಂಬುವ ಬದಲಾಗಿ ‘ಗುಜ್ಜಕೆರೆ’ ಎಂದು ಈ ಹಿಂದೆ ತಪ್ಪಾಗಿ ಬರೆಯ ಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ತಪ್ಪನ್ನು ಸರಿ ಪಡಿಸಲು ಕೋರಲಾಗಿತ್ತು. ಹಲವು ತಿಂಗಳು ಕಳೆದರೂ ಈ ಬಗ್ಗೆಯೂ ಕ್ರಮ ಕೈಗೊಂಡಿರಲಿಲ್ಲ. ತಪ್ಪಾಗಿ ಬರೆದ ಹೆಸರಿನ ಮೇಲೆ ಬಿಳಿ ಬಣ್ಣದ ಸ್ಟಿಕ್ಕರ್ ಅಂಟಿಸಲಾಗಿತ್ತು.
ಈ ಬಗ್ಗೆ ನ.29ರ ‘ಉದಯವಾಣಿ ಸುದಿನ’ದಲ್ಲಿ ಸ್ಮಾರ್ಟ್ ಸಿಟಿ ಸೂಚನ ಫಲಕದಲ್ಲಿ ‘ಗುಜ್ಜರಕೆರೆ’ ಹೆಸರು ಮಾಯ’ ಎನ್ನುವ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿ ಪ್ರಕಟವಾದ ತತ್‌ಕ್ಷಣ ಸಂಬಂಧಪಟ್ಟವರು ಎಚ್ಚೆತ್ತು ಫಲಕದಲ್ಲಿ ಮತ್ತೆ ಗುಜ್ಜರಕೆರೆಯ ಹೆಸರು ಬರೆಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳು ನೆರವೇರಿದ ಬಳಿಕವೂ ಈ ಪವಿತ್ರ ಕೆರೆಯ ನೀರಿನಲ್ಲಿ ವಿಷಕಾರಿ ಅಂಶಗಳು ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ಮತ್ತು ಕೆರೆಗೆ ಕೊಳಚೆ ನೀರು ಬರುತ್ತಿರುವ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವ ಅಗತ್ಯತೆ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
U19 Asia Cup; ವಿಲಕ್ಷಣ ಕಾರಣದಿಂದ ಅಭಿಮಾನಿಗಳ ಗಮನ ಸೆಳೆದ ನೇಪಾಳ ಬೌಲರ್: ವಿಡಿಯೋ ವೈರಲ್
ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಬರ್ಬರ ಹ*ತ್ಯೆ!
SSLC, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು
ವಿಜಯೇಂದ್ರ ಸಣ್ಣ ಹುಡುಗ, ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವುದು ಒಳಿತು: ರಮೇಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.