ನಗರದ ಕಾರಾಗೃಹದಲ್ಲಿ ನಳನಳಿಸಲಿದೆ ನರ್ಸರಿ
ಕೈದಿಗಳ ಕೈಯಿಂದಲೇ ಸಸಿ ಬೆಳೆಸುವ ಯೋಜನೆಗೆ ತಯಾರಿ
Team Udayavani, Dec 21, 2021, 5:47 PM IST
ಮಹಾನಗರ: ನಗರದ ಜಿಲ್ಲಾ ಕಾರಾಗೃಹ ಆವರಣದೊಳಗೆ ಸಸಿಗಳನ್ನು ಬೆಳೆಸಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ನೀಡಲು ಚಿಂತನೆ ನಡೆಸಲಾಗಿದ್ದು, ಇದು ಅನುಷ್ಠಾನಗೊಂಡರೆ ಕೈದಿಗಳ ಕೈಯಲ್ಲೇ ನರ್ಸರಿ ನಳನಳಿಸಲಿದೆ.
ಸಾಮಾನ್ಯವಾಗಿ ಕೇಂದ್ರ ಕಾರಾ ಗೃಹಗಳಲ್ಲಿ ಕೈದಿಗಳಿಗೆ ಕೆಲಸ ಕೊಟ್ಟು ಅವರಿಗೆ ಸಂಭಾವನೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ವಿಚಾರಣಾಧೀನ ಕೈದಿಗಳಿರುವ ಜಿಲ್ಲಾ ಕಾರಾಗೃಹಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ. ಇದೀಗ ಸರಕಾರವು ಜಿಲ್ಲಾ ಕಾರಾಗೃಹಗಳಲ್ಲಿಯೂ ಕೈದಿಗಳಿಗೆ ವೃತ್ತಿ ತರಬೇತಿ ನೀಡಲು ಸಿದ್ಧತೆ ನಡೆದಿದೆ. ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿಯೂ ಕೆಲವು ಯೋಜನೆಗಳನ್ನು ಹಾಕಿಕೊಳ್ಳಲು ಚಿಂತನೆ ನಡೆಸಲಾಗಿದೆ. ಇದರಲ್ಲಿ “ನರ್ಸರಿ’ಗೆ ಕೂಡ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಕೈದಿಗಳು ಹಗಲಿರುಳು ಕಾರಾಗೃಹದೊಳಗೇ ಇರುವ ಬದಲು ಹೊರಾಂಗಣದಲ್ಲಿ ದೈಹಿಕ ಶ್ರಮ ನಡೆಸು ವುದಕ್ಕೂ ನರ್ಸರಿ ಕೆಲಸ ಪೂರಕವಾಗಲಿದೆ. ಅಲ್ಲದೆ ಪರಿಸರದ ಸಂರಕ್ಷಣೆಗೂ ಕೊಡುಗೆ ನೀಡಿದಂತಾಗಲಿದೆ ಎನ್ನುತ್ತಾರೆ ಕಾರಾಗೃಹದ ಅಧಿಕಾರಿಗಳು.
ಹಾಸನ ಕಾರಾಗೃಹ ಮಾದರಿ
ಹಾಸನದ ಜಿಲ್ಲಾ ಕಾರಾಗೃಹದಲ್ಲಿ ಕಳೆದ ಸುಮಾರು ಐದೂವರೆ ವರ್ಷಗಳಲ್ಲಿ ಕಾರಾಗೃಹದ ನರ್ಸರಿಯಲ್ಲಿ ಸುಮಾರು 9,000 ಗಿಡಗಳನ್ನು ಬೆಳೆಸಿ ಸಾರ್ವಜನಿಕರು, ವಿವಿಧ ಸಂಘ – ಸಂಸ್ಥೆಗಳಿಗೆ ವಿತರಿಸಲಾಗಿದೆ. ಆಸಕ್ತ ಕೈದಿಗಳೇ ಪ್ರತಿದಿನ ಅರ್ಧ ತಾಸು ನರ್ಸರಿ ನಿರ್ವಹಣೆ ಮಾಡಿದ್ದಾರೆ. ಅದೇ ರೀತಿ ಮಂಗಳೂರಿನ ಕಾರಾಗೃಹದಲ್ಲಿಯೂ ಆಸಕ್ತ ವಿಚಾರಣಾಧೀನ ಕೈದಿಗಳನ್ನು ನರ್ಸರಿ ಕೆಲಸದಲ್ಲಿ ತೊಡಗಿಸುವ ಉದ್ದೇಶ ಹೊಂದಲಾಗಿದೆ. ಸ್ಥಳೀಯವಾಗಿ ಬೇಡಿಕೆ ಇರುವ, ಸುಲಭವಾಗಿ ನಿರ್ವಹಿಸಬಹುದಾದ ಗಿಡಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿದೆ.
ನ್ಯಾಯಯುತಗಳಿಕೆಗೆ ತರಬೇತಿ
ನ್ಯಾಯಯುತ ಗಳಿಕೆಗೆ ಕೈದಿಗಳಿಗೆ ತರಬೇತಿ ಕೊಡಿಸಬೇಕೆಂದು ಇಲಾಖೆಯ ನಿರ್ದೇಶನವಿದ್ದು, ಅದರಂತೆ ಮಂಗಳೂರು ಕಾರಾಗೃಹದ ವಿಚಾರಣಾಧೀನ ಕೈದಿಗಳಿಗೆ ಜಿಲ್ಲಾಡಳಿತದ ಸಹಕಾರದೊಂದಿಗೆ ನರ್ಸರಿ, ಟೈಲರಿಂಗ್, ಕಂಪ್ಯೂಟರ್ ತರಬೇತಿ ನೀಡುವ ಉದ್ದೇಶವಿದೆ. ಹಾಸನ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕನಾಗಿದ್ದಾಗ ವರ್ಷಕ್ಕೆ 1ರಿಂದ 2,000ದಷ್ಟು ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಿದ್ದೆವು. ಅದೇರೀತಿ ಮಂಗಳೂರಿನಲ್ಲಿಯೂ ಗಿಡ ಬೆಳೆಸುವ ಯೋಚನೆ ಇದೆ.
– ಬಿ.ಟಿ. ಓಬಳೇಶಪ್ಪ, ಅಧೀಕ್ಷಕರು, ಜಿಲ್ಲಾ ಕಾರಾಗೃಹ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.