ಕಸ ವಿಲೇವಾರಿಗೆ ಜಾಗದ ಸಮಸ್ಯೆ
ಮಾರುಕಟ್ಟೆ, ಪಟ್ಟಣ ಪಂಚಾಯತ್‌ನ ಎದುರೇ ರಾಶಿ ಬಿದ್ದ ಕಸ
Team Udayavani, Oct 14, 2022, 2:11 PM IST
ಬಜಪೆ: ಬಜಪೆ ಪಟ್ಟಣ ಪಂಚಾಯತ್‌ಗೆ ಕಸವಿಲೇವಾರಿಯೇ ಒಂದು ದೊಡ್ಡ ಸಮಸ್ಯೆ. ಸ್ಥಳದ ಸಮಸ್ಯೆಯಿಂದಾಗಿ ಎಲ್ಲ ವ್ಯವಸ್ಥೆಗಳಿಗೆ ತೊಡಕಾಗಿದೆ. ತ್ಯಾಜ್ಯ ಘಟಕಕ್ಕೆ ಕೆಂಜಾರಿ ನಲ್ಲಿ ಜಾಗ ಕಾಯ್ದಿರಿಸಿದ್ದು ಆದರೆ ಈಗ ಖಾಸಗಿ ಜಾಗ ಎಂಬ ವಿರೋಧವಿದೆ. ಮೂರು ಕಡೆಗಳಲ್ಲಿ ತ್ಯಾಜ್ಯ ವಿಲೇ ವಾರಿ ಘಟಕಕ್ಕೆ ಜಾಗ ಪರಿಶೀಲನೆ ಮಾಡ ಲಾಗಿದೆ. ಯಾವುದೇ ಅಂತಿಮ ಹಂತ ತಲುಪಿಲ್ಲ. ತ್ಯಾಜ್ಯ ಘಟಕ ವಾಗದೇ ಇಲ್ಲಿ ಸಮಸ್ಯೆ ತೀರದು. ಶೀಘ್ರ ಘಟಕ ನಿರ್ಮಾಣವಾಗಬೇಕಾಗಿದ್ದು, ಇಲ್ಲದಿದ್ದಲ್ಲಿ ರಸ್ತೆಯಲ್ಲಿಯೇ ತ್ಯಾಜ್ಯ ಸಂಗ್ರಹವಾಗುವ ಸಾಧತ್ಯೆಗಳಿವೆ.
ಸೆ. 1ರಿಂದ ಟಿಪ್ ಸೆಶೆನ್ಸ್ ಎಂಬ ಕುಂದಾಪುರ ಕಂಪೆನಿ ಯೊಂದು ಬಜಪೆ ಪಟ್ಟಣ ಪಂಚಾ ಯತ್‌ನ ತ್ಯಾಜ್ಯ ವಿಲೇವಾರಿಯನ್ನು ವಹಿಸಿಕೊಂಡಿತ್ತು. ಕಸವಿಲೇವಾರಿಗೆ ಬಜಪೆ ಪಟ್ಟಣ ಪಂಚಾಯತ್ ದೊಡ್ಡ ವಾಹನ ಹಾಗೂ ಜಾಗದ ವ್ಯವಸ್ಥೆಯನ್ನು ನೀಡುವ ಭರವಸೆಯಿಂದ ಈ ಸಂಸ್ಥೆ ತ್ಯಾಜ್ಯ ವಿಲೇವಾರಿಗೆ ಮುಂದಾಗಿತ್ತು.
ಒಣ ಕಸ ವಿಲೇವಾರಿ
ಒಟ್ಟು 6 ಮಂದಿ ಟಿಪ್ ಸೆಶನ್‌ನ ಸಿಬಂದಿ ದಿನ ಒಣ ಕಸವನ್ನು ಬೇರ್ಪಡಿಸಿ ಈಗಾಗಲೇ ಒಂದು ಲೋಡ್‌ನಷ್ಟು ಒಣ ಕಸ ವಿಲೇವಾರಿ ಮಾಡಿತ್ತು. ಮಾರುಕಟ್ಟೆಯ ಹಸಿ ಕಸಗಳನ್ನು ಪಟ್ಟಣ ಪಂಚಾಯತ್ ಸಮೀಪದಲ್ಲಿಯೇ ಇರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗಿತ್ತು. ಈಗ ಅದು ತುಂಬಿದೆ.
ಇತ್ತ ಹಸಿ ಕಸ ವಿಲೇವಾರಿಗೆ ಜಾಗದ ಸಮಸ್ಯೆಯಾಗಿದ್ದು ಹಸಿಕಸ ವಿಲೇವಾರಿಯಾಗದೇ ಕೈಕಟ್ಟಿ ಕುಳಿತು ಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಇದೆ. ಪಟ್ಟಣ ಪಂಚಾಯತ್ ಎದುರು, ಮಾರುಕಟ್ಟೆ ಒಳಗೆ ಒಂದು ವಾರದಿಂದ ಹಸಿ ಹಾಗೂ ಒಣ ಕಸದ ರಾಶಿ ಬಿದ್ದಿದೆ. ವಿಲೇವಾರಿಯಾಗದೆ ದುರ್ನಾತ ಬೀರುತ್ತಿದೆ. ಹಸಿಕಸ ಹಾಗೂ ಒಣ ಕಸ ಒಟ್ಟಿಗೆ ಹಾಕಿದ ಕಾರಣ ಇದರ ವಿಂಗಡಣೆ ಬಹಳ ಕಷ್ಟವಾಗಿದೆ.ಇಲ್ಲದಿದ್ದಲ್ಲಿ ಒಣ ಕಸವಾದರೂ ವಿಲೇವಾರಿಯಾಗುತ್ತಿತ್ತು.
ಹಸಿ ಹಾಗೂ ಒಣ ಕಸ ಬೇರೆ ಬೇರೆಯಾಗಿ ಕೊಟ್ಟಲ್ಲಿ ಒಣ ಕಸದ ವಿಲೇವಾರಿಯಾದರೂ ಆಗುತ್ತದೆ. ಕಸ ವಿಲೇವಾರಿಗೆ ಶೀಘ್ರ ಬಜಪೆ ಪಟ್ಟಣ ಪಂಚಾಯತ್‌ಗೆ ಜಾಗವನ್ನು ತುರ್ತಾಗಿ ಕಾಯ್ದಿರಿಸಿ,ಅಲ್ಲಿ ಘಟಕ ನಿರ್ಮಾಣ ವಾಗಲೆಬೇಕಾಗಿದೆ. ಬೆಳೆಯುತ್ತಿರುವ ಬಜಪೆ ಪಟ್ಟಣ ಪಂಚಾಯತ್‌ಗೆ ತ್ಯಾಜ್ಯ ವಿಲೇವಾರಿ ಘಟಕ ಆವಶ್ಯಕತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.