Mangaluru: “ತಾರತಮ್ಯದ ಕಾರ್ಯಾಚರಣೆ’ ಎಂದು ಆರೋಪಿಸಿ ಪ್ರತಿಭಟನೆ
ಅನಧಿಕೃತ ಬೀದಿಬದಿ ವ್ಯಾಪಾರ ತೆರವು ಮುಂದುವರಿಕೆ
Team Udayavani, Aug 3, 2024, 3:00 PM IST
ಸ್ಟೇಟ್‌ಬ್ಯಾಂಕ್: ನಗರದಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿಸುವ ಟೈಗರ್ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು.
ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದ ಎದುರಿನಲ್ಲಿ ಫುಟ್‌ಪಾತ್ ಮೇಲೆ ಅನಧಿಕೃತವಾಗಿ ನಡೆಯುತ್ತಿದ್ದ ಬೀದಿ ಬದಿಯ ವ್ಯಾಪಾರವನ್ನು ತೆರವು ಮಾಡಲಾಯಿತು. ಜತೆಗೆ ಪರವಾನಿಗೆ ಹೊಂದಿದ್ದರೂ ಷರತ್ತುಗಳನ್ನು ಮೀರಿ ವ್ಯಾಪಾರ ನಡೆಯುತ್ತಿದ್ದ ಅಂಗಡಿಯೊಂದರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಯಿತು.
ಹಾಲು, ಹಾಲಿನ ಉತ್ಪನ್ನಗಳನ್ನು ಮಾತ್ರಮಾರಾಟ ಮಾಡಲು ಪರವಾನಿಗೆ ಪಡೆದಿದ್ದಮಿಲ್ಕ್ ಪಾರ್ಲರ್‌ನಲ್ಲಿ ಚಹಾ, ತಿಂಡಿ ಸಹಿತ ಇತರ ವ್ಯಾಪಾರ ಕೂಡ ಮಾಡಿ ನಿಯಮ ಉಲ್ಲಂ ಸುತ್ತಿದ್ದ ಹಿನ್ನೆಲೆಯಲ್ಲಿ ಆ ಪಾರ್ಲರ್‌ನ್ನು ಅಧಿಕಾರಿಗಳು ಸೀಜ್ ಮಾಡಿ ಬೀಗ ಜಡಿದರು. ಅಲ್ಲದೆಅಂಗಡಿಯ ಮೇಲ್ಛಾವಣಿಯ ಭಾಗವೊಂದು ನಿಗದಿತ ಸ್ಥಳವನ್ನು ಮೀರಿ ಫುಟ್‌ಪಾತ್ ಆಕ್ರಮಿಸಿಕೊಂಡಿದ್ದರಿಂದ ಅದನ್ನು ಜೆಸಿಬಿ ಬಳಸಿ ತೆರವುಗೊಳಿಸಿದರು. ಪಾರ್ಲರ್‌ನವರು ಹೊರಭಾಗದಲ್ಲಿ ಇಟ್ಟಿದ್ದ ಫ್ರಿಜ್ ಮತ್ತಿತರ ಪರಿಕರಗಳನ್ನು ಕೂಡ ತೆರವುಗೊಳಿಸಲಾಯಿತು. ಮೂರು ಕೆಎಸ್ ಆರ್‌ಪಿ ತುಕಡಿಗಳ ಸಹಿತವಾಗಿ ಬಂದರು ಠಾಣೆಯ ಪೊಲೀಸರು ಬಂದೋಬಸ್ತ್ ನಡೆಸಿದರು.
ತೆರವಿಗಾಗಿ ಪ್ರತಿಭಟನೆ!
ನಾಲ್ಕು ದಿನಗಳಿಂದ ಅನಧಿಕೃತ ಬೀದಿ ವ್ಯಾಪಾರ ತೆರವಿನ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟಿಸುತ್ತಿದ್ದ ಕೆಲವು ವ್ಯಾಪಾರಸ್ಥರು, ಸಂಘಟನೆಯವರು ಶುಕ್ರವಾರ ಅನಧಿಕೃತ ವ್ಯಾಪಾರ ತೆರವುಗೊಳಿ ಸುವುದಕ್ಕೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ನಡೆ ಸಲಾಗುತ್ತಿದೆ. ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಎದುರಿನ ಮಿಲ್ಕ್ ಪಾರ್ಲರ್‌ವೊಂದನ್ನು ತೆರವುಗೊಳಿ ಸಿಲ್ಲ ಎಂದು ದೂರಿದರು. ಅದನ್ನು ಕೂಡ ತೆರವುಗೊಳಿಸಲೇಬೇಕೆಂದು ಪಾಲಿಕೆಯ ಅಧಿಕಾರಿಗಳನ್ನು ಆಗ್ರಹಿಸಿದರು.
ಮಿಲ್ಕ್ ಪಾರ್ಲರ್‌ಗೆ ಪರವಾನಿಗೆ ಇದೆ ಎಂದು ಅಧಿಕಾರಿಗಳು ಮನವರಿಕೆ ಮಾಡಲು ಯತ್ನಿಸಿದರೂ ಪ್ರತಿಭಟನಕಾರರು ಹಿಂದೆ ಸರಿಯಲಿಲ್ಲ. ನಿಯಮಗಳನ್ನು ಮೀರಿ ವ್ಯಾಪಾರ ನಡೆಸಲಾಗುತ್ತಿದೆ ಎಂದು ದೂರಿದರು.
ಹಾಲು, ಹಾಲಿನ ಉತ್ಪನ್ನಗಳ ಹೊರತಾಗಿ ಇತರ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಮಿಲ್ಕ್ ಪಾರ್ಲರ್‌ನ ಶಟರ್ ಹಾಕಿಸಿ ಬೀಗ ಹಾಕಿ ಸೀಜ್ ಮಾಡಿದರು.
ಪ್ರತಿಭಟನಕಾರರು – ಅಧಿಕಾರಿಗಳ ನಡುವೆ ವಾಗ್ವಾದ
ಬೀದಿ ಬದಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಬಿ.ಕೆ. ಇಮಿ¤ಯಾಜ್, ಸುನೀಲ್ ಕುಮಾರ್ ಬಜಾಲ್ ಮೊದಲಾದವರು ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿಕಾರಿಗಳು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ ನಡೆಯಿತು. ಬೀದಿಬದಿ ವ್ಯಾಪಾರಗಳ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡಲು ಅವಕಾಶ ನೀಡುವುದಿಲ್ಲ ಎಂದು ಇಮ್ತಿಯಾಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.