ಮಳೆ ಬರುವ ಹಾಗಿದೆ; ರಾಜಕಾಲುವೆ ಹೇಗಿದೆ?
ಅತ್ತಾವರ, ಮಂಗಳಾದೇವಿ, ಹೊಯ್ಯ್ಗೆಬಜಾರ್, ಬೋಳಾರ, ಜಪ್ಪು ವಾರ್ಡ್
Team Udayavani, Mar 23, 2022, 11:24 AM IST
ಮಳೆ ಬಂದರೆ ನಗರದ ಬಹುಭಾಗದಲ್ಲಿ ಆತಂಕ. ಯಾಕೆಂದರೆ ಚರಂಡಿ, ರಾಜಕಾಲು ವೆಗಳ ಸಮಸ್ಯೆಯಿಂದಾಗಿ ಮಳೆ ನೀರು ನೆರೆಯಾಗಿ ಎಲ್ಲೆಂದರಲ್ಲಿ ಉಕ್ಕಿ ಉಂಟು ಮಾಡುವ ಸಮಸ್ಯೆ ಅಧಿಕ. ಅದನ್ನು ನಿರ್ವಹಿಸಲು ಮಹಾನಗರ ಪಾಲಿಕೆ ಈಗಿಂದಲೇ ಸನ್ನದ್ಧವಾಗಬೇಕಿದೆ.
ನಗರದ ವಿವಿಧೆಡೆಯಲ್ಲಿ ಕೃತಕ ನೆರೆ ಪೀಡಿತ ಹಲವು ಪ್ರದೇಶಗಳಿವೆ. ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿಗಳಿಗೆ ನಿದ್ದೆಯೇ ಬಾರದು. ಇಂಥ ಸ್ಥಳಗಳ ಪೈಕಿ ಪ್ರಮುಖವಾದುದು ಪಾಂಡೇಶ್ವರ, ಸುಭಾಶ್‌ನಗರ, ಅತ್ತಾವರ ಹಾಗೂ ಜಪ್ಪು ಪ್ರದೇಶ.
ಮುಂಗಾರಿಗೆ ಎರಡು ತಿಂಗಳು ಇರುವಾಗಲೇ ಉದಯವಾಣಿ ‘ಸುದಿನ’ ಆರಂಭಿಸಿರುವ ಅಭಿಯಾನದ ಅಂಗವಾಗಿ ವರದಿಗಾರರ ತಂಡ ಈ ಪ್ರದೇಶದಲ್ಲೇ ಸುತ್ತಾಡಿ ಮಾಹಿತಿ ಸಂಗ್ರಹಿಸಿತು. ಮೇಲ್ನೋಟಕ್ಕೆ ತತ್ ಕ್ಷಣ ಕಂಡುಬಂದ ಅಂಶ ಹಾಗೂ ಕೇಳಿಬಂದ ಜನರ ಅಭಿಪ್ರಾಯವೆಂದರೆ, ಈ ಭಾಗದ ರಾಜಕಾಲುವೆ ಹಾಗೂ ಚರಂಡಿ ಹೂಳೆತ್ತುವ ಕೆಲಸ ಕೂಡಲೇ ಆಗಬೇಕಿದೆ.
ಫಳ್ನೀರ್, ಅತ್ತಾವರ, ಪಾಂಡೇಶ್ವರ ಶಿವನಗರ ಆಗಿ ಹೊಗೆಬಜಾರ್ ಮೂಲಕ ನದಿಗೆ ಸೇರುವ ಬಹುಮುಖ್ಯ ರಾಜಕಾಲುವೆಯೇ ಅತ್ತಾವರ, ಬೋಳಾರ, ಮಂಗಳಾದೇವಿ, ಪಾಂಡೇಶ್ವರ, ಹೊಗೆ ಬಜಾರ್, ಪೋರ್ಟ್ ಸೇರಿದಂತೆ ವಾರ್ಡ್‌ಗಳಿಂದ ಮಳೆನೀರು ಹರಿಯಲು ಇರುವ ಏಕೈಕ ಕಾಲುವೆ. ಸದ್ಯ ಇದರ ವ್ಯಾಪ್ತಿಯಲ್ಲಿ ಹೂಳೆತ್ತುವ ಕೂಡಲೇ ಆಗಬೇಕಿದೆ. ಕಾಲುವೆಯ ಕೆಲವು ಭಾಗದಲ್ಲಿ ಮಾತ್ರ ಬದಿಯಲ್ಲಿ ಎತ್ತರ ಮಾಡಲಾಗಿದೆ; ಉಳಿದೆಡೆ ನೀರು ಉಕ್ಕಿ ನೆರೆಯಂತಾಗಲು ಅನುಕೂಲವಾಗುವ ಪರಿಸ್ಥಿತಿ ಇದೆ.
ಮಂಗಳಾದೇವಿ ಭಾಗದ ಸುಭಾಶ್‌ನಗರ, ಶಿವನಗರದಲ್ಲಿ ನೆರೆ ನೀರಿನ ಸಮಸ್ಯೆ ಕಾಡುತ್ತದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದೂ ಇದಕ್ಕೆ ಮತ್ತೂಂದು ಕಾರಣ. ಇದೂ ದುರಸ್ತಿಯಾಗ ಬೇಕು. ಇನ್ನು ಬೋಳಾರ, ಹೊಗೆಬಜಾರ್ ವ್ಯಾಪ್ತಿ ಯಲ್ಲಿ ದೊಡ್ಡ ಸಮಸ್ಯೆ ಇಲ್ಲವೆಂದು ತೋರುತ್ತದೆ. ಆದರೆ ಮಳೆಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಲೇಬೇಕಿದೆ. ಇಲ್ಲವಾದರೆ ಮುಂದಿನ ಮಳೆಗೆ ಹೊಸ ಪ್ರದೇಶ ಮುಳುಗಡೆ ಖಚಿತ.
ಅತ್ತಾವರ ವಾರ್ಡ್‌ನ ಜಪ್ಪು ಕುಡಾ³ಡಿ ಬಳಿ ರಾಜಕಾಲುವೆಯ ಅಸಮರ್ಪಕ ವ್ಯವಸ್ಥೆಯಿಂದಾಗಿ ಇಕ್ಕೆಲಗಳಲ್ಲೂ ಸಮಸ್ಯೆ ಉದ್ಭವಿಸಿತ್ತು. ನೆರೆ ನೀರಿನಿಂದ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಇದೀಗ ಇಲ್ಲಿನ ರಾಜಕಾಲುವೆಯ ಆಯ್ದ ಭಾಗಗಳಲ್ಲಿ 1.50 ಕೋ.ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದೂ ತ್ವರಿತಗತಿಯಲ್ಲಿ ನಡೆಯಬೇಕಿದೆ.
ರಾಜಕಾಲುವೆಯ ದಾರಿ ಬದಲಾಗಲಿ!
ಜಪ್ಪು ವಾರ್ಡ್‌ನ ಕಟ್ಟೆಪುಣಿ ವ್ಯಾಪ್ತಿಗೆ ಪಂಪ್ ವೆಲ್ ಸೇರಿದಂತೆ ಕೆಲವೆಡೆಯಿಂದ ಮಳೆ ನೀರು ಹರಿದು ಬರುವ ಕಾರಣ, ಒತ್ತಡ ಹೆಚ್ಚು. ಸಂಕಷ್ಟವೂ ಈ ವಾರ್ಡ್‌ನವರಿಗೇ ಹೆಚ್ಚು. ರಾಜಕಾಲುವೆಯ ಎತ್ತರ ಕಡಿಮೆಯಾಗಿದ್ದು, ಸ್ವತ್ಛವೂ ಆಗಿಲ್ಲ. ಸ್ಥಳೀಯ ಕಾರ್ಪೊರೇಟರ್ ಭರತ್ ಕುಮಾರ್ ಅವರ ಪ್ರಕಾರ “ಪೆಗಾಸಸ್’ ಭಾಗ ಸೇರಿದಂತೆ ಬಹುಕಡೆಯಿಂದ ಮಳೆ ನೀರು ಕಟ್ಟೆಪುಣಿ ಭಾಗಕ್ಕೆ ಬರುವುದರಿಂದ ಇಲ್ಲಿನ ರಾಜಕಾಲುವೆಯಲ್ಲಿ ನೀರಿನ ಒತ್ತಡ ಅಧಿಕವಾಗಿದೆ. ಇದಕ್ಕಾಗಿ ಪೆಗಾಸಸ್ ಭಾಗದಿಂದ ನೀರನ್ನು ಜಪ್ಪಿನಮೊಗರು ದ್ವಾರದ ಕಡೆಗೆ ತಿರುಗಿಸಿ ನೇತ್ರಾವತಿಗೆ ಕಳುಹಿಸಿದರೆ ಬಹುತೇಕ ಸಮಸ್ಯೆ ನಿವಾರಣೆಯಾಗುತ್ತದೆ’ ಎನ್ನುತ್ತಾರೆ.
ರಾಜಕಾಲುವೆಯಲ್ಲಿ ಒಳ ಚರಂಡಿಯದ್ದೇ ನೀರು!
ಪಾಂಡೇಶ್ವರ ಭಾಗದಿಂದ ಹರಿದುಬರುವ ರಾಜಕಾಲುವೆಯು ಒಳಚರಂಡಿ ನೀರಿನಿಂದ ಸಂಪೂರ್ಣ ಮಲಿನವಾಗಿದೆ. ಪರಿಣಾಮವಾಗಿ ರಾಜಕಾಲುವೆಯ ನೀರು ನದಿಗೆ ಸೇರುವ ಮೀನುಗಾರಿಕಾ ದಕ್ಕೆಯಲ್ಲಿ ವಾಸನೆ ಹಾಗೂ ಗಲೀಜು ಪರಿಸ್ಥಿತಿಯಿದೆ. ಸ್ಮಾರ್ಟ್ ಸಿಟಿಯ ರಾಜಕಾಲುವೆಗಳ ಸ್ವರೂಪವೂ ಬದಲಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.