Mangaluru: ವ್ಯಾಪಾರಿಗಳ ಪ್ರತಿರೋಧದ ಮಧ್ಯೆಯೇ ಬೀದಿ ಬದಿ ವ್ಯಾಪಾರ ತೆರವು
ಸ್ಟೇಟ್‌ಬ್ಯಾಂಕ್‌ನಲ್ಲಿ ನಾಲ್ಕನೇ ದಿನದ "ಟೈಗರ್' ಕಾರ್ಯಾಚರಣೆ
Team Udayavani, Aug 2, 2024, 3:11 PM IST
ಸ್ಟೇಟ್‌ಬ್ಯಾಂಕ್: ಮೂರು ದಿನಗಳಿಂದ ನಡೆಯುತ್ತಿರುವ ಬೀದಿ ಬದಿಯ ಅನಧಿಕೃತ ವ್ಯಾಪಾರ ತೆರವು ಮಾಡುವ ಟೈಗರ್ ಕಾರ್ಯಾಚರಣೆ ನಾಲ್ಕನೇ ದಿನವಾದ ಗುರುವಾರವೂ ಮುಂದುವರಿದಿದೆ. ಬಿಗಿ ಪೊಲೀಸ್ ಬಂದೋಬಸ್ತ್ನ ನಡುವೆ ಸ್ಟೇಟ್‌ಬ್ಯಾಂಕ್ ಪರಿಸರದ ನೂರಾರು ಬೀದಿ ಬದಿಯ ಅನಧಿಕೃತ ವ್ಯಾಪಾರವನ್ನು ಮಂಗಳೂರು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಜೀವನ ಸಾಗಿಸಲು ವರವಾಗಿದ್ದ ಅಂಗಡಿಗಳನ್ನು ಕಳೆದುಕೊಂಡ ವ್ಯಾಪಾರಿಗಳು ಕಣ್ಣೀರಿನೊಂದಿಗೆ ಪಾಲಿಕೆ ಧೋರಣೆಗೆಆಕ್ಷೇಪ ವ್ಯಕ್ತಪಡಿಸಿದರು.
ವ್ಯಾಪಾರಿಗಳ ಪ್ರತಿಭಟನೆಯ ನಡುವೆಯೂ ಮಂಗಳೂರು ಪುರಭವನ ವ್ಯಾಪ್ತಿಯಿಂದ ಆರಂಭವಾಗಿ ಸ್ಟೇಟ್‌ಬ್ಯಾಂಕ್ ಪರಿಸರ, ಸೆಂಟ್ರಲ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಯಿತು. ಸೀಯಾಳ ಮಾರಾಟದ ಗಾಡಿಗಳು, ಫಾಸ್ಟ್ ಫುಡ್, ಜ್ಯೂಸ್, ಪಾನಿಪುರಿ, ಆಮ್ಲೆಟ್ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಬೀದಿ ಬದಿಯಲ್ಲಿ ಟೇಬಲ್ ಇಟ್ಟು ವ್ಯಾಪಾರ ಮಾಡುವವರನ್ನೂ ತೆರವು ಮಾಡಲಾಯಿತು.
ವ್ಯಾಪಾರಿಗಳ ತೆರವು ಮಾಡುವ ಕಾರ್ಯಾಚರಣೆ ಸಂದರ್ಭ ಸ್ಟೇಟ್ ಬ್ಯಾಂಕ್ ಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಕೆಲವರು ಐಡಿ ಕಾರ್ಡ್ ಇಟ್ಟು ವ್ಯಾಪಾರ ನಡೆಸುತ್ತ ಪ್ರತಿಭಟನೆ ನಡೆಸಿದರು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರರು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ಕೆಲವು ಹೊತ್ತು ವಾಗ್ವಾದ ನಡೆಯಿತು. “ಬಡವರ ಹೊಟ್ಟೆಗೆ ಪಾಲಿಕೆ ಹೊಡೆಯುತ್ತಿದೆ.
ಬೀದಿ ಬದಿ ವ್ಯಾಪಾರಕ್ಕೆ ಕಾರ್ಡ್ ನೀಡಿ ಈಗ ತೆರವುಗೊಳಿಸುತ್ತಿರುವುದು ಯಾವ ನ್ಯಾಯ? ಪಾಪದವರ ಮೇಲೆ ನಿಮ್ಮ ಪೌರುಷ ನ್ಯಾಯವೇ?’ ಎಂದು ವ್ಯಾಪಾರಿಗಳು ಪ್ರಶ್ನಿಸಿದರು. ಆಕ್ಷೇಪ ಜಾಸ್ತಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಠಾಣೆಗೆ ಕರೆದೊಯ್ದರು.
ಐಡಿ ಕಾರ್ಡ್ ಕೊಟ್ಟು ವ್ಯಾಪಾರ ಕಸಿದರು!
“ಸುದಿನ’ ಜತೆಗೆ ಮಾತನಾಡಿದ ಬೀದಿಬದಿ ವ್ಯಾಪಾರಿಗಳ ಸಂಘಟನೆ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಅವರು “ಐಡಿ ಕಾರ್ಡ್ ಕೊಟ್ಟು ವ್ಯಾಪಾರಕ್ಕೆ ಅವಕಾಶ ಇದ್ದವರನ್ನೂ ಪಾಲಿಕೆ ತೆರವು ಮಾಡುತ್ತಿದೆ. ಸ್ಟೇಟ್‌ಬ್ಯಾಂಕ್‌ನ ಒಳಭಾಗದಲ್ಲಿ ಸುಮಾರು 10ರಷ್ಟು ವ್ಯಾಪಾರಿಗಳನ್ನು ತೆರವು ಮಾಡದೆ ಬಡವರನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಬಡವರ ಹೊಟ್ಟೆಗೆ ಅನ್ಯಾಯ ಮಾಡುವ ಪಾಲಿಕೆ ಆಡಳಿತದ ಧೋರಣೆ ಖಂಡನೀಯ. ತೆರವು ಕಾರ್ಯಾ ಚರಣೆಯನ್ನು ತತ್‌ಕ್ಷಣವೇ ನಿಲ್ಲಿಸಬೇಕು.ಬಡವರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ನಿಲ್ಲಿಸಿ’ ಎಂದರು.
“ವ್ಯಾಪಾರಿಗಳನ್ನು ನಿರಾಶ್ರಿತರನ್ನಾಗಿ ಸುವುದು ನಮ್ಮ ಉದ್ದೇಶವಲ್ಲ. ನಗರ ಸ್ವತ್ಛತೆ, ಜನರ ಆರೋಗ್ಯ ಹಿತದೃಷ್ಟಿ, ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಮುಂಚಿತವಾಗಿ ತಿಳಿಸಿಯೇ ಮಾಡಲಾಗಿದೆ’ ಎಂದು ಪಾಲಿಕೆಯ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.
ಇಂದು ಪ್ರತಿಭಟನೆ
ಸರ್ವಿಸ್ ಬಸ್ ನಿಲ್ದಾಣದ ಒಳಗೆ ಶಾಶ್ವತ ಸಂರಚನೆಯ ಅಂಗಡಿಗಳನ್ನು ತೆರವುಗೊಳಿಸದೆ ಬಡ ಬೀದಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಆ. 2ರಂದು ಬೆಳಗ್ಗೆ 10ಕ್ಕೆ ಸರ್ವಿಸ್ ಬಸ್ ನಿಲ್ದಾಣದ ಬಳಿ ಅಂಗಡಿಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪ್ರ.ಕಾರ್ಯದರ್ಶಿ ಹರೀಶ್ ಪೂಜಾರಿ ತಿಳಿಸಿದ್ದಾರೆ.
ವ್ಯಾಪಾರಕ್ಕೆ ಪ್ರತ್ಯೇಕ ವಲಯ
ಬೀದಿ ಬದಿ ವ್ಯಾಪಾರದಿಂದಾಗುವ ಸಮಸ್ಯೆ ಹಾಗೂ ಅದನ್ನು ತೆರವು ಮಾಡುವಂತೆ ಪಾಲಿಕೆಯ ಪ್ರತೀ ಸಾಮಾನ್ಯ ಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರು ಆಗ್ರಹಿಸುತ್ತಿದ್ದರು. ಮಾರ್ಗದ ಬದಿಯಲ್ಲಿ ಅಸುರಕ್ಷಿತ ಮಾದರಿಯಲ್ಲಿ ತಿಂಡಿ-ತಿನಿಸು ವ್ಯಾಪಾರ ಮಾಡುವುದು, ಅದರಿಂದ ಡೆಂಗ್ಯೂ, ಮಲೇರಿಯಾ ಸಹಿತ ರೋಗಗಳಿಗೆ ಕಾರಣವಾಗುವ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದರು. ಫುಟ್‌ಪಾತ್‌ನಲ್ಲಿ ಜನರಿಗೆ ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಬಗ್ಗೆ ಜನರು ದೂರು ನೀಡಿದ್ದರು. ಈ ಕಾರಣದಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲ ಅನಧಿಕೃತ ಬೀದಿ ಬದಿ ವ್ಯಾಪಾರ ತೆರವು ಮಾಡಿದ ಅನಂತರ ಜನರಿಗೆ ತೊಂದರೆ ಆಗದಂತೆ ಎಲ್ಲ ವಾರ್ಡ್‌ಗಳ ಸರ್ವೇ ನಡೆಸಿ ಪ್ರತ್ಯೇಕ ವ್ಯಾಪಾರಿ ವಲಯ ರಚಿಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು.
– ಸುಧೀರ್ ಶೆಟ್ಟಿ ಕಣ್ಣೂರು,ಮೇಯರ್, ಮಂಗಳೂರು ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.