ಪಾಲಿಕೆ 60 ಸದಸ್ಯರ ಪ್ರತಿ ತಿಂಗಳ ಒಟ್ಟು ಸಂಭಾವನೆ 3.72 ಲಕ್ಷ ರೂ.
4 ವರ್ಷಗಳಿಂದ ಮಾಸಿಕ 6 ಸಾವಿರ ರೂ. ಗೌರವಧನ
Team Udayavani, Nov 24, 2019, 4:28 AM IST
ಮಹಾನಗರ: ಜನರಿಂದ ಚುನಾಯಿತರಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳಿಗೆ ತಿಂಗಳಿಗೆ ಒಟ್ಟು 3.72 ಲಕ್ಷ ರೂ. ಮಾಸಿಕ ವೇತನ ನೀಡಲಾಗುತ್ತದೆ. ಅದರಂತೆ, ನಾಲ್ಕು ವರ್ಷಗಳ ಹಿಂದೆ ತಲಾ 2,100 ರೂ. ಪಡೆಯುತ್ತಿದ್ದ ಕಾರ್ಪೊ ರೇಟರ್‌ಗಳಿಗೆ ಈಗ ತಲಾ 6 ಸಾವಿರ ರೂ. ಗೌರವಧನ ದೊರೆಯುತ್ತದೆ.
ಈ ಮಧ್ಯೆ ಪಾಲಿಕೆಯ ಮೇಯರ್ ಅವರಿಗೆ ತಿಂಗಳಿಗೆ 16 ಸಾವಿರ ರೂ. ,ಉಪ ಮೇಯರ್ ಅವರಿಗೆ ತಿಂಗಳಿಗೆ 10 ಸಾವಿರ ರೂ. ಗೌರವಧನ ದೊರೆಯುತ್ತದೆ. ಮಂಗಳೂರು ಸಹಿತ ಕಲಬುರ್ಗಿ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಪಾಲಿಕೆಗಳ ಕಾರ್ಪೊರೇಟರ್‌ಗಳು ಪಾಲಿಕೆ ಆರಂಭವಾ ದಂದಿನಿಂದ 2,100 ರೂ. ಗೌರವಧನ ಪಡೆಯುತ್ತಿದ್ದರು. ಆದರೆ ಗೌರವಧನ ಹೆಚ್ಚಳ ಮಾಡಲು ಸರಕಾರಕ್ಕೆ ಒತ್ತಡ ಹೇರಿದ ಪರಿಣಾಮ 2016ರಲ್ಲಿ ಕಾರ್ಪೊರೇಟರ್‌ಗಳ ಮಾಸಿಕ ಗೌರವಧನದ ಮೊತ್ತವನ್ನು 6 ಸಾವಿರ ರೂ.ಗಳಿಗೆ ಏರಿಸಲಾಗಿತ್ತು. ಮನಪಾ ಮೇಯರ್, ಉಪ ಮೇಯರ್‌ಗೆ ಕ್ರಮವಾಗಿ 16 ಸಾವಿರ ರೂ. ಮತ್ತು 10 ಸಾವಿರ ರೂ. ಗಳಾದರೆ ಉಳಿದ 58 ಮಂದಿ ಕಾರ್ಪೊರೇಟರ್‌ಗಳಿಗೆ 6 ಸಾವಿರ ರೂ. ಮಾಸಿಕ ಗೌರವಧನವಾಗಿ ಸಿಗುತ್ತದೆ.
ರಾಜ್ಯ ಸರಕಾರದ ನಿಯಮಾವಳಿ ಪ್ರಕಾರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಿಗೆ ಗೌರವಧನದ ವೆಚ್ಚವನ್ನು ಆಯಾಯ ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲಗಳಿಂದಲೇ ಭರಿಸ ಬೇಕಾಗಿರುವುದರಿಂದ ಜನಪ್ರತಿನಿ ಧಿಗಳಿಗೂ ಪಾಲಿಕೆಯ ಹಣದಿಂದಲೇ ಗೌರವಧನ ನೀಡಲಾಗುತ್ತಿದೆ.
ಪಾಲಿಕೆಯ ಕೌನ್ಸೆಲ್ ಸಭೆಗಳಿಗೆ ಹಾಜ ರಾಗುವ ಎಲ್ಲ ಸದಸ್ಯರಿಗೆ 100 ರೂ.ಗಳನ್ನು ನೀಡಲಾಗುತ್ತದೆ. ತಿಂಗಳಲ್ಲಿ ಗರಿಷ್ಠ ಎರಡು ಕಮಿಟಿ ಮೀಟಿಂಗ್‌ಗಳಿಗೆ 800 ರೂ.ಗಳನ್ನು ನೀಡಲಾಗುತ್ತದೆ. ಎರಡಕ್ಕಿಂತ ಹೆಚ್ಚು ಮೀಟಿಂಗ್ ನಡೆದರೆ ಭತ್ಯೆ ನೀಡಲಾಗುವುದಿಲ್ಲ. ಸ್ಥಾಯೀ ಸಮಿತಿ ಸದಸ್ಯರಿಗೆ ಪ್ರತಿ ಸಭೆಗಳಿಗೆ ವಾಹನ ಭತ್ಯೆಯೆಂದು 300 ರೂ. ನೀಡಲಾಗುತ್ತದೆ. ಇವೆಲ್ಲವೂ ಪಾಲಿಕೆಯ ಸಂಪನ್ಮೂಲದಿಂದಲೇ ನೀಡಲಾಗುತ್ತದೆ. ಇದರೊಂದಿಗೆ ಬೆಂಗಳೂರು ಅಥವಾ ಇತರ ಕಡೆಗಳಲ್ಲಿ ಪಾಲಿಕೆ ಸಂಬಂಧಿಸಿ ಯಾವು ದಾ ದರೂ ಸಭೆಗಳಲ್ಲಿ ಭಾಗವಹಿಸಲು ಇದ್ದಲ್ಲಿ ಅದಕ್ಕೆಂದೇ ವಿಶೇಷ ಭತ್ಯೆಗಳು ಸದಸ್ಯರಿಗೆ ಇರುತ್ತದೆ. ಮೇಯರ್, ಉಪಮೇಯರ್ ಮತ್ತು ನಾಲ್ವರು ಸ್ಥಾಯೀ ಸಮಿತಿ ಅಧ್ಯಕ್ಷರಿಗೆ ಪಾಲಿಕೆ ವತಿಯಿಂದ ವಾಹನ ನೀಡಲಾಗುವುದರಿಂದ ಅವರಿಗೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ವರಮಾನ ಆಧರಿಸಿ ಗೌರವಧನ!
ಗೌರವಧನ ನೀಡುವಿಕೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಭಿನ್ನವಾಗಿರುತ್ತದೆ. ಸರಕಾರ ನಿಗದಿಪಡಿಸಿದಂತೆ ವಾರ್ಷಿಕ 5 ಕೋಟಿ ರೂ. ಮೇಲ್ಪಟ್ಟ ವರಮಾನ ಇರುವ ನಗರಸಭೆ ಅಧ್ಯಕ್ಷರಿಗೆ 12 ಸಾವಿರ ರೂ., ಉಪಾಧ್ಯಕ್ಷರಿಗೆ 8 ಸಾವಿರ ರೂ., ಸದಸ್ಯರಿಗೆ 4 ಸಾವಿರ ರೂ. ಗೌರವಧನವಿದ್ದರೆ, 5 ಕೋಟಿ ರೂ.ಗಿಂತ ಕಡಿಮೆ ವರಮಾನ ಇರುವ ನಗರಸಭೆಗಳ ಅಧ್ಯಕ್ಷರಿಗೆ 8 ಸಾವಿರ ರೂ., ಉಪಾಧ್ಯಕ್ಷರಿಗೆ 2 ಸಾವಿರ ರೂ., ಸದಸ್ಯರಿಗೆ 2 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ. ಪುರಸಭೆಗಳ ಅಧ್ಯಕ್ಷರು 4,800 ರೂ., ಉಪಾಧ್ಯಕ್ಷರು 2,400 ರೂ., ಸದಸ್ಯರು 1200 ರೂ. ಮತ್ತು ಪಟ್ಟಣ ಪಂಚಾಯತ್ ಅಧ್ಯಕ್ಷರು 3,200 ರೂ., ಉಪಾಧ್ಯಕ್ಷರು 1,600 ರೂ., ಸದಸ್ಯರು 800 ರೂ. ಗೌರವಧನವನ್ನು ಮಾಸಿಕವಾಗಿ ಪಡೆಯುತ್ತಿದ್ದಾರೆ.
ಗೌರವಧನ ಹೆಚ್ಚಳ
ಪರಿಷ್ಕೃತ ಆದೇಶದಂತೆ 2016ರಿಂದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಗೌರವಧನ ಹೆಚ್ಚಳವಾಗಿದ್ದು, ಪಾಲಿಕೆಯ ಸಂಪನ್ಮೂಲದಿಂದಲೇ ಭರಿಸಲಾಗುತ್ತದೆ. ಸರಕಾರ ದಿಂದ ಅನುದಾನ ಬಿಡುಗಡೆಯಾಗುವುದಿಲ್ಲ.
- ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತರು, ಮನಪಾ
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.