ಕೋಟೆಕಾರು: ರಿಕ್ಷಾದ ಮೇಲೆ ಬಿದ್ದ ಮರ
Team Udayavani, Apr 23, 2019, 6:15 AM IST
ಉಳ್ಳಾಲ: ಚಲಿಸುತ್ತಿದ್ದ ರಿಕ್ಷಾದ ಮೇಲೆ ಮರ ಬಿದ್ದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ಬಳಿ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ರಿಕ್ಷಾದಲ್ಲಿದ್ದ ಐವರು ಪಾರಾಗಿದ್ದಾರೆ.
ಮರ ಬೀಳುತ್ತಿದ್ದಂತೆ ರಿಕ್ಷಾ ಚಾಲಕ ಉಮೇಶ್ ಪೂಜಾರಿ ಅವರು ಹಠಾತ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ರಿಕ್ಷಾದ ಮುಂಭಾಗ ಮಾತ್ರ ಹಾನಿಗೀಡಾಗಿದೆ.
ಘಟನೆಯ ವಿವರ
ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳಿದ್ದ ಕುಟುಂಬದ ಸದಸ್ಯರು ತಲಪಾಡಿಯಿಂದ ಸೋಮೇಶ್ವರ ಕಡೆ ಸಂಚರಿಸಲು ತಲಪಾಡಿ ರಿಕ್ಷಾ ಪಾರ್ಕ್‌ನಿಂದ ಉಮೇಶ್ ಪೂಜಾರಿಯವರ ರಿಕ್ಷಾ ಹತ್ತಿದ್ದರು. ಹೆದ್ದಾರಿ ಮೂಲಕ ಸಾಗಿ ಕೋಟೆಕಾರು ಬಳಿ ಸೋಮೇಶ್ವರದ ಒಳರಸ್ತೆಗೆ ತಿರುಗಿಸಿದ ಕೆಲವೇ ಕ್ಷಣಗಳಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಬಳಿ ಘಟನೆ ಸಂಭವಿಸಿದೆ. ಬ್ರೇಕ್ ಹಾಕಿದ್ದರಿಂದ ಮರದ ಗೆಲ್ಲೊಂದು ರಿಕ್ಷಾದ ಮುಂಭಾಗಕ್ಕೆ ತಗುಲಿ ಹಾನಿಯಾಗಿದೆ. ಚಾಲಕ ಮತ್ತು ಐವರು ಪ್ರಯಾಣಿಕರು ಪಾರಾದರು.
ಸ್ಥಳೀಯರು ಧಾವಿಸಿ ರಿಕ್ಷಾದಲ್ಲಿದ್ದವರನ್ನು ರಕ್ಷಿಸಿದರು.
ಸಂಚಾರ ಅಸ್ತವ್ಯಸ್ತ
ಘಟನೆ ಬಳಿಕ ಕೋಟೆಕಾರು ಮಾರ್ಗವಾಗಿ ಸೋಮೇಶ್ವರ, ಉಳ್ಳಾಲ ಕಡೆಗೆ ಸಂಚಾರ ವ್ಯತ್ಯಯವಾಯಿತು. ಉಳ್ಳಾಲ ಪೊಲೀಸರು ಹಾಗೂ ಸ್ಥಳೀಯ ಮೆಸ್ಕಾಂ ಸಿಬಂದಿ ಸೇರಿ ಸುಮಾರು 2 ಗಂಟೆ ಶ್ರಮಿಸಿ ಸಂಚಾರ ಸುಗುಮಗೊಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.