ನಾಲ್ಕನೇ ತರಗತಿಯಲ್ಲೇ ಸೈನಿಕನಾಗ್ತೀನಿ ಅಂತಿದ್ದ ಈ ಹುಡುಗ !
Team Udayavani, Feb 23, 2018, 5:18 PM IST
ದೊಡ್ಡವರಾದಾಗ ಹಾಗಾಗಬೇಕು… ಹೀಗಾಗಬೇಕು… ಎಂಬ ಕನಸು ಎಲ್ಲರಲ್ಲೂ ಇರುತ್ತದೆ. ಆದರೆ ದೇಶಸೇವೆ ಮಾಡಬೇಕು, ಸೈನಿಕನಾಗಬೇಕು ಎಂಬ ಛಲ ಹೊಂದಿದ್ದ ಬಾಲಕನಿಗೆ ತಾಯಿ ಬೆಂಬಲವಾಗಿ ನಿಂತರು. ಪರಿಣಾಮ ಅವರು ಎಲ್ಲರೂ ಹೆಮ್ಮೆ ಪಡುವಂತೆ ಯೋಧರಾದರು.
ಮಹಾನಗರ : ಓದಿ ದೊಡ್ಡವನಾದ ಮೇಲೆ ಏನಾಗ್ತೀಯಾ..? ಅಂತ ಶಾಲೆಯಲ್ಲಿ ಮೇಷ್ಟ್ರು ಕೇಳಿದಾಗ ಒಬ್ಬೊಬ್ಬರು ಡಾಕ್ಟರ್, ಎಂಜಿನಿಯರ್ ಎಂದೆಲ್ಲ ಹೇಳುತ್ತಿದ್ದರೆ, ಆ ಹುಡುಗ ‘ನಾನು ಸೈನಿಕನಾಗ್ತೀನಿ’ ಅಂತ ಹೇಳಿದ್ದ. ಹೀಗೆ ಬಾಲ್ಯದಲ್ಲೇ ಮೂಡಿದ ದೇಶಸೇವೆ ಕನಸನ್ನು ನನಸು ಮಾಡಿದವರು ಬಂಟ್ವಾಳ ತಾಲೂಕು ಉಳಿ ಗ್ರಾಮದ ಮಲ್ಯೋಡಿ ಮನೆಯ ಹರ್ಷಿತ್ ಕೆ. ಅವರು. ಕಳೆದ 7 ವರ್ಷಗಳಿಂದ ಅವರು ದೇಶಸೇವೆಯಲ್ಲಿ ನಿರತರಾಗಿದ್ದಾರೆ.
ಅಜಿಲಮೊಗರು ಕುಟ್ಟಿಕಲ್ಲು ಪ್ರಾಥಮಿಕ ಶಾಲೆ, ಬೆಳ್ತಂಗಡಿ ಪದ್ಮುಂಜ ಸ.ಹಿ.ಪ್ರಾ. ಶಾಲೆ, ಕಕ್ಕೆಬೀಡು ಪಂಚದುರ್ಗಾ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಬಳಿಕ ಹರ್ಷಿತ್ ಬಂಟ್ವಾಳ ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರೈಸಿದ್ದಾರೆ. ಹರ್ಷಿತ್ 4ನೇ ತರಗತಿಯಲ್ಲಿರುವಾಗಲೇ ಅವರ ತಂದೆ ಕೃಷ್ಣಪ್ಪ ಪೂಜಾರಿಯವರು ನಿಧನ ಹೊಂದಿದ್ದರು. ಬಳಿಕ ಮಲ್ಯೋಡಿಯ ಅಜ್ಜಿ ಮನೆಯಲ್ಲೇ ಬೆಳೆದವರು. ಹರ್ಷಿತ್ ಅವರ ತಂಗಿ ಮತ್ತು ಹರ್ಷಿತ್ ಅವರನ್ನು ಅವರ ತಾಯಿ ಡೀನಾಕ್ಷಿ ಅವರೇ ಸುಶಿಕ್ಷಿತರನ್ನಾಗಿ ಮಾಡಿದರು. ಡೀನಾಕ್ಷಿ ಅವರೀಗ ಉಳಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯೂ ಹೌದು.
ಪಿಯುಸಿಯಲ್ಲಿದ್ದಾಗ ಸೇನೆಗೆ
ಹರ್ಷಿತ್ ದೇಶಪ್ರೇಮದ ತುಡಿತ ಅವರನ್ನು ಪಿಯುಸಿಯಲ್ಲಿದ್ದಾಗಲೇ ಸೇನೆಗೆ ಸೆಳೆಯಿತು. ಶಾಲಾ ದಿನಗಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಜಾವೆಲಿನ್ ತ್ರೋ, ಡಿಸ್ಕಸ್ ತ್ರೋ ಮುಂತಾದ ಕ್ರೀಡೆಗಳಲ್ಲಿ ಸದಾ ಮುಂದಿರುತ್ತಿದ್ದರು. ಮೊದಲ ಯತ್ನದಲ್ಲಿ ಅವರು ಸೇರ್ಪಡೆಯಾಗದಿದ್ದರೂ ಪಿಯುನಲ್ಲಿದ್ದಾಗ ಎರಡನೇ ಬಾರಿ ಪ್ರಯತ್ನಿಸಿ ಆಯ್ಕೆಯಾದರು. 2010 ಸೆ. 18ರಂದು ನೇಮಕಗೊಂಡಿದ್ದರು.
ಅಮ್ಮನೇ ಸ್ಫೂರ್ತಿ
ಹರ್ಷಿತ್ ದೇಶಸೇವೆ ಮಾಡಲು ಹೋಗಿದ್ದರ ಹಿಂದಿರುವುದು ಅವರ ತಾಯಿ ಡೀನಾಕ್ಷಿ. ಏಕೈಕ ಪುತ್ರನನ್ನು ಸೇನೆಗೆ ಕಳುಹಿಸಬೇಡಿ ಎಂದು ಇತರರು ಹೇಳಿದರೂ ಮಗನನ್ನು ಅವರು ದೇಶಸೇವೆಗೆ ಅರ್ಪಿಸಿದ್ದರು. ‘ರಾಷ್ಟ್ರರಕ್ಷಣೆ ಮಾಡುವ ನನ್ನ ಕನಸಿನ ಹಿಂದೆ ಅಮ್ಮನ ಶ್ರಮವಿದೆ. ನನ್ನ ಇಡೀ ಬದುಕಿಗೆ ಅವರು ಸ್ಫೂರ್ತಿದಾತೆ’ ಎನ್ನುತ್ತಾರೆ ಹರ್ಷಿತ್.
ವಿವಿಧೆಡೆ ದೇಶಸೇವೆ
ಸಿಪಾಯಿಯಾಗಿ ಉತ್ತರ ಪ್ರದೇಶದಲ್ಲಿ ನಿಯುಕ್ತಿಗೊಂಡ ಹರ್ಷಿತ್ ಅವರು ಬಳಿಕ 2 ವರ್ಷ ಸಿಯಾಚಿನ್, 2 ವರ್ಷ ಪಂಜಾಬ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಪೂನಾದಲ್ಲಿ ನಾಯಕ್ ಹುದ್ದೆಯಲ್ಲಿದ್ದಾರೆ. ಸೇವೆಯಲ್ಲಿರುವಾಗಲೇ ಖಾಸಗಿಯಾಗಿ ಪದವಿ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ.
ತುರ್ತು ಕರೆಗೆ ಹೋದೆ
ಪಂಜಾಬ್‌ನಲ್ಲಿದ್ದಾಗ ರಜೆ ಎಂದು ಊರಿಗೆ ಬಂದಿದ್ದರು. ಆದರೆ ಬಂದ ಕೆಲವೇ ದಿನಗಳಲ್ಲಿ ತುರ್ತು ಕರ್ತವ್ಯಕ್ಕೆ ಹಾಜರಾಗಲು ಹರ್ಷಿತ್ ಅವರಿಗೆ ಕರೆ ಬಂದಿತ್ತು. ಕೂಡಲೇ ಅವರು ಹೊರಟು ಹೋಗಿದ್ದರು. ತರಬೇತಿ ಅವಧಿಯಲ್ಲೇ ತುರ್ತು ಕರೆಯ ಮಹತ್ವದ ಬಗ್ಗೆ ಹೇಳಿದ್ದರಿಂದ ದೇಶಸೇವೆಗೆ ನಾವು ಯಾವುದೇ ಹೊತ್ತಿಗೂ ತಯಾರು ಎಂದು ಹರ್ಷಿತ್ ಹೇಳುತ್ತಾರೆ.
ಸಿಯಾಚಿನ್‌ನಲ್ಲಿ ಕಾರ್ಯಾಚರಣೆ
ಸಿಯಾಚಿನ್‌ನ ನಡುಗುವ ಚಳಿಯಲ್ಲಿ ಕಾರ್ಯಾಚರಣೆಯ ರೋಚಕ ಅನುಭವವನ್ನು ಹರ್ಷಿತ್ ಬಿಚ್ಚಿಡುತ್ತಾರೆ. ಮೈನಸ್ ಡಿ. ಸೆ.ಗಿಂತ ಕಡಿಮೆಯ ಚಳಿ, ಮತ್ತೂಂದೆಡೆ ಆಮ್ಲಜನಕ ಕೊರತೆ, ಇಂತಹ ಸನ್ನಿವೇಶದಲ್ಲೂ ಸೇನಾ ಕಾರ್ಯಾಚರಣೆಗೆ ತಂಡ ಇಳಿದದ್ದು, ರಾಷ್ಟ್ರರಕ್ಷಣೆಯ ಉದ್ದೇಶವೇ ನಮಗಿತ್ತು. ಇದು ನಮ್ಮ ನರನಾಡಿಗಳಲ್ಲಿ ಭದ್ರವಾಗಿದ್ದುದರಿಂದ ಯಾವುದನ್ನೂ ಲೆಕ್ಕಿಸದೇ ಕೆಲಸ ಮಾಡಿ ಯಶಸ್ವಿಯಾದೆವು ಎಂದು ಹೇಳುತ್ತಾರೆ.
ದೇಶಸೇವೆಗೆ ಕಳುಹಿಸಿದೆ
4ನೇ ತರಗತಿಯಲ್ಲಿರುವಾಗಲೇ ನನ್ನ ಮಗನಿಗೆ ಸೈನಿಕನಾಗಬೇಕೆಂಬ ಕನಸಿತ್ತು. ಒಬ್ಬನೇ ಮಗನಾದರೂ ನಾನೇ ಆತನನ್ನು ದೇಶಸೇವೆಗೆ ಕಳುಹಿಸಿಕೊಟ್ಟೆ. ಸೈನಿಕನಾಗಿರುವ ಮಗನ ಬಗ್ಗೆ ನನಗೆ ಸದಾ ಹೆಮ್ಮೆ.
-ಡೀನಾಕ್ಷಿ, ತಾಯಿ
ಧನ್ಯತಾಭಾವ
ಯಾವ ಉದ್ಯೋಗದಿಂದಲೂ ಸಿಗದ ಧನ್ಯತಾಭಾವ ರಾಷ್ಟ್ರ ರಕ್ಷಣೆಯ ಕಾಯಕದಲ್ಲಿ ಸಿಗುತ್ತದೆ. ದೇಶ ಸೇವೆಯ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಹೇಳಿಕೊಡಬೇಕು.
– ನಾ| ಹರ್ಷಿತ್ ಕೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್ ಚೌಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.