ಬಿಲ್ಲವರ ಪಾದಯಾತ್ರೆ ಹತ್ತಿಕ್ಕಲು ಸರಕಾರದ ಕಡೆಯಿಂದ ಬೆದರಿಕೆ: ಪ್ರಣಾವನಂದ ಸ್ವಾಮೀಜಿ
Team Udayavani, Jan 5, 2023, 12:45 PM IST
ಮಂಗಳೂರು: ಬಿಲ್ಲವರ ಪಾದಯಾತ್ರೆ ಹತ್ತಿಕ್ಕಲು ಸರಕಾರದ ಕಡೆಯಿಂದ ಸಾಕಷ್ಟು ಒತ್ತಡ, ಜೀವ ಬೆದರಿಕೆ ಇದೆ. ಆದರೆ ಅದಕ್ಕೆ ಜಗ್ಗದೆ ಪಾದಯಾತ್ರೆ ನಡೆಸಲಾಗುವುದು ಎಂದು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ ಪ್ರಣಾವನಂದ ಸ್ವಾಮೀಜಿ ಹೇಳಿದರು.
ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆ ಯಾವುದೇ ಪಕ್ಷ, ಸರಕಾರದ ವಿರುದ್ಧವಲ್ಲ. ಸಮಾಜದ ನ್ಯಾಯಕ್ಕಾಗಿ. ಆದರೆ ಪಾದಯಾತ್ರೆ ತಡೆಯಲು ಆರೋಪ, ಷಡ್ಯಂತ್ರ ನಡೆಯುತ್ತಿದೆ. ಸರಕಾರದ ಭಾಗದಿಂದ ನನಗೆ ಜೀವಭಯವಿದೆ. ಆದರೆ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿದರು.
ಬೆಳಗ್ಗೆ 10.30ಕ್ಕೆ ಕುದ್ರೋಳಿ ದೇವಸ್ಥಾನದಲ್ಲಿ ಸಭೆ ನಡೆಯಲಿದೆ. ಅನಂತರ ಮಧ್ಯಾಹ್ನ 1 ಕ್ಕೆ ಕುದ್ರೋಳಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. 40 ದಿನಗಳಲ್ಲಿ ಬೆಂಗಳೂರಿಗೆ 658 ಕಿ.ಮೀ ಸಾಗಲಿದೆ. ಬಿಲ್ಲವರ ನಿಗಮ ಘೋಷಣೆಯಾಗಬೇಕು, ಗರೋಡಿಗಳ ಭೂಮಿ ಗರೋಡಿ ಸಮಿತಿಯವರಿಗೆ ಸಿಗಬೇಕು ಮೊದಲಾದ 10 ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ರಾಜಕೀಯ ಪಕ್ಷ ಅಥವಾ ನಾಯಕರಿಂದ ದೇಣಿಗೆ ಪಡೆದಿಲ್ಲ. ಪಾದಯಾತ್ರೆಗೆ ಒಂದೂವರೆ ಕೋಟಿ ರೂ. ಖರ್ಚಾಗಲಿದ್ದು ಜಿಲ್ಲಾ ಸಮಿತಿಗಳು ಸಮುದಾಯದವರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.