![T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ](https://www.udayavani.com/wp-content/uploads/2024/12/BANG-1-415x237.jpg)
ಟಿಕೆಟ್ ಗೊಂದಲ: ಸ್ತಬ್ಧಗೊಂಡ ಪ್ರಚಾರ ಭರಾಟೆ
ಆಕಾಂಕ್ಷಿಗಳಲ್ಲಿ ತಳಮಳ, ಕಾರ್ಯಕರ್ತರಲ್ಲಿ ಒಳಬೇಗುದಿ
Team Udayavani, Apr 4, 2023, 7:17 AM IST
![ಟಿಕೆಟ್ ಗೊಂದಲ: ಸ್ತಬ್ಧಗೊಂಡ ಪ್ರಚಾರ ಭರಾಟೆ](https://www.udayavani.com/wp-content/uploads/2023/04/ticket-gondala-620x411.jpg)
ಮಂಗಳೂರು: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ವರೆಗೂ ಕರಾವಳಿಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಂದ ನಡೆಯುತ್ತಿದ್ದ ಚುನಾವಣೆ ಅಬ್ಬರ ಒಮ್ಮಿಂದೊಮ್ಮೆಗೆ ಸ್ತಬ್ಧಗೊಂಡಂತೆ ಭಾಸವಾಗುತ್ತಿದೆ.
ನೀತಿ ಸಂಹಿತೆ ಜಾರಿಯಾಗುವ ಮೊದಲು, ಸುಮಾರು ಒಂದು ತಿಂಗಳಿನಿಂದೀಚೆಗೆ ಕರಾ ವಳಿಯಾದ್ಯಂತ ರ್ಯಾಲಿ, ರೋಡ್‌ಶೋ, ಗ್ಯಾರಂಟಿ ಕಾರ್ಡ್‌ಗಳ ವಿತರಣೆ, ಯಾತ್ರೆ, ಕಂಬಳಗಳಲ್ಲಿ ಪಕ್ಷ ಗಳ ನಾಯಕರಿಂದ ಚುನಾವಣ ಪ್ರಚಾರದ ಬಿರುಸಿಗೆ ಕೆಲವು ದಿನಗಳಿಂದೀಚೆಗೆ ಬ್ರೇಕ್ ಬಿದ್ದಿದೆ. ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯವೂ ಕಳೆಗುಂದಿದೆ.
ಕರಾವಳಿಯಲ್ಲಿ ಪ್ರಮುಖ ಪಕ್ಷವಾಗಿ ಸ್ಪರ್ಧೆಯಲ್ಲಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಯಲ್ಲಿನ ಅಭ್ಯರ್ಥಿ ಆಯ್ಕೆಯಲ್ಲಿನ ಕಗ್ಗಂಟು, ಆಕ್ಷೇಪ-ವಿರೋಧದ ಧ್ವನಿ ಸದ್ಯ ಪಕ್ಷಗಳ ನಾಯಕರು ಮಾತ್ರವಲ್ಲದೆ, ಕಾರ್ಯಕರ್ತರನ್ನೂ ಪ್ರಚಾರದಿಂದ ದೂರ ಉಳಿಯುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ 12ರಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿದೆ. ಘೋಷಣೆ ಆಗಿರುವ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಕಾರ್ಯ ಕರ್ತರಿಂದ ಅಪಸ್ವರ ಕೇಳಿ ಬಂದಿರುವುದು ಪಕ್ಷದ ನಾಯಕರನ್ನು ಮೌನಕ್ಕೆ ತಳ್ಳಿದ್ದರೆ, ಪಕ್ಷದ ಕಾರ್ಯಕರ್ತರಲ್ಲಿ ಒಳಬೇಗುದಿಗೆ ಕಾರಣವಾಗುತ್ತಿದೆ.
ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುರಿತಂತೆ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಕ್ಷದ ಜಿಲ್ಲಾ ಕಚೇರಿ ಎದುರು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಇದು ಹೈಕಮಾಂಡ್ ನಿರ್ಧಾರ ಎಂದು ಪಕ್ಷದ ಜಿಲ್ಲಾ ನಾಯಕರು ಕೈ ಚೆಲ್ಲಿದ್ದರೆ, ರಾಜ್ಯ ಹಾಗೂ ಕೇಂದ್ರದ ನಾಯಕರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇನ್ನಷ್ಟೆ ಘೋಷಣೆಯಾಗಬೇಕಿರುವ ಪುತ್ತೂರು, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣದಲ್ಲಿ ಯಾರಿಗೆ ಟಿಕೆಟ್ ಎಂಬ ಕಾರ್ಯಕರ್ತರ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ಜಾತಿ-ಧರ್ಮಗಳ ಆಧಾರದಲ್ಲಿ ಪಕ್ಷಗಳಿಂದ ಟಿಕೆಟ್ ಹಂಚಿಕೆಯ ವಿಷಮ ಪರಿಸ್ಥಿತಿ ಪಕ್ಷದ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ ಎಂಬ ಅಂಶವೂ ಪಕ್ಷದ ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ಕ್ರೈಸ್ತ ಮೀಸಲು ಕ್ಷೇತ್ರವಾಗಿರುವ ಮಂಗಳೂರು ದಕ್ಷಿಣದಲ್ಲಿ ಈ ಬಾರಿ ಪಕ್ಷ ಹೊಸ ಪ್ರಯೋಗಕ್ಕೆ ಮುಂದಾದರೆ, ಪಕ್ಷದಲ್ಲಿ ಗುರುತಿಸಿಕೊಂಡಿರುವ ಕ್ರೈಸ್ತ ನಾಯಕರು ಬಂಡಾಯವೇಳುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಪುತ್ತೂರು ಮತ್ತು ಮಂಗಳೂರು ಉತ್ತರದಲ್ಲೂ ಕಾಂಗ್ರೆಸ್ ಟಿಕೆಟ್ ಕುತೂಹಲ ಕಾರ್ಯಕರ್ತರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಇದಲ್ಲದೆ, ಪಕ್ಷವು ಜಿಲ್ಲೆಯಲ್ಲಿ ಮಹಿಳೆಯರನ್ನು ಕಡೆಗಣಿಸುತ್ತಿದೆ ಎಂಬ ಆರೋಪವೂ ಇದೆ.
ತಳಮಳ, ಕುತೂಹಲ
ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆ ಆಗದ ಕಾರಣ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ, ಕಾರ್ಯಕರ್ತರಲ್ಲಿ ಕುತೂಹಲ ಹೆಚ್ಚಾಗಿದೆ. ಪಕ್ಷದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಪ್ರಕ್ರಿಯೆಗಳು ಈಗಾಗಲೇ ಟಿಕೆಟ್‌ಗಾಗಿ ಕಾಯುತ್ತಿರುವ ಹಾಲಿ ಶಾಸಕರ ನಿದ್ದೆಗೆಡಿಸಿದೆ. ಎರಡು ತಿಂಗಳುಗಳಿಂದಲೇ ಬಿರುಸಿನಿಂದಲೇ ಕ್ಷೇತ್ರದಲ್ಲೆಡೆ ಸುತ್ತಿ ಗುದ್ದಲಿ ಪೂಜೆ, ಉದ್ಘಾಟನೆ, ರೋಡ್ ಶೋ ಮೂಲಕ ಮತದಾರರನ್ನು ಭೇಟಿಯಾಗುತ್ತಿದ್ದ ಜನಪ್ರತಿನಿಧಿಗಳು ಸದ್ಯ ತಟಸ್ಥರಾಗಿರುವಂತಿದೆ. ಪಕ್ಷದ ಮಂಡಲ ಹಂತದಿಂದಲೇ ಅಭ್ಯರ್ಥಿ ಕುರಿತು ಮಾಹಿತಿ ಸಂಗ್ರಹಿಸಲಾಗಿರುವಂತೆ ಹೊಸ ಮುಖಗಳನ್ನು ಪರಿಚಯಿಸುವ ನಿರ್ಧಾರಕ್ಕೆ ಪಕ್ಷದ ವರಿಷ್ಠರು ಮುಂದಾದರೆ ಕಾರ್ಯಕರ್ತರಿಂದ ಅಸಮಾಧಾನ ಹೊರಬೀಳುವ ಸಾಧ್ಯತೆ ಪಕ್ಷದ ನಾಯಕರನ್ನು ಮೌನಕ್ಕೆ ತಳ್ಳಿದೆ.
ಪ್ರಚಾರ ಆಯ್ತು ಥಂಡಾ
ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ನಡೆಯುತ್ತಿರುವಂತೆ ಪ್ರಚಾರ ಕಾರ್ಯ, ಪಕ್ಷಗಳ ಹಿರಿಯ ನಾಯಕರ ಭೇಟಿ ಯಾವುದೂ ಸದ್ಯ ಜಿಲ್ಲೆಯಲ್ಲಿ ಕಂಡು ಬರುತ್ತಿಲ್ಲ. ರಾಜ್ಯದ ಇತರ ಹಲವು ಕಡೆಗಳಲ್ಲಿ ಕಂಡು ಬರುತ್ತಿರುವ ಚುನಾವಣ ಪ್ರಚಾರ ರ್ಯಾಲಿ, ಮನೆ ಭೇಟಿ ಕಾರ್ಯದಂತಹ ಪ್ರಚಾರ ಅಬ್ಬರ ಕರಾವಳಿಯಲ್ಲಿ ಕಳೆಗುಂದಿದೆ. ಈ ನಡುವೆ ಜಿಲ್ಲಾಡಳಿತ, ಚುನಾವಣಾಧಿಕಾರಿ ಗಳು ಮತದಾರರಿಗೆ ತಮ್ಮ ಹಕ್ಕಿನ ಮಹತ್ವ ತಿಳಿಸುವುದು ಹಾಗೂ ಮತದಾರರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಪೊಲೀಸ ರಿಂದ ರೂಟ್ ಮಾರ್ಚ್‌ನಂತಹ ಚುನಾ ವಣ ಪ್ರಕ್ರಿಯೆಗಳನ್ನು ಬಿರುಸುಗೊಳಿಸಿದೆ.
– ಸತ್ಯಾ ಕೆ.
ಟಾಪ್ ನ್ಯೂಸ್
![T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ](https://www.udayavani.com/wp-content/uploads/2024/12/BANG-1-415x237.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ](https://www.udayavani.com/wp-content/uploads/2024/12/BANG-1-150x86.jpg)
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
![BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್](https://www.udayavani.com/wp-content/uploads/2024/12/1-42-150x90.jpg)
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
![BGT 2024: Team India faces injury problems ahead of Melbourne match](https://www.udayavani.com/wp-content/uploads/2024/12/team-150x86.jpg)
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
![Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು](https://www.udayavani.com/wp-content/uploads/2024/12/mohali-150x86.jpg)
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
![ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ](https://www.udayavani.com/wp-content/uploads/2024/12/vaibhav-150x86.jpg)
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.