Moodubidire ಮಾರ್ಕೆಟ್‌ನಲ್ಲಿ ಶೌಚ ಸಮಸ್ಯೆ

100ಕ್ಕೂ ಅಧಿಕ ಪುಟ್ಟ ಪುಟ್ಟ ಮಳಿಗೆಗಳಿರುವ ಸ್ವರಾಜ್‌ ಮೈದಾನ ಪ್ರದೇಶದಲ್ಲಿ ಸರಿಯಾದ ಶೌಚಾಲಯವಿಲ್ಲ

Team Udayavani, Jan 15, 2025, 1:09 PM IST

3(1

ಮೂಡುಬಿದಿರೆ: ಮೂಡುಬಿದಿರೆ ಪೇಟೆಯಲ್ಲಿದ್ದ ಪುರಸಭೆಯ ದಿನವಹಿ ಮಾರುಕಟ್ಟೆಯ ಜಾಗದಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ ಏಳು ವರ್ಷಗಳೇ ಸಂದಿವೆ. ಅದು ಇನ್ನೂ ಪೂರ್ಣಗೊಂಡಿಲ್ಲ. ಇದರ ನಡುವೆ ಹೊಸ ಮಾರುಕಟ್ಟೆಯ ನಿರ್ಮಾಣಕ್ಕಾಗಿ ಹಿಂದಿನ ಮಾರುಕಟ್ಟೆಯಲ್ಲಿದ್ದ ಅಂಗಡಿಗಳನ್ನು ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಗೊಳಿಸಲಾಗಿದೆ. ನೂರಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ಸ್ವರಾಜ್‌ ಮೈದಾನದ ತಾತ್ಕಾಲಿಕ ಮಾರುಕಟ್ಟೆ ಹಲವಾರು ಸಮಸ್ಯೆಗಳ ಆಡುಂಬೊಲ. ಅದರಲ್ಲಿ ಅತ್ಯಂತ ಗಂಭೀರವಾಗಿರುವುದು ಮತ್ತು ಅಸಹ್ಯಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವುದು ಶೌಚಾಲಯ ಸಮಸ್ಯೆ!

ಸ್ವರಾಜ್‌ ಮೈದಾನದ ತಾತ್ಕಾಲಿಕ ವ್ಯವಸ್ಥೆಯಲ್ಲಿ ನೂರಕ್ಕೂ ಅಧಿಕ ಅಂಗಡಿ ಕೋಣೆಗಳಿವೆ. ಹಿಂದಿನ ಮಾರುಕಟ್ಟೆಯಲ್ಲಿ ಇದ್ದುದು 60 ಅಂಗಡಿಗಳು. ಅದು ಇಲ್ಲಿಗೆ ಬಂದಾಗ ನೂರರ ಗಡಿ ದಾಟಿದೆ. ಅಲ್ಲಿ ಇಲ್ಲದ ಅಂಗಡಿಗಳೆಲ್ಲ ಇಲ್ಲಿ ಸೇರ್ಪಡೆಗೊಂಡಿವೆ. ಹೋಟೆಲ್‌, ಕ್ಯಾಂಟೀನ್‌, ಫಾಸ್ಟ್‌ ಫ‌ುಡ್‌ ಅಂಗಡಿಗಳು ವಿಪರೀತವಾಗಿವೆ. ಪುರಸಭೆಯ ಲಗಾಮು ಇಲ್ಲದೆ ಠಿಕಾಣಿ ಹೂಡಿದ ಇವು ಭ್ರಷ್ಟ ವ್ಯವಸ್ಥೆಯ ಮುಖಗಳು.

ಇಷ್ಟೆಲ್ಲ ಅಂಗಡಿ ಮಳಿಗೆಗಳನ್ನು ಸ್ಥಾಪಿಸಿದ ಬಳಿಕ ಇಲ್ಲೊಂದು ವ್ಯವಸ್ಥಿತ ಶೌಚಾಲಯ ವ್ಯವಸ್ಥೆ ಮಾಡಬೇಕಾಗಿತ್ತು. ಇಲ್ಲಿನ ಅಂಗಡಿಗಳ ಸಿಬಂದಿ, ವ್ಯಾಪಾರಕ್ಕೆ ಬರುವವರಿಗೆ ಕನಿಷ್ಠ ವ್ಯವಸ್ಥೆ ಬೇಕಿತ್ತು. ಆದರೆ ಅದರ ಬಗ್ಗೆ ಯೋಚನೆಯೇ ಮಾಡಿಲ್ಲ. ಹಾಗಂತ ಇಲ್ಲಿ ಶೌಚಾಲಯಗಳು ಇಲ್ಲವೇ ಇಲ್ಲ ಎನ್ನುವಂತಿಲ್ಲ.

ಮಾರುಕಟ್ಟೆಯನ್ನು ಸವರಿಕೊಂಡೇ ಸಾಗಿರುವ ರಿಂಗ್‌ ರೋಡನ್ನು ದಾಟಿ ಪೂರ್ವಕ್ಕೆ ಬಂದರೆ ಮೀನು ಮಾರುಕಟ್ಟೆಗೆ ಅಂಟಿಕೊಂಡಂತೆ ಮತ್ತು ಮಾಂಸ ಮಾರಾಟ ಮಳಿಗೆಗಳ ಹಿಂಬದಿಯಲ್ಲಿ ವ್ಯವಸ್ಥಿತ ಶೌಚಾಲಯವಿದೆ. ಆದರೆ, ಅಲ್ಲಿಗೆ ತರಕಾರಿ, ಒಣಮೀನು ಮತ್ತು ಇತರ ವಸ್ತುಗಳ ಮಾರಾಟ ನಡೆಯುವ ಪ್ರಧಾನ ಮಾರುಕಟ್ಟೆಯವರು ಈ ಶೌಚಾಲಯಕ್ಕೆ ಬರಬೇಕಾದರೆ ರಿಂಗ್‌ ರೋಡ್‌ ದಾಟಿ ಬರಬೇಕು. ಎಷ್ಟೇ ಸ್ವತ್ಛತೆ ಕಾಪಾಡಿಕೊಂಡರೂ ಕೆಲವರಿಗೆ ಅಲ್ಲಿ ಬರುವುದು ಕಷ್ಟವೆ. ಅಥವಾ ಅಷ್ಟು ದೂರಕ್ಕೆ ಹೋಗುವುದು ಸಮಸ್ಯೆಯೇ. ಇರುವ ಇನ್ನೊಂದು ಶೌಚಾಲಯಕ್ಕೆ ಬೀಗ ಮುದ್ರೆ ಬಿದ್ದಿದೆ. ಹೀಗಾಗಿ, ಮಾರುಕಟ್ಟೆ ಪ್ರದೇಶದಲ್ಲಿ ಬಯಲು ಮೂತ್ರಾಲಯ, ಶೌಚಾಲಯಗಳು ಬೆಳೆದಿವೆ. ಇದು ನಗರಕ್ಕೆ ಕಪ್ಪು ಚುಕ್ಕೆಯಾಗುವ ಎಲ್ಲ ಅಪಾಯಗಳು ಕಂಡುಬರುತ್ತಿವೆ.

- ಪ್ರಧಾನ ಮಾರುಕಟ್ಟೆ ಇರುವಲ್ಲಿ ನೈಋತ್ಯ ಮೂಲೆಯಲ್ಲಿ ಹೆಚ್ಚಿನವರು ತುರ್ತಾಗಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ. ಇದರ ಬದಿಯಲ್ಲೇ ಅಂದರೆ ಸಭಾಂಗಣದ ಎದುರಿನ ಆಟದ ಬಯಲನ್ನು ಪ್ರವೇಶಿಸುವ ಗೇಟು ಇದೆ. ಇಲ್ಲಿಯೂ ಗಬ್ಬು ನಾತವೂ ಸಾಮಾನ್ಯ.
- ಕೆಲವರು ಮಾರುಕಟ್ಟೆಯ ಪಶ್ಚಿಮ ಭಾಗದಲ್ಲಿ ತೆರೆದ ಜಾಗವಿದ್ದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ.
ಇದರಿಂದ ಅಸಹ್ಯಗೊಂಡ ಹತ್ತಿರದ ಅಂಗಡಿಯವರು ಈ ಭಾಗವನ್ನು ಅರೆಬರೆ ಬೇಲಿ ನಿರ್ಮಿಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
-  ಸ್ವರಾಜ್ಯ ಮೈದಾನದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸುವ ವೇಳೆ, ಉತ್ತರ -ದಕ್ಷಿಣವಾಗಿ ಟ್ರ್ಯಾಕ್‌ ಹಾಕುವಾಗ ಜಾಗ ಕಡಿಮೆಯಾಗಿ ದಕ್ಷಿಣ ಭಾಗವನ್ನು ಕಾಂಕ್ರೀಟ್‌ ಹಾಕಿ ವಿಸ್ತರಿಸಲಾಯಿತು. ಇದಕ್ಕೆ ಆಧಾರವಾಗಿ ಸ್ತಂಭಗಳನ್ನೂ ನಿರ್ಮಿಸಲಾಯಿತು.
ಈ ಸ್ತಂಭಗಳ ಬುಡದಲ್ಲಿ ಎಡ ಬಲದಲ್ಲಿರುವವರು ಕಾಣಿಸದಂತೆ, ಒಬ್ಬರು ಆರಾಮವಾಗಿ ಮಲ ವಿಸರ್ಜನೆ ಮಾಡುವಷ್ಟು ಅವಕಾಶವಿದೆ!

ಶುಕ್ರವಾರ ಸಂತೆ ಕಥೆ ಹೇಳ್ಳೋದೇ ಬೇಡ!
ಮೂಡುಬಿದಿರೆಯಲ್ಲಿ ಶುಕ್ರವಾರ ವಾರದ ಸಂತೆ. ಅಂದು ಬೆಳ್ಳಂಬೆಳಗ್ಗೆ ದೂರದೂರುಗಳಿಂದ ನೂರಾರು ಮಾದರಿಯ ವ್ಯಾಪರಿಗಳು ಬರುತ್ತಾರೆ. ತರಕಾರಿ ಮಾರುವವರು, ಬಲೂನು, ಮಂಡಕ್ಕಿ ಸೇರಿದಂತೆ ವೈವಿಧ್ಯಮಯ ವ್ಯಾಪಾರಕ್ಕೆ ಬರುತ್ತಾರೆ. ಕೆಲವೊಮ್ಮೆ ತರಕಾರಿ, ಹಣ್ಣು ಹೇರಿಕೊಂಡು ವಾಹನಗಳಲ್ಲಿ ಬಂದವರು ಬೆಳಗ್ಗಿನ ಹೊತ್ತು ಶೌಚಾಲಯ ಸಿಗದೆ ನಸುಕಿನಲ್ಲಿಯೇ ಅಕ್ಕಪಕ್ಕದಲ್ಲೇ ಎಲ್ಲೋ ಮಲವಿಸರ್ಜನೆ ನಡೆಸಿ ಏನೂ ಅರಿವಿಲ್ಲದವರ ಹಾಗೆ ಹೋಗುತ್ತಾರೆ. ಇವರಲ್ಲಿ ಪುರುಷರು, ಮಹಿಳೆಯರು ಎಂಬ ಭೇದವೂ ಇಲ್ಲ . ಮುಂಜಾನೆ ಸ್ವರಾಜ್ಯ ಮೈದಾನವನ್ನು ಸುತ್ತುವರಿದ ರಸ್ತೆಯಲ್ಲಿ ವಾಕಿಂಗ್‌ ಹೋಗುವವರು ಇಂಥ ಮುಜುಗರ ಸನ್ನಿವೇಶಗಳನ್ನು ಎದುರಿಸಬೇಕಾಗಿದೆ. ಕೆಲವರು ವಿಡಿಯೊ ಮಾಡಿ ಸಂಬಂಧಿತ ಆಡಳಿತಕ್ಕೆ ಕಳುಹಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.

ಬಾಗಿಲು ಹಾಕಿದೆ, ತೆರೆಯುವುದಿಲ್ಲ!
ಮೈದಾನದ ಈಶಾನ್ಯ ಭಾಗದಲ್ಲಿ ರಿಂಗ್‌ರೋಡ್‌-ಟೆಲೆಕಾಂ ಟವರ್‌ ಬದಿಯಲ್ಲಿ ಸುಸಜ್ಜಿತ ಶೌಚಾಲಯ ಕಟ್ಟಿ ವರುಷಗಳೇ ಉರುಳಿವೆ. ಬಹುತೇಕ ಕೆಲಸವಾಗಿದೆ. ಇಲ್ಲಿಗೆ ಬರಬೇಕಾದರೂ ತಿರುವು ಇರುವ ರಿಂಗ್‌ ರೋಡ್‌ ದಾಟಿ ಬರಬೇಕು. ವಾಹನಗಳ ಓಡಾಟ ನಡೆಯುತ್ತಲೇ ಇರುವಾಗ ಹಾಗೆ ದಾಟುವುದು ಅಪಾಯಕಾರಿಯೂ ಹೌದು. ಆದರೂ ಇದನ್ನು ಬಳಸಲು ರಸ್ತೆ ದಾಟಿ ಬಂದರೆ, ‘ಪಾವತಿಸಿ ಬಳಸಿ’ ಎಂಬ ಫಲಕವಿದೆ. ಆದರೆ, ಪಾವತಿ ತೆಗೆದುಕೊಳ್ಳುವವರಿಲ್ಲ, ಹಾಗಾಗಿ ‘ಬಾಗಿಲನು ತೆರೆದು ಸೇವೆಯನು ಕೊಡ’ದ ಈ ಶೌಚಾಲಯದ ಹೊರಗಡೆಯೇ ಉಚಿತವಾಗಿ ತಮ್ಮ ದೇಹ ಬಾಧೆ ಪೂರೈಸಿಕೊಳ್ಳುತ್ತಾರೆ.

ಹಾಗಿದ್ದರೆ ಪರಿಹಾರ ಏನು?
1. ಪ್ರಧಾನ ಮೈದಾನದ ನೈಋತ್ಯ ಮೂಲೆಯಲ್ಲಿ ಅಥವಾ ವಾಯುವ್ಯ ಮೂಲೆಯಲ್ಲಿ ಗುಜರಿ ಸಾಮಾನು ರಾಶಿ ಹಾಕಿರುವಲ್ಲಿ ಒಂದು ಸುಸಜ್ಜಿತ ಶೌಚಾಲಯ ನಿರ್ಮಿಸಬಹುದು.
2. ನಾಲ್ಕು ಸುತ್ತಿನ ವ್ಯಾಪಾರ ವಲಯದ ಎರಡು ಮೂಲೆಗಳಲ್ಲಿ ಶೌಚಾಲಯ ನಿರ್ಮಿಸಿದರೆ ಇಡೀ ಸಂಕೀರ್ಣ ಎಲ್ಲರಿಗೂ ಅದನ್ನು ಬಳಸಬಹುದು. ಅಲ್ಲಿ ನೀರಿನ ವ್ಯವಸ್ಥೆಯೂ ಇದೆ.
3. ಈಗಾಗಲೇ ಕಟ್ಟಿಹಾಕಿರುವ ಶೌಚಾಲಯದ ಬಾಗಿಲನು ತೆರೆದು ಸೇವೆಯನು ಕೊಡಬೇಕು.
4. ಸಿಂಥೆಟಿಕ್‌ ಟ್ರ್ಯಾಕ್‌ನ ಬುಡದಲ್ಲಿರುವ ಸ್ತಂಭಗಳಿಗೆ ಕಬ್ಬಿಣದ ಮುಳ್ಳಿನ ಬೇಲಿ ನಿರ್ಮಿಸಿ ಆ ಪರಿಸರ ಬಯಲು ಶೌಚಾಲಯ ವಲಯವಾಗದಂತೆ ನಿಗಾ ವಹಿಸಬೇಕು.
5. ಶೌಚಾಲಯಗಳನ್ನು ನಿರ್ಮಿಸಿದ ಬಳಿಕ ಎಲ್ಲೆಲ್ಲಿ ಶೌಚಾಲಯವಿದೆ ಎನ್ನುವ ಮಾಹಿತಿಯನ್ನು ಕೂಡಾ ನೀಡಬೇಕು.

-ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

11-betel-leaf-1

Betel leaf: ಮೈಸೂರ ಚಿಗುರೆಲೆ

10-bike

ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

rasaleele

Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

Ram Jarakiholi

Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mangaluru: ವ್ಯಾಪಾರ ವಲಯ ಸಿದ್ಧವಾದರೂ ವ್ಯಾಪಾರಿಗಳಿಲ್ಲ!

4

Mangaluru: ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ; ಕರಾವಳಿಯ ಅನಾವರಣ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

13-uv-fusion

Bharatanatyam: ನಾಟ್ಯಗಳ ರಾಣಿ ಭರತನಾಟ್ಯ

12-uv-fusion

Education: ಮಾನವನ ಸುಸ್ಥಿರತೆಗೆ ಶಿಕ್ಷಣ ಮೂಲ ಮಂತ್ರ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

11-betel-leaf-1

Betel leaf: ಮೈಸೂರ ಚಿಗುರೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.