ಚೌತಿ ಹಬ್ಬಕ್ಕೆ “ಅರಶಿನ ಗಣಪ’; ಅರಶಿನ, ಸೆಗಣಿಯಿಂದ ಮೂರ್ತಿ ತಯಾರಿ

ಜನಜಾಗೃತಿ ಅಭಿಯಾನ; ರೋಗನಿರೋಧಕ ಶಕ್ತಿ ಹೆಚ್ಚಳ; ಉತ್ತಮ ಪ್ರತಿಕ್ರಿಯೆ

Team Udayavani, Aug 18, 2020, 6:00 AM IST

ಚೌತಿ ಹಬ್ಬಕ್ಕೆ “ಅರಶಿನ ಗಣಪ’; ಅರಶಿನ, ಸೆಗಣಿಯಿಂದ ಮೂರ್ತಿ ತಯಾರಿ

ಮಹಾನಗರ: ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಕೊರೊನಾದಂತಹ ಕಾಯಿಲೆಗಳನ್ನು ದೂರವಿಡಬಹುದು. ಅದಕ್ಕಾಗಿಯೇ ರೋಗ ನಿರೋಧಕ ಶಕ್ತಿಯುಳ್ಳ ಅರಶಿನ, ಸೆಗಣಿಯನ್ನೇ ಬಳಸಿಕೊಂಡು ಗಣೇಶನ ಮೂರ್ತಿ ನಿರ್ಮಿಸುವಂತೆ ಜನಜಾಗೃತಿಗಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ “ಅರಶಿನ ಗಣಪ’ ಅಭಿಯಾನವನ್ನು ರೂಪಿಸಿದೆ.

ಪಿಒಪಿ ಹಾಗೂ ಬಣ್ಣದ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಯಿಂದ ಪರಿಸರ ನಾಶವಾಗುತ್ತದೆ. ಅದಕ್ಕಾಗಿಯೇ ಪರಿಸರಸ್ನೇಹಿ ಗಣೇಶನ ಮೂರ್ತಿ ನಿರ್ಮಿಸಿ ಆರಾಧನೆಗೆ ಇತ್ತೀಚಿನ ದಿನಗಳಲ್ಲಿ ಒತ್ತು ನೀಡಲಾಗುತ್ತದೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧವಿದೆ. ಹೀಗಾಗಿ ಮನೆಮನೆಗಳಲ್ಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವುಳ್ಳ ಅರಶಿನ, ಸೆಗಣಿಯನ್ನು ಬಳಸಿಕೊಂಡು ಗಣೇಶ ಮೂರ್ತಿ ತಯಾರಿಸಿ ಆರಾಧಿಸಲು ಜನ ಮುಂದಾಗಬೇಕು ಎಂಬುದು ಮಂಡಳಿಯ ಉದ್ದೇಶ. ಅದಕ್ಕಾಗಿ “ಅರಶಿನ ಗಣಪ’ ಆರಾಧನೆಗೆ ಮಂಡಳಿ ಕರೆ ಕೊಟ್ಟಿದೆ.

ದ.ಕ.: ಪ್ಯಾಕೆಟ್‌ನಲ್ಲಿ ಸ್ಟಿಕ್ಕರ್‌
“ಅರಶಿನ ಗಣಪ’ ಅಭಿಯಾನವನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಾಲಿನ ಪ್ಯಾಕೆಟ್‌, ಎಣ್ಣೆ ಪ್ಯಾಕೆಟ್‌ಗಳಲ್ಲಿ “ಅರಶಿನ ಗಣಪ’ ಅಭಿಯಾನದ ಸ್ಟಿಕರ್‌ ಅಂಟಿಸಿ ಮನೆಮನೆಗಳಿಗೆ ತಲುಪಿಸುವ ಪ್ರಯತ್ನಗಳಾಗುತ್ತಿವೆ. ಇದರೊಂದಿಗೆ ವಿದ್ಯುತ್‌ ಬಿಲ್‌ನಲ್ಲಿಯೂ ಸಂದೇಶ ಬರೆ ಯಿಸಲು ಕೋರಿಕೊಳ್ಳಲಾಗಿದೆ ಎಂದು ಪರಿಸರಾಧಿಕಾರಿಗಳು ತಿಳಿಸಿದ್ದಾರೆ.

ಉತ್ತಮ ಸ್ಪಂದನೆ
ಸಾಮಾಜಿಕ ಜಾಲತಾಣಗಳ ಮುಖಾಂ ತರ ಈಗಾಗಲೇ ಮಂಡಳಿಯು ಈ ಅಭಿಯಾನಕ್ಕೆ ಜನಸಾಮಾನ್ಯರಿಂದ ಪ್ರತಿಕ್ರಿ ಯೆಗಳನ್ನು ಆಹ್ವಾನಿಸುತ್ತಿದ್ದು, ಹಲ ವರು ತಮ್ಮ ಮನೆಯಲ್ಲಿ ತಯಾರಿಸಿದ ಅರಶಿನ ಗಣಪನ ಮೂರ್ತಿಗಳ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವುಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನೆಗಳಲ್ಲಿ ತಯಾರಿಸಿದ ಮೂರ್ತಿಗಳನ್ನು ಮಂಡಳಿಯ ಫೇಸುºಕ್‌ ಪೇಜ್‌ನಲ್ಲಿ ಅಪ್ಲೋಡ್‌ ಮಾಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಅರಶಿನ ಗಣಪ ತಯಾರಿಕೆ ಹೇಗೆ?
ಅರಶಿನ ಪುಡಿಗೆ ಮೈದಾ, ಅಕ್ಕಿ ಅಥವಾ ರಾಗಿಹಿಟ್ಟನ್ನು ಸಮಾನವಾಗಿ ಮಿಶ್ರಣ ಮಾಡಿಕೊಳ್ಳಬೇಕು. 7-8 ಚಮಚ ಸಕ್ಕರೆ ಸೇರಿಸಬೇಕು. ಮಿಶ್ರಣ ಹದ ಮಾಡಿಕೊಳ್ಳಲು ಬೇಕಾದಷ್ಟು ನೀರನ್ನು ಬಳಸಿಕೊಳ್ಳಬೇಕು. ಬಳಿಕ ಮೂರ್ತಿ ತಯಾರಿಸಬೇಕು. ಮೂರ್ತಿಯ ಕಣ್ಣಿನ ಭಾಗದಲ್ಲಿ ಮೆಣಸಿನ ಕಾಳುಗಳನ್ನು ಅಳವಡಿಸಿ ಕೊಳ್ಳಬಹುದು. ವಿಗ್ರಹ ತಯಾರಾದ ಬಳಿಕ ಹೂವಿನಿಂದ ಅಲಂಕಾರ ಮಾಡಿ ಕೊಳ್ಳುವುದು. ಸೆಗಣಿಯಲ್ಲಿಯೂ ಇದೇ ರೀತಿಯಾಗಿ ಮೂರ್ತಿ ಗಟ್ಟಿಯಾಗಿ ನಿಲ್ಲುವಂತೆ ತಯಾರಿಸಿಕೊಳ್ಳಬಹುದು. ಆರಾಧನೆ ಮುಗಿದ ಬಳಿಕ ಮನೆಯಲ್ಲೇ ಮೂರ್ತಿಯನ್ನು ವಿಸರ್ಜನೆ ಮಾಡಬಹುದು ಎನ್ನುತ್ತಾರೆ ಪರಿಸರಾಧಿಕಾರಿಗಳು.

ಮನೆಮನೆಗೆ ಮಾಹಿತಿ
ಈ ಬಾರಿ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧ ಇರುವುದರಿಂದ ಜನರು ಮನೆಮನೆಗಳಲ್ಲೇ ಅರಶಿನ ಗಣಪನ ಮೂರ್ತಿ ತಯಾರಿಸಿ ಆರಾಧಿಸಬಹುದು. ಇದು ಪರಿಸರಕ್ಕೂ ಪೂರಕ, ರೋಗ ನಿರೋಧಕ ಶಕ್ತಿಯೂ ಹೆಚ್ಚಿರುತ್ತದೆ. ಜಿಲ್ಲೆಯಲ್ಲಿ ಈ ಅಭಿಯಾನವನ್ನು ಮನೆಮನೆಗೆ ತಲುಪಿಸಲು ಕ್ರಮಕೈಗೊಳ್ಳಲಾಗಿದೆ.
– ಕೀರ್ತಿಕುಮಾರ್‌, ಪರಿಸರಾಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,

ಟಾಪ್ ನ್ಯೂಸ್

52528

Delhi: ಪತ್ನಿಯಿಂದ ವಿಚ್ಛೇದನ ಪಡೆಯುವ ಹಂತದಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

1-ewqewq

Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

5-hiriyadka

Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಕೈಕೊಡುವ ವೆಟ್‌ವೆಲ್‌; ನಂದಿನಿ, ಬಾವಿ ನೀರು ಕಲುಷಿತ

3(1

Bajpe: ಪಂಚ ಭಾಷೆಗಳಲ್ಲಿ ಎಕ್ಕಾರು ಶಾಲಾ ವಾರ್ತೆಗಳು

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Kundapura: ಜೀವರಕ್ಷಣೆಗೆ ಊರ ಜನರ ಜಾಗೃತಿ

52528

Delhi: ಪತ್ನಿಯಿಂದ ವಿಚ್ಛೇದನ ಪಡೆಯುವ ಹಂತದಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

1-ewqewq

Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ

4

Mangaluru: ಕೈಕೊಡುವ ವೆಟ್‌ವೆಲ್‌; ನಂದಿನಿ, ಬಾವಿ ನೀರು ಕಲುಷಿತ

3(1

Bajpe: ಪಂಚ ಭಾಷೆಗಳಲ್ಲಿ ಎಕ್ಕಾರು ಶಾಲಾ ವಾರ್ತೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.