Udayavani Campaign: ಅಳಿಯೂರು ಕಾಲೇಜಿಗೆ ಬಸ್ ಬೇಕಾಗಿದೆ
Team Udayavani, Jun 26, 2024, 3:00 PM IST
ಮೂಡುಬಿದಿರೆ: ಅಳಿಯೂರು ಮೂಡುಬಿದಿರೆ ತಾಲೂಕಿನ ಈಶಾನ್ಯ ಭಾಗದಲ್ಲಿರುವ ಗ್ರಾಮಾಂತರ ಪ್ರದೇಶ. ಇಲ್ಲಿರುವ ಸರಕಾರಿ ಹೈಸ್ಕೂಲಿನ ಮುಂದುವರಿದ ಭಾಗವಾಗಿ ಪ.ಪೂ. ಕಾಲೇಜು ಹುಟ್ಟಿಕೊಂಡದ್ದು ಹಲವು ದಶಕಗಳ ಹೋರಾಟದ ಫಲ. ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ 400ಕ್ಕಿಂತ ಅಧಿಕ, ಹೈಸ್ಕೂಲಲ್ಲೇ 400ಕ್ಕಿಂತ ಅಧಿಕ ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದಷ್ಟೆ ಪ್ರಾರಂಭವಾದ ಪಿಯುಸಿಗೂ ಬೇಡಿಕೆ ಇದೆ. ಈಗಾಗಲೇ 90ರ ಹತ್ತಿರ ದಾಖಲಾತಿ ಇದೆ.
ವಿಶೇಷವಾಗಿ ಹೈಸ್ಕೂಲಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳೆರಡೂ ಇರುವುದರಿಂದ ಬೇಡಿಕೆ ಪಡೆದುಕೊಂಡಿದೆ. ಆದರೆ, ಇಲ್ಲಿಗೆ ಬರುವ ಮಕ್ಕಳಿಗೆ ಸರಿಯಾದ ಬಸ್ಸು ಸೌಕರ್ಯ ಇಲ್ಲದೆ ಹಿನ್ನಡೆಯಾಗಿದೆ.
ಬೇಡಿಕೆಗಳೇನು?
*ಮೂಡುಬಿದಿರೆ ಕಡೆಯಿಂದ ಈಗಿರುವ ಬಸ್‌ಗಳ ಜತೆಗೆ ಬೆಳಗ್ಗೆ 9 ಗಂಟೆಗೊಂದು ಬಸ್ಸು ಬಿಡಬೇಕು. ಸಂಜೆ ಅಳಿಯೂರಲ್ಲಿ ಪಿಯುಸಿ 3.15ಕ್ಕೆ, ಹೈಸ್ಕೂಲು 4.15ಕ್ಕೆ ಬಿಡುವುದರಿಂದ ಒಮ್ಮೆಲೇ 500 ಮಕ್ಕಳೂ ಬಸ್ಸಿಗಾಗಿ ಧಾವಿಸುವ ಸ್ಥಿತಿ ಇದೆ. ಈ ರಶ್ ತಪ್ಪಿಸಲು, 3.30, 4.00 ಮತ್ತು 4.30ಕ್ಕೆ ಮೂಡುಬಿದಿರೆ ಹಾದಿಯಲ್ಲಿ ಬಸ್ಸು ಬಿಟ್ಟರೆ ಚೆನ್ನು ಎಂಬ ಅಭಿಪ್ರಾಯವಿದೆ.
*ಬೆಳುವಾಯಿ ಕಡೆಯಿಂದ ಬರುವವರು ಅಳಿಯೂರು ಮುಟ್ಟುವಾಗ 9.15 ಆಗುವ ಕಾರಣ ಪ್ರಾರ್ಥನೆ, ಎಸೆಂಬ್ಲಿಗೆ ತಡವಾಗುತ್ತದೆ. ಒಮ್ಮೊಮ್ಮೆ ಸ್ಪೆಶಲ್ ಕ್ಲಾಸಿಗೂ ತಡವಾಗುತ್ತದೆ.
ಇದಕ್ಕಾಗಿ, ಬೆಳುವಾಯಿಂದ 8.15ಕ್ಕೊಂದು ಬಸ್ಸು ಬಿಟ್ಟರೆ ದರೆಗುಡ್ಡೆ, ಪಣಪಿಲ ಆಗಿ ಬೇಗನೆ ಬರುವವರಿಗೆ ಅನುಕೂಲ. ಹಾಗೇನೇ,
ಸಂಜೆ ಸ್ಟ್ಯಾಂಡಿಗೆ ಬಂದು ಬೆಳುವಾಯಿ ಕಡೆಗೆ ಬಸ್ಸು ಹಿಡಿಯಲು ಮುಕ್ಕಾಲು ತಾಸು ಕಾಯುವ ಸ್ಥಿತಿ ಇದೆ ಎಂದು ಮನ್ವಿತಾ, ಸಿಂಚನಾ,ಸಾನ್ವಿ, ಸಾತ್ವಿಕಾ, ತೃಶಾ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. – ಹೊಸ್ಮಾರು ಕಡೆಗೆ ಸಾಗುವವರೂ ಮುಕ್ಕಾಲು ತಾಸು ಕಾಯುವ ಸ್ಥಿತಿ ಇದೆ. ಇದನ್ನು ನಿವಾರಿಸಲು, ಈ ಎರಡೂ ಮಾರ್ಗಗಳಲ್ಲಿ 4.30-5ರ ನಡುವೆ ಒಂದೊಂದು ಬಸ್ಸು ಇದ್ದರೆ ಅನುಕೂಲ. ಇದೆಲ್ಲವೂ ಗ್ರಾಮೀಣ. ಗುಡ್ಡಕಾಡು ಪ್ರದೇಶವಾದ ಕಾರಣ, ಮನೆ ಮುಟ್ಟುವಾಗ ತಡವಾಗುವ ಆತಂಕವೂ
ಈ ವಿದ್ಯಾರ್ಥಿಗಳನ್ನು ವಿಶೇಷವಾಗಿ ಹುಡುಗಿಯರನ್ನು ಕಾಡುತ್ತಿದೆ.
*ಧನಂಜಯ ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.