Ullal: ಕುಸಿಯುವ ಭೀತಿಯಲ್ಲಿದೆ ಗ್ರಾಮ ಪಂಚಾಯತ್ ಸದಸ್ಯೆ ಮನೆ!

ರಸ್ತೆ ಬದಿ ಚರಂಡಿ ಅಗೆತದಿಂದ ಕುಸಿಯುತ್ತಿರುವ ಮಣ್ಣು, ಮನೆಯ ಪಂಚಾಂಗವೇ ಅಪಾಯದಲ್ಲಿ; ಗ್ರಾ. ಪಂ. ಸದಸ್ಯೆಯ ಸಂಕಷ್ಟಕ್ಕೂ ಸ್ಪಂದಿಸದ ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ

Team Udayavani, Oct 20, 2024, 5:28 PM IST

9

ಉಳ್ಳಾಲ: ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕೆರೆಯಲ್ಲಿ ಪಂಚಾಯತ್‌ ಸದಸ್ಯೆಯೊಬ್ಬರ ಮನೆಯೇ ಕುಸಿದು ಬೀಳುವ ಅಪಾಯಕ್ಕೆ ಸಿಲುಕಿದೆ. ರಸ್ತೆ ಪಕ್ಕ ಸ್ವಲ್ಪ ಎತ್ತರದ ಜಾಗದಲ್ಲಿರುವ ಮನೆಯ ಅಂಗಳ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದ್ದು, ಅಡಿಪಾಯವೇ ಅಪಾಯಕ್ಕೆ ಸಿಲುಕುವಂತಿದೆ. ಮನೆಯ ಎದುರಿನ ಕುಸಿದ ಭಾಗಕ್ಕೆ ಪ್ಲಾಸ್ಟಿಕ್‌ ಶೀಟ್‌ ಮತ್ತು ಹಗ್ಗವನ್ನು ಕಟ್ಟಿ ಜೀವ ಕೈಯಲ್ಲಿಟ್ಟುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಬೆಳ್ಮ ಗ್ರಾಮ ಪಂಚಾಯತ್‌ ಸದಸ್ಯೆ ಪುಷ್ಪಲತಾ ರೈ ಅವರ ಮನೆಯೇ ಈ ಸ್ಥಿತಿಯಲ್ಲಿರುವುದು. ಮಳೆಗಾಲ ಆರಂಭದಲ್ಲಿ ಮನೆಯ ಎದುರಿನ ಧರೆ ಕುಸಿಯಲು ಆರಂಭಿಸಿತ್ತು. ನಾಲ್ಕು ತಿಂಗಳುಗಳಿಂದ ಪಂಚಾಯತ್‌, ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಈ ಮನೆಯ ರಕ್ಷಣೆಗೆ ಕ್ರಮ ಕೈಗೊಂಡಿಲ್ಲ. ಬಡ ಕುಟುಂಬವಾಗಿದ್ದರಿಂದ ಬದಲಿ ವ್ಯವಸ್ಥೆಗೆ ಅಸಾಧ್ಯವಾಗಿದೆ.

ಈ ಬಾರಿ ಮಳೆಗಾಲದಲ್ಲಿ ಹಲವು ಕಡೆ ಭೂಕುಸಿತಗಳು ಸಂಭವಿಸಿವೆ. ಅದರಲ್ಲೂ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಧರೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಈ ವೇಳೆ ಆಗಮಿಸಿದಕಂದಾಯ ಸಚಿವರು ಜಿಲ್ಲೆಯಲ್ಲಿ ಇಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಸ್ಥಳೀಯವಾಗಿ ಸರ್ವೇ ನಡೆಸಲು ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಆದೇಶ ನೀಡಿದ್ದರು. ಆದರೆ ಸಚಿವರ ಆದೇಶ ಕೇವಲ ಹೇಳಿಕೆಗೆ ಸೀಮಿತವಾಗಿದೆ.

ಗ್ರಾ.ಪಂ. ಸದಸ್ಯೆಯಾಗಿರುವ ಇವರೇ ಮನೆಯ ಸಮಸ್ಯೆಗಾಗಿ ನಾಲ್ಕು ತಿಂಗಳುಗಳಿಂದ ಓಡಾಡುತ್ತಿದ್ದರೂ ಫ‌ಲ ಸಿಕ್ಕಿಲ್ಲ. ಇನ್ನು ಜನಸಾಮಾನ್ಯರ ಸಮಸ್ಯೆ ಬಗೆಹರಿಯುವುದು ಹೇಗೆ ಎನ್ನುತ್ತಾರೆ ಸ್ಥಳೀಯರು. ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಈ ಮನೆ ಕುಸಿಯುವ ಭೀತಿಯಲ್ಲಿದೆ. ಜಿಲ್ಲಾಡಳಿತ ತತ್‌ಕ್ಷಣ ಸ್ಪಂದಿಸಿ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆ ಮಾಡಿ ತಡೆಗೋಡೆ ಕಟ್ಟಿ ಮನೆ ಉಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪುಷ್ಪರಾಜ್‌ ಆಗ್ರಹಿಸಿದ್ದಾರೆ.

ಏನಾದರೂ ಆದರೆ ಜಿಲ್ಲಾಡಳಿತವೇ ಹೊಣೆ
ಲೋಕೋಪಯೋಗಿ ಇಲಾಖೆಯ ಚರಂಡಿ ನಿರ್ಮಾಣದ ಕಾರಣ ಮಣ್ಣು ಕುಸಿದಿದೆ. ಇಲಾಖೆಯನ್ನು ವಿಚಾರಿಸಿದರೆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎನ್ನುತ್ತಾರೆ. ಪ್ರತೀ ಬಾರಿ ಮಳೆ ಬರುವಾಗ ದೇವರ ಮೇಲೆ ಭಾರ ಇಟ್ಟು ಮನೆಯಲ್ಲೇ ವಾಸ ಮಾಡುತ್ತಿದ್ದೇನೆ. ಬಾಡಿಗೆ ಮನೆಯಲ್ಲಿ ನಿಲ್ಲುವಷ್ಟು ಆರ್ಥಿಕ ಸ್ಥಿತಿವಂತರಲ್ಲ. ನನ್ನ ಮನೆಯನ್ನು ಉಳಿಸಲು ಜಿಲ್ಲಾಡಳಿತ ಮುಂದಾಗಬೇಕು. ಏನಾದರೂ ಅವಘಡ ಆದರೆ ಇದಕ್ಕೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯೇ ಹೊಣೆಯಾಗಲಿದೆ.
– ಪುಷ್ಪಲತಾ ರೈ, ಬೆಳ್ಮ ಗ್ರಾಮ ಪಂಚಾಯತ್‌ ಸದಸ್ಯೆ

ತಡೆಗೋಡೆ ಆಶ್ವಾಸನೆ ಕಡತದಲ್ಲೇ ಬಾಕಿ
ಲೋಕೋಪಯೋಗಿ ಇಲಾಖೆಯ ಪ್ರಮಾದದಿಂದ ಈ ಮನೆ ಕುಸಿಯುವ ಹಂತಕ್ಕೆ ತಲುಪಿದೆ. ಪ್ರಾಕೃತಿಕ ವಿಕೋಪ ಯೋಜನೆಯಡಿ ತಡೆಗೋಡೆ ನಿರ್ಮಿಸಲು ಸರ್ವೇ ನಡೆಸಿ ಅಧಿಕಾರಿಗಳು ಯೋಜನೆ ರೂಪಿಸಿದರೂ ಈವರೆಗೆ ಕಾರ್ಯಗತವಾಗಿಲ್ಲ. ಘಟನ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್‌, ಗ್ರಾ.ಪಂ. ಅಧಿಕಾರಿಗಳು, ಭೂವಿಜ್ಞಾನ ಅಧಿಕಾರಿಗಳು, ಎಂಜಿನಿಯರ್‌ಗಳು ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚವನ್ನು ಅಂದಾಜಿಸಿ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಯೋಜನೆ ಕಡತದಲ್ಲೇ ಇದ್ದು ಆದೇಶ ಇನ್ನೂ ಸಿಕ್ಕಿಲ್ಲ.

ಚರಂಡಿ ಅಗೆತವೇ ಕುಸಿತಕ್ಕೆ ಕಾರಣ
ಬೆಳ್ಮ ಗ್ರಾಮದ ದೇರಳಕಟ್ಟೆಯಿಂದ ಕಾನಕೆರೆಯನ್ನು ಸಂಪರ್ಕಿಸುವ ರಸ್ತೆ ಇಳಿಜಾರು ಪ್ರದೇಶದಲ್ಲಿದ್ದು, ಮಳೆಗಾಲ ಆರಂಭದಲ್ಲಿ ಮಳೆ ನೀರು ಹರಿದು ಹೋಗಲು ಲೋಕೋಪಯೋಗಿ ಇಲಾಖೆ ಚರಂಡಿ ನಿರ್ಮಿಸಿತ್ತು. ಈ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಮಣ್ಣು ಅಗೆತದಿಂದ ಈ ಕುಸಿತ ಆರಂಭಗೊಂಡಿದ್ದು, ಪ್ರತೀ ಬಾರಿ ಮಳೆ ಬಂದಾಗಲೂ ಹಂತ ಹಂತವಾಗಿ ಮಣ್ಣು ಕುಸಿದು ಇದೀಗ ಮನೆ ಕುಸಿಯುವ ಭೀತಿಯಲ್ಲಿದೆ.

-ವಸಂತ ಎನ್‌. ಕೊಣಾಜೆ

ಟಾಪ್ ನ್ಯೂಸ್

Manipur

Conflict: ಮಣಿಪುರದಲ್ಲಿ ಹಿಂಸೆ: ಗ್ರಾಮ ಮುಖ್ಯಸ್ಥನ ಮನೆಗೆ ಬೆಂಕಿ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Kar-kerala

Ranaji Trophy: ಕರ್ನಾಟಕ-ಕೇರಳ ಮೂರನೇ ದಿನದಾಟ ರದ್ದು

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Fraud Case: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ನಗದು ದೋಚಿದ ಕಾನ್‌ಸ್ಟೆಬಲ್‌

Fraud Case: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ನಗದು ದೋಚಿದ ಕಾನ್‌ಸ್ಟೆಬಲ್‌

BNg-Bulls

Pro Kabaddi: ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಸೋಲು

Shiggaon Bypoll: ನಾವು ಟಿಕೆಟ್‌ ಕೇಳಿಲ್ಲ: ಭರತ್‌ ಬೊಮ್ಮಾಯಿ

Shiggaon Bypoll: ನಾವು ಟಿಕೆಟ್‌ ಕೇಳಿಲ್ಲ: ಭರತ್‌ ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–arsss

Mangaluru: RSS ವಿಜಯ ದಶಮಿ ಪಥಸಂಚಲನ

suicide (2)

MRPL ಸೆಕ್ಯುರಿಟಿ ಗಾರ್ಡ್‌ ಆತ್ಮಹ*ತ್ಯೆ ದೃಢ

Nanthooru-Acci

Mangaluru: ನಂತೂರು ಬಳಿ ಅಪಘಾತ: ಯುವತಿ ಮೃತ್ಯು

8

Mangaluru: ಹೃದ್ರೋಗ, ಕ್ಯಾನ್ಸರ್‌ಗೂ ಪ್ಲಾಸ್ಟಿಕ್‌ ದಾರಿ, ಹುಷಾರ್‌!

Railway-Track

Mangaluru: ರೈಲು ಹಳಿಯಲ್ಲಿ ಕಲ್ಲಿರಿಸಿದ ಕಿಡಿಗೇಡಿಗಳು: ಭಾರೀ ಶಬ್ದಕ್ಕೆ ಬೆಚ್ಚಿದ ಸ್ಥಳೀಯರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-ajekaaa

Ajekar: ಸೇತುವೆಗೆ ಕಾರು ಢಿಕ್ಕಿ

1-aaa

Udupi: ಕಾರಿನಿಂದ ತಳ್ಳಲ್ಪಟ್ಟ ಮಹಿಳೆಯ ರಕ್ಷಣೆೆ

police

Kollur:ಯಾತ್ರಾರ್ಥಿಯ ಚಿನ್ನದ ಒಡವೆ ಕಳವು

Manipur

Conflict: ಮಣಿಪುರದಲ್ಲಿ ಹಿಂಸೆ: ಗ್ರಾಮ ಮುಖ್ಯಸ್ಥನ ಮನೆಗೆ ಬೆಂಕಿ

1-a-sidili

Puttur: ಸಿಡಿಲು ಬಡಿದು ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.