ಉಳ್ಳಾಲ: ತೀವ್ರ ಕಡಲ್ಕೊರೆತ; ಮನೆ ಸಮುದ್ರಪಾಲು


Team Udayavani, Jun 7, 2017, 1:13 PM IST

0606ul1.jpg

ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತದ ಸಮಸ್ಯೆ ಮುಂದುವರಿದಿದೆ. ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ದಡಿ ಎಡಿಬಿ ಯೋಜನೆಯಡಿ ಪೈಲೆಟ್‌ ಕಾಮಗಾರಿ ಇಲ್ಲಿನ ಕೆಲವು ಪ್ರದೇಶದಲ್ಲಿ ನಡೆದಿದ್ದು, ಕಾಮಗಾರಿ ನಡೆಯದ ಉಳ್ಳಾಲದ ಕೈಕೋ, ಕಿಲೇ  ರಿಯಾನಗರ, ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮಂಗಳವಾರ ಕೈಕೋದಲ್ಲಿ ಮನೆಯೊಂದು ಸಮುದ್ರಪಾಲಾಗಿದ್ದು, 15ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.

ಕೈಕೋರೋಡ್‌ನ‌ ಇಂದಿರಾನಗರದಲ್ಲಿರುವ ದಿ. ಲತೀಫ್‌ ಅವರ ಮನೆ ಸಮುದ್ರದ ಅಲೆಗಳಿಗೆ ತುತ್ತಾಗಿ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಎರಡು ದಿನಗಳ ಹಿಂದೆಯೇ ಪಕ್ಕದ ಮನೆಗೆ ಸ್ಥಳಾಂತರಗೊಂಡಿದ್ದು, ಸಾಮಾನುಗಳನ್ನು ಮಂಗಳವಾರ ಸ್ಥಳೀಯರು ಮತ್ತು ಕುಟುಂಬದ ಸದಸ್ಯರು ಸ್ಥಳಾಂತರಗೊಳಿಸಿದರು.

ಕೈಕೋದಲ್ಲಿ ಮಸೀದಿ ಸಹಿತ ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, 2 ಮನೆಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ. ಉಳಿದಂತೆ ಮುಕ್ಕ ಚ್ಚೇರಿ, ಕಿಲೇರಿಯಾ ನಗರ, ಸೀಗ್ರೌಂಡ್‌ನ‌ಲ್ಲಿ  ಮನೆಗಳು ಅಪಾಯದಲ್ಲಿವೆ.

ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ
ಸೋಮೇಶ್ವರ ಮತ್ತು ಉಚ್ಚಿಲ ಬೀಚ್‌ನಲ್ಲಿ ಕಡಲ್ಕೊರೆತ ಪ್ರಾರಂಭವಾಗಿದೆ. ಉಚ್ಚಿಲದಲ್ಲಿ ಫಿಶರಿಸ್‌ ರಸ್ತೆ ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಸೋಮೇಶ್ವರದಿಂದ ಉಚ್ಚಿಲ ಬಟ್ಟಪ್ಪಾಡಿಯನ್ನು ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು, ನ್ಯೂ ಉಚ್ಚಿಲದ ಬಳಿ ರಸ್ತೆಗೆ ಕೆಲವೇ ಮೀಟರ್‌ ದೂರದಲ್ಲಿ ಸಮುದ್ರವಿದ್ದು, ಅಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸದಿದ್ದಲ್ಲಿ ರಸ್ತೆ ಕುಸಿಯುವ ಸಾಧ್ಯತೆ ಹೆಚ್ಚಿದೆ.

ಶಾಶ್ವತ ಕಾಮಗಾರಿ ಪರಿಣಾಮ
ಉಳ್ಳಾಲದ ಮೊಗವೀರಪಟ್ಣ ಮತ್ತು ಕೋಟೆ ಪುರ ಗಳಲ್ಲಿ ನಡೆದ ಕಡಲ್ಕೊರೆತ ಶಾಶ್ವತ ಕಾಮಗಾರಿ ಯಿಂದಾಗಿ ಇಲ್ಲಿ ಇದುವರೆಗೆ ಕಡಲ್ಕೊರೆತ ಉಂಟಾಗಿಲ್ಲ. ಆದರೆ ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೋಮೇ ಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ಹೆಚ್ಚಾಗಲು ಕಾರಣವಾಗಿದೆ. ಕಾಮಗಾರಿಯ ಪ್ರದೇಶದಲ್ಲಿ ಅಲೆ ಗಳು ದಕ್ಷಿಣಕ್ಕೆ ತಿರುಗುತ್ತಿದ್ದು, ಕೈಕೋದಲ್ಲಿ ಹಾಕ ಲಾಗಿದ್ದ ಕಲ್ಲಿನ ತಾತ್ಕಾಲಿಕ ತಡೆಗೋಡೆಗಳು ಸಮುದ್ರಪಾಲಾಗಿವೆ. ಉಚ್ಚಿಲ ದಲ್ಲಿಯೂ ಕಳೆದ ಬಾರಿ ಹಾಕಲಾಗಿದ್ದ ತಡೆಗೋಡೆಗಳು ಸಮುದ್ರಪಾಲಾಗು ತ್ತಿದ್ದು, ಜನರು ಆತಂಕದಲ್ಲಿದ್ದಾರೆ.

ಬಮ್ಸ್‌ì ರಚನೆಗೆ ಆಗ್ರಹ
ಕೋಟೆಪುರ ಮತ್ತು ಮೊಗವೀರಪಟ್ಣ ಬಳಿ ನಡೆಸಿದ ಕಾಮಗಾರಿಯ ಮಾದರಿಯಲ್ಲೇ ಕೈಕೋ ಮತ್ತು ಕಿಲೇ ರಿಯಾ ನಗರದಲ್ಲಿ ಕಾಮಗಾರಿ ನಡೆಸುತ್ತಿದ್ದರೆ ಕೊರೆತ ಪ್ರಮಾಣ ಕಡಿಮೆಯಾಗುತ್ತಿತ್ತು ಎಂದು ಸ್ಥಳೀಯ ಕೌನ್ಸಿಲರ್‌ ಮಹಮ್ಮದ್‌ ಮುಕ್ಕಚ್ಚೇರಿ ಅವರು ತಿಳಿಸಿದ್ದಾರೆ.

ಉಳ್ಳಾಲ: ಲತೀಫ್‌ ಅವರ ಮನೆಗೆ ಸಮುದ್ರದ ಅಲೆಗಳು ಅಪ್ಪಳಿಸಿ ಹಾನಿಯಾಗಿರುವುದು.

ಟಾಪ್ ನ್ಯೂಸ್

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.