![200 surgeries in 5 days: A record breaking government hospital in Kolkata](https://www.udayavani.com/wp-content/uploads/2025/02/kolkatta-415x229.jpg)
![200 surgeries in 5 days: A record breaking government hospital in Kolkata](https://www.udayavani.com/wp-content/uploads/2025/02/kolkatta-415x229.jpg)
Team Udayavani, Nov 5, 2024, 9:52 AM IST
ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಿಂಗಳುಗಳ ಹಿಂದೆ ಅಕ್ರಮ ಮರಳುಗಾರಿಕೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ಪ್ರಕರಣಕ್ಕೆಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೋರ್ವರಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆಗೈಯ್ದು ಚಾಕುವಿನಿಂದ ಇರಿಯಲು ಯತ್ನಿಸಿದ ಘಟನೆ ಸೋಮೇಶ್ವರ ಪುರಸಭಾ ಕಚೇರಿಯ ಬಳಿ ಸೋಮವಾರ(ನ.4) ನಡೆದಿದೆ.
ಸೋಮೇಶ್ವರ ಉಚ್ಚಿಲದ, ಫಿಶರೀಶ್ ರೋಡ್ ನಿವಾಸಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಎಮ್ ಉಚ್ಚಿಲ (53) ಹಲ್ಲೆಗೊಳಗಾದ ವ್ಯಕ್ತಿ. ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸುನಿಲ್ ಪೂಜಾರಿ ಹಲ್ಲೆಗೈದಿದ್ದು, ಕಿಶೋರ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಿಶೋರ್ ಅವರು ಸೋಮವಾರ ಸ್ನೇಹಿತ ಪುಷ್ಪರಾಜ್ ಎಂಬವರ ಜತೆಯಲ್ಲಿ ಸೋಮೇಶ್ವರದ ಹೊಟೇಲ್ ನಲ್ಲಿ ಚಹಾ ಕುಡಿದು ಸ್ಕೂಟರ್ ನಲ್ಲಿ ಸಹ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸೋಮೇಶ್ವರ ಪುರಸಭಾ ಕಚೇರಿ ಬಳಿ ಸುನಿಲ್ ಪೂಜಾರಿ ಸ್ಕೂಟರ್ ತಡೆದು ಮರಳುಗಾರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ಕೊಲೆ ಬೆದರಿಕೆ ನೀಡಿದ್ದು, ಭುಜ ಮತ್ತು ಸೊಂಟಕ್ಕೆ ಹಲ್ಲೆ ನಡೆಸಿದ್ದಾನೆ.ಬಳಿಕ ಸೊಂಟದಿಂದ ಚಾಕು ಹೊರ ತೆಗೆದು ಇರಿಯಲು ಮುಂದಾಗಿದ್ದಾನೆ.ಈ ವೇಳೆ ಸ್ನೇಹಿತ ಪುಷ್ಪರಾಜ್ ಅವರು ಸ್ಕೂಟರನ್ಬು ವೇಗವಾಗಿ ಚಲಾಯಿಸಿದರ ಪರಿಣಾಮ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹಲ್ಲೆಗೊಳಗಾದ ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.
ಉಚ್ಚಿಲ ಬಟ್ಟಂಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಮರಳನ್ನ ವಶಪಡಿಸಿದ್ದು, ಆ ಪ್ರಕರಣದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಸುನಿಲ್ ಪೂಜಾರಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಉಳ್ಳಾಲ ಠಾಣೆಯಲ್ಲಿ ಆರೋಪಿ ಸುನಿಲ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Surgery: 5 ದಿನದಲ್ಲಿ 200 ಶಸ್ತ್ರಚಿಕಿತ್ಸೆ: ದಾಖಲೆ ಬರೆದ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆ
ISRO: ರಾಕೆಟ್ ಇಂಧನ ಮಿಶ್ರಣಕ್ಕೆ ದೇಶಿ ಯಂತ್ರ ಸಿದ್ಧ
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಇದೀಗ ಜಿಯೋ ಹಾಟ್ಸ್ಟಾರ್
ಫೆ.19 ಅಥವಾ 20ಕ್ಕೆ ದಿಲ್ಲಿ ಸಿಎಂ ಪ್ರಮಾಣ ಸ್ವೀಕಾರ ಕಾರ್ಯಕ್ರಮ?
CEC: ಮುಖ್ಯ ನ್ಯಾಯಾಧೀಶರ ಅಧಿಕಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಉಪ ರಾಷ್ಟ್ರಪತಿ ಧನಖರ್
You seem to have an Ad Blocker on.
To continue reading, please turn it off or whitelist Udayavani.