ಎಕ್ಕೂರಿನಲ್ಲಿ ಫಿಶರೀಸ್ ವಿಶ್ವವಿದ್ಯಾನಿಲಯ?
ಸ್ಥಾಪನೆ ಪ್ರಸ್ತಾವಕ್ಕೆ ಹಸುರು ನಿಶಾನೆ
Team Udayavani, Oct 27, 2020, 5:45 AM IST
ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು: ನಗರ ಹೊರವಲಯದ ಎಕ್ಕೂರಿನಲ್ಲಿ ಅರ್ಧ ಶತಮಾನ ಇತಿಹಾಸವುಳ್ಳ ಮೀನುಗಾರಿಕೆ ಕಾಲೇಜು ಇದ್ದು, ಇದನ್ನು ಕೇಂದ್ರೀಕರಿಸಿ ಮೀನುಗಾರಿಕೆ ವಿಶ್ವವಿದ್ಯಾನಿಲಯ ರೂಪುಗೊಳ್ಳುವುದು ಕರಾವಳಿ ಸಹಿತ ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಅನುಕೂಲ.
ಇಂಥ ಪ್ರಸ್ತಾವ ಸೋಮವಾರ ಮೀನುಗಾರಿಕೆ ಕಾಲೇಜಿ ನಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಂಡನೆ ಯಾಗಿದ್ದು, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸುರು ನಿಶಾನೆ ತೋರಿದ್ದಾರೆ. ಈ ಬಗ್ಗೆ ವಿಶೇಷ ಟಿಪ್ಪಣಿ ಸಹಿತ ಪ್ರಸ್ತಾ ವನೆಯನ್ನು ವಾರದೊಳಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಸಚಿವ ಕೋಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಡೀನ್ ಡಾ| ಸೆಂಥಿಲ್ ವೇಲು ಹಾಗೂ ಕಾಲೇಜಿನ ಕೌಶಲ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರದ ಸಂಯೋಜಕ ಡಾ| ರಾಮಚಂದ್ರ ನಾಯಕ್ ಅವರು ಕಾಲೇಜನ್ನು ವಿ.ವಿ.ಯನ್ನಾಗಿ ಪರಿವರ್ತಿಸಬೇಕು ಎಂಬ ಪ್ರಸ್ತಾವ ಮಂಡಿಸಿದರು.
ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿ.ವಿ. ಸ್ಥಾಪಿಸುವುದರಿಂದ ಆಗುವ ಪ್ರಯೋಜನ, ಮೀನಿನ ಉತ್ಪಾದನೆಯಲ್ಲಿ ಹೆಚ್ಚಳ, ಉದ್ಯೋಗ ಸೃಷ್ಟಿ, ಸ್ವ ಉದ್ಯೋಗದ ಅವಕಾಶಗಳು, ರಾಜ್ಯ ಮತ್ತು ದೇಶಕ್ಕೆ ಆಗುವ ಅನುಕೂಲಗಳು ಇತ್ಯಾದಿಯಾಗಿ ಸಮಗ್ರ ವಿವರಗಳನ್ನು ಒಳಗೊಂಡ ವಿಶೇಷ ಟಿಪ್ಪಣಿಯನ್ನು ಸಿದ್ಧಪಡಿಸಿ ವಾರದೊಳಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ಮೀನುಗಾರಿಕೆ ಕಾಲೇಜಿನ ಡೀನ್ ಅವರಿಗೆ ಸೂಚಿಸಿದರು.
ಈ ವಿಶೇಷ ಟಿಪ್ಪಣಿಯನ್ನು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯವರ ಮುಂದಿಟ್ಟು ಚರ್ಚಿಸಿ, ಬಳಿಕ ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು. ಸರಕಾರವು ಇದಕ್ಕೆ ಅನುಮತಿ ನೀಡಬಹುದೆಂಬ ವಿಶ್ವಾಸ ತನಗಿದೆ ಎಂದು ಸಚಿವರು ತಿಳಿಸಿದರು.
ಮೀನುಗಾರಿಕೆ ಕಾಲೇಜು 51ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 1960ರಲ್ಲಿ ಸ್ಥಾಪನೆಯಾದ ಇದು ರಾಜ್ಯದ ಏಕೈಕ ಮೀನುಗಾರಿಕೆ ಕಾಲೇಜು. ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಲ್ಲಿ ಮೀನುಗಾರಿಕೆ ವಿ.ವಿ. ಸ್ಥಾಪನೆಯಾಗಿದ್ದು, ಈ ರಾಜ್ಯಗಳಲ್ಲಿ ಮೀನು ಉತ್ಪಾದನೆ ಜಾಸ್ತಿಯಾಗಿದೆ. ಹಾಗಾಗಿ ರಾಜ್ಯದಲ್ಲಿಯೂ ಮೀನುಗಾರಿಕೆ ವಿ.ವಿ. ಸ್ಥಾಪಿಸಬೇಕು ಎಂದು ಡೀನ್ ಡಾ| ಸೆಂಥಿಲ್ ವೇಲು ಮನವಿ ಮಾಡಿದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅನುಷ್ಠಾನ, ಕೌಶಲ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಧುನಿಕ ಫಿಶ್ ಫಾರಂ ಮತ್ತು ಸಂಶೋಧನ ಕೇಂದ್ರ ಹಾಗೂ ಪ್ರಸ್ತಾವಿತ ಕರ್ನಾಟಕ ಮೀನುಗಾರಿಕೆ ವಿಜ್ಞಾನಗಳ ವಿ.ವಿ. ಸ್ಥಾಪನೆಯ ಬಗ್ಗೆ ಡಾ| ರಾಮಚಂದ್ರ ನಾಯಕ್ ವಿವರ ನೀಡಿದರು. ಮೀನುಗಾರಿಕೆ ವಿ.ವಿ. ಸ್ಥಾಪನೆಯಾದರೆ ಅದಕ್ಕೆ ಸಂಯೋಜನೆಗೊಂಡು ಗಂಗೊಳ್ಳಿ, ಶಿವಮೊಗ್ಗ, ವಿಜಯಪುರದಲ್ಲಿ ಹೊಸ ಮೀನುಗಾರಿಕೆ ಕಾಲೇಜು ಸ್ಥಾಪನೆ, 5 ಹೊಸ ಮೀನುಗಾರಿಕೆ ಪಾಲಿಟೆಕ್ನಿಕ್ ಮತ್ತು 5 ಮೀನುಗಾರಿಕೆ ಸಂಶೋಧನ ಕೇಂದ್ರಗಳನ್ನು ಆರಂಭಿಸಬಹುದಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಅರುಣ್ ಧನಪಾಲ್, ಕಾರ್ಪೊರೇಟರ್ ಭರತ್ ಕುಮಾರ್, ಮೀನುಗಾರಿಕೆ ಮುಖಂಡರಾದ ನಿತಿನ್ ಕುಮಾರ್, ಮೋಹನ್ ಬೆಂಗ್ರೆ, ಶಶಿಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್ ಡಿನ್ನರ್‌ಗೆ ಹೈ ಕಮಾಂಡ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.