ಮಂಗಳೂರು ವಿಶ್ವವಿದ್ಯಾನಿಲಯ; ಅತಿಥಿ ಉಪನ್ಯಾಸಕರ ಆಹ್ವಾನ
Team Udayavani, Sep 4, 2020, 4:20 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ಕೇಂದ್ರ ಚಿಕ್ಕಅಳುವಾರ, ವಿ.ವಿ. ಕಾಲೇಜು ಮಂಗಳೂರು, ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಕೋರ್ಸುಗಳಿಗೆ ಮತ್ತು ಮಂಗಳೂರು ವಿ.ವಿ. ಘಟಕ ಕಾಲೇಜುಗಳಾದ ವಿ.ವಿ. ಕಾಲೇಜು ಮಂಗಳೂರು, ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ, ವಿ.ವಿ. ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ ಮತ್ತು ವಿ.ವಿ. ಕಾಲೇಜು ನೆಲ್ಯಾಡಿಯ ಪದವಿ ಕೋರ್ಸುಗಳಿಗೆ 2020-21ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಆವಶ್ಯಕತೆ ಇದೆ.
ಸ್ನಾತಕೋತ್ತರ ಪದವಿ ಹೊಂದಿರುವ (ಕನಿಷ್ಠ ಶೇ. 55 ಅಂಕ) (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿ ಗಳಿಗೆ ಕನಿಷ್ಠ ಶೇ.50 ಅಂಕಗಳೊಂದಿಗೆ) ಅರ್ಹ ಅಭ್ಯರ್ಥಿ ಗಳು ಅರ್ಜಿಯನ್ನು www.mangaloreuniversity.ac.in ನಿಂದ ಪಡೆದು, ಭರ್ತಿ ಮಾಡಿ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಸೆ. 10ರ ಸಂಜೆ 5.30ರೊಳಗೆ ಕುಲಸಚಿವರ ಕಚೇರಿಗೆ ಸಲ್ಲಿಸಬೇಕು. ಖಾಲಿ ಹುದ್ದೆಗಳ ವಿವರ ವೆಬ್‌ಸೈಟ್‌ನಲ್ಲಿದೆ.
ಯುಜಿಸಿ ಎನ್‌ಇಟಿ/ಎಸ್‌ಎಲ್‌ಇಟಿ ಉತ್ತೀರ್ಣತೆ/ಎಂ.ಫಿಲ್/ಪಿಎಚ್.ಡಿ. ಪದವೀಧರರಿಗೆ ಆದ್ಯತೆ. ಅಭ್ಯರ್ಥಿಗಳು ಇ-ಮೇಲ್ ವಿಳಾಸ ಮತ್ತು ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಿರ ಬೇಕು. ಆಯ್ಕೆಯಾದವರು ವಿ.ವಿ. ಆವರಣ, ಸ್ನಾತಕೋತ್ತರ ಕೇಂದ್ರ, ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರ ಬೇಕು. ಸಂದರ್ಶನದ ದಿನಾಂಕಗಳನ್ನು ವಿ.ವಿ. ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.