
ರಸ್ತೆಯ ಬೀದಿ ದೀಪಗಳನ್ನು ಸರಿಪಡಿಸಲು ಆಗ್ರಹ
ಕಂದಾವರ ಗ್ರಾಮ ಪಂಚಾಯತ್ ಗ್ರಾಮಸಭೆ
Team Udayavani, Apr 21, 2022, 10:56 AM IST

ಕೈಕಂಬ: ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕಂದಾವರ, ಕೊಳಂಬೆ ಮತ್ತು ಅದ್ಯಪಾಡಿ ಗ್ರಾಮಗಳ 2021-22ನೇ ಸಾಲಿಗೆ ಸಂಬಂಧಪಟ್ಟ 2ನೇ ಹಂತದ ಗ್ರಾಮ ಸಭೆಯು ಕಂದಾವರ ಗ್ರಾ.ಪಂ. ಅಧ್ಯಕ್ಷ ಉಮೇಶ್ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನ ಮಂದಿರದಲ್ಲಿ ಜರಗಿತು.
ಬಜಪೆ ಮುರನಗರದಿಂದ ಹಳೆ ವಿಮಾನ ನಿಲ್ದಾಣ ತನಕ ರಸ್ತೆಯ ದಾರಿ ದೀಪಗಳು ಎರಡು ವಾರದಿಂದ ಉರಿಯುತ್ತಿಲ್ಲ. ಇದರಿಂದ ರಸ್ತೆ ಕತ್ತಲಾಗಿ, ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆ ಹಾಗೂ ದಾರಿದೀಪದ ಸೌಕರ್ಯದ ನಿರ್ವಹಣೆ ವಿಮಾನ ನಿಲ್ದಾಣ ಪ್ರಾಧಿಕಾರ ವಹಿಸಿಕೊಳ್ಳುತ್ತಿತ್ತು. ಅದರೆ ಈಗ ವಿಮಾನ ನಿಲ್ದಾಣ ಖಾಸಗೀಕರಣವಾಗಿದ್ದು ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ. ರಸ್ತೆ ಹದಗೆಟ್ಟಿದೆ, ದಾರಿದೀಪ ಉರಿಯುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಕಂದಾವರ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಂದಾವರ ಗ್ರಾ.ಪಂ. ಪಿಡಿಒ ಜಗದೀಶ್ ಎಸ್. ಅವರು ಈ ಬಗ್ಗೆ ಉತ್ತರಿಸಿ, ದಾರಿದೀಪ ಉರಿಯದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಈ ರಸ್ತೆಯ ನಿರ್ವಹಣೆ ವಿಮಾನ ನಿಲ್ದಾಣ ಪ್ರಾಧಿಕಾರ ವಹಿಸಿಕೊಂಡು ಬಂದಿರುವ ಬರುವ ಕಾರಣ ನಾವು ವಿಮಾನ ನಿಲ್ದಾಣದ ಅಧಿಕಾರಿಯವರ ಗಮನಕ್ಕೆ ತರುತ್ತೇವೆ. ಕಂದಾವರ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಅವರ ಕಟ್ಟಡ ಹಾಗೂ ಇತರ ತೆರಿಗೆಗಳು ನಮಗೆ ಬಂದಿಲ್ಲ. ಈ ಬಗ್ಗೆಯೂ ಸದ್ಯದಲ್ಲಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಅಪಾಯದಲ್ಲಿ ಸುಂಕದಕಟ್ಟೆ ಅಂಗನವಾಡಿ ಕೇಂದ್ರ
ಸುಂಕದಕಟ್ಟೆಯ ಖಾಸಗಿ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆಗಾಲ ಆರಂಭಕ್ಕೂ ಮುನ್ನವೇ ರಿಪೇರಿ ಮಾಡಬೇಕಿದೆ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಜಾಗ ಹಾಗೂ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಮನವಿ ಬಂತು.ಸಭೆಯಲ್ಲಿ ಉತ್ತರಿಸಿದ ಪಿಡಿಒ ಜಗದೀಶ್ ಎಸ್., ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ಜಾಗ ದೇಣಿಗೆಯಾಗಿ ನೀಡಲು ಓರ್ವರು ಮುಂದೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಮಾಡಲು ನರೇಗಾ ಯೋಜನೆಯಡಿಯಲ್ಲಿ ಮಾತ್ರ ಅವಕಾಶ ಇದೆ. ಅದರೆ ನರೇಗಾದಲ್ಲಿ ಕೂಲಿ ಹಣ ಬೇಗ ಬರುತ್ತದೆ. ನಿರ್ಮಾಣದ ವಸ್ತುಗಳ ಹಣ ಬೇಗನೆ ಬರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶಶಿಕಲಾ ಅವರು ಈ ಬಗ್ಗೆ ಮಾಹಿತಿ ನೀಡಿ, ಜಾಗವನ್ನು ಇಲಾಖೆ ಹೆಸರಲ್ಲಿ ಮಾಡಬೇಕು. ಬಳಿಕ ಅದಕ್ಕೆ ಅನುದಾನ ಬಿಡುಗಡೆಯಾಗಲಿದೆ ಎಂದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 14 ಅಂಗನವಾಡಿ ಕೇಂದ್ರಗಳಿವೆ. ಅದ್ಯಪಾಡಿ ಅಂಗನವಾಡಿ ಕೇಂದ್ರದಲ್ಲಿ ಖಾಲಿಯಿದ್ದ ಕಾರ್ಯಕರ್ತೆ ಹುದ್ದೆಗೆ ನೇಮಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಶಿಕಲಾ ಹೇಳಿದರು.
ಬಿದಿರು ಗಿಡಗಳನ್ನು ನೆಡಲು ಸಿದ್ಧ
ಬಿದಿರು ಗಿಡಗಳು ಕಡಿಮೆಯಾಗುತ್ತಿದೆ. ನೀರು ನಿಲ್ಲುವ ಜಾಗ ಇದ್ದಲ್ಲಿ ಹೇಳಿದರೆ ಅರಣ್ಯ ಇಲಾಖೆ ಖುದ್ದಾಗಿ ಬಂತು ಬಿದಿರು ಗಿಡವನ್ನು ನೆಡಲಿದೆ ಎಂದು ಅರಣ್ಯ ಇಲಾಖೆಯ ಕೈಕಂಬ ವಿಭಾಗದ ಅರಣ್ಯ ರಕ್ಷಕ ಕ್ಯಾತಲಿಂಗೇಗೌಡ ಸಭೆಗೆ ತಿಳಿಸಿದರು.
ಸೌಹಾರ್ದನಗರದಲ್ಲಿ ದಾರಿ ದೀಪ ಉರಿಯುವುದಿಲ್ಲ, ಮಸೀದಿ ಬಳಿ ಚರಂಡಿಗೆ ಸ್ಲ್ಯಾಬ್ ಹಾಕಿ ಮುಚ್ಚಬೇಕು, ಪ್ರೇಮಾಛಾಯ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಬೇಕು ಎಂದು ಬೇಡಿಕೆ ಸಭೆಯಲ್ಲಿ ಬಂತು. ಪ್ರೇಮಾ ಛಾಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಶಾಸಕರಲ್ಲಿ ಮನವಿ ಮಾಡಲಾಗಿದೆ. ಅದನ್ನು ಮಾಡಲಾಗುವುದು ಎಂದು ಅಧ್ಯಕ್ಷ ಉಮೇಶ್ ಮೂಲ್ಯ ಹೇಳಿದರು.
ವಲಸೆ ಕಾರ್ಮಿಕರ ಮಕ್ಕಳು ಶಾಲೆಗೆ ಬರುವಂತೆ ಎಲ್ಲರೂ ಸಹಕರಿಸಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ. ಕೋವಿಡ್‌ನಿಂದ ಮಕ್ಕಳ ಭೌತಿಕ ಹಾಗೂ ಕೌಶಲ ಕೊರತೆಯನ್ನು ತುಂಬಲು ಈ ಬಾರಿ ಮೇ 15ರಿಂದ ಶಾಲಾರಂಭವಾಗಲಿದೆ ಎಂದು ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ವಿಶ್ವನಾಥ ಮಾಹಿತಿ ನೀಡಿದರು.
ಜಲಜೀವನ ಮಿಶನ್ ಯೋಜನೆಯಿಂದ ನಮಗೆ ನೀರು ಬೇಡ
ನಮಗೆ ಈಗಾಗಲೇ ಕೊಳವೆ ಬಾವಿಯಿಂದ ನೇರ ನೀರು ಸರಬರಾಜು ಆಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಲೂ ನೀರು ಸರಬರಾಜು ಆಗುತ್ತಿದೆ. ನಮ್ಮ ಪ್ರದೇಶದಲ್ಲಿರುವ ಮನೆಗಳಿಗೆ ನೀರಿನ ಸಂಪರ್ಕ ಈಗಾಲೇ ಇದೆ. ಅಗಿರುವಾಗ ಎಲ್ಲ ಯೋಜನೆಗಳು ಒಂದೇ. ಹೆಸರು ಮಾತ್ರ ಬೇರೆ. ಜಲಜೀವನ ಮಿಶನ್ ಯೋಜನೆಯಲ್ಲಿ ನಮಗೆ ನೀರು ಬೇಡ ಎಂದು ಸಭೆಯಲ್ಲಿ ಕೆಲ ಗ್ರಾಮಸ್ಥರು ಮನವಿ ಮಾಡಿದರು.
ವೈಯಕ್ತಿಕ ಆರೋಪ, ಬಿಸಿ ಚರ್ಚೆ ಸಭೆಯಲ್ಲಿ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.ಉಪಾಧ್ಯಕ್ಷೆ ಚಂದ್ರಿಕಾ ಹಾಗೂ ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.ಪಂಚಾಯತ್‌ನ ಆಡಳಿತ ವರದಿಯನ್ನು ಕಾರ್ಯದರ್ಶಿ ಜಲಜಾಕ್ಷಿ ಪಿ. ಎಸ್. ವಾಚಿಸಿದರು.ಪಿಡಿಒ ಜಗದೀಶ್ ಎಸ್. ಸಭೆ ನಿರ್ವಹಿಸಿದರು. ಕೈಕಂಬ ಮೆಸ್ಕಾಂ ಶಾಖಾಧಿಕಾರಿ ಲೋಕೇಶ್ ಇಲಾಖೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.