Mangaluru: ರೌಡಿಶೀಟರ್‌ನ ಪಿಸ್ತೂಲ್‌ನಿಂದ ಗುಂಡು ಹಾರಾಟ: ಧರ್ಮಗುರುವಿಗೆ ಗಾಯ
Team Udayavani, Jan 7, 2025, 11:52 AM IST
ಮಂಗಳೂರು: ರೌಡಿಶೀಟರ್‌ನೋರ್ವನ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಧರ್ಮಗುರುವೊಬ್ಬರು ಗಾಯಗೊಂಡ ಘಟನೆ ನಗರದ ಹೊರವಲಯದ ವಾಮಂಜೂರಿನ ಅಂಗಡಿ ಯೊಂದರಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಎದುರುಪದವು ಮಸೀದಿಯ ಧರ್ಮಗುರು ಸಫ್ವಾನ್ (25)ಗಾಯಗೊಂಡವರು. ರೌಡಿಶೀಟರ್, ಅಂಗಡಿ ಮಾಲಕ ಬದ್ರುದ್ದೀನ್ ಯಾನೆ ಅದ್ದು (34) ಪ್ರಕರಣದ ಆರೋಪಿ.
ಘಟನೆಯ ವಿವರ
ರೌಡಿಶೀಟರ್ ಬದ್ರುದ್ದೀನ್ ವಾಮಂಜೂರಿನಲ್ಲಿ ಸೆಕೆಂಡ್ ಹ್ಯಾಂಡ್ ಸೇಲ್ ವ್ಯವಹಾರ ನಡೆಸುತ್ತಿದ್ದು ಸಫ್ವಾನ್ ಅವರಿಗೆ 10,000 ರೂ. ನಗದು ಆವಶ್ಯಕತೆಯಿತ್ತು. ಅದ್ದುವಿಗೆ ಆ ಮೊತ್ತವನ್ನು ಗೂಗಲ್ ಪೇ ಮಾಡಿ ನಗದು ಪಡೆಯಲು ಆತನ ಅಂಗಡಿಗೆ ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಕುಳಿತಿದ್ದ ಅದ್ದು ತನ್ನ ಪಿಸ್ತೂಲ್ ಅನ್ನು ಹಿಡಿದುಕೊಂಡು ಮಾತನಾಡುತ್ತಿದ್ದ. ಆಗ ಆಕಸ್ಮಿಕವಾಗಿ ಗುಂಡು ಹಾರಿ ಸಫ್ವಾನ್ ಅವರ ಹೊಟ್ಟೆಗೆ ಹೊಕ್ಕಿದೆ ಎಂದು ತಿಳಿದುಬಂದಿದೆ.
ಅಕ್ರಮ ಪಿಸ್ತೂಲ್
ಬದ್ರುದ್ದೀನ್ ಯಾನೆ ಅದ್ದು ರೌಡಿಶೀಟರ್ ಆಗಿದ್ದು ಪಿಸ್ತೂಲ್‌ಗೆ ಲೈಸನ್ಸ್ ಹೊಂದಿರಲಿಲ್ಲ. ಪಿಸ್ತೂಲ್ ಅನ್ನು ಬದ್ರುದ್ದೀನ್‌ಗೆ ಮೂಡುಶೆಡ್ಡೆಯ ಇಮ್ರಾನ್ ನೀಡಿದ್ದ. ಈತನ ಮೇಲೆ ಚರಣ್‌ರಾಜ್ ಕೊಲೆ ಸೇರಿದಂತೆ ಹಲವು ಪ್ರಕರಣಗಳಿವೆ.
ಗಾಯಾಳು ಪ್ರಾಣಾಪಾಯದಿಂದ ಪಾರಾಗಿರು ವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ