Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
ಎಂಎಸ್‌ಎಂಇ ಆ್ಯಂಡ್ ಸ್ಟಾರ್ಟ್ ಅಪ್ ಕಾನ್‌ಕ್ಲೇವ್‌ನಲ್ಲಿ ಪ್ರಶಸ್ತಿ ಪ್ರದಾನ
Team Udayavani, Nov 20, 2024, 10:19 AM IST
ಬೆಂಗಳೂರು: ಗ್ಲೋಬಲ್ ಚೇಂಬರ್ ಫೋರ್ ಸಾರಸ್ವತ್ ಎಂಟರ್‌ಪ್ರೀರ‍್ಸ್ ಮತ್ತು ಮಾಹೆ ಬೆಂಗಳೂರು ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎಂಎಸ್‌ಎಂಇ ಆ್ಯಂಡ್ ಸ್ಟಾರ್ಟ್ ಅಪ್ ಕಾನ್‌ಕ್ಲೇವ್‌ನಲ್ಲಿ ನಗರದ ಎಂ.ಜಿ. ರಸ್ತೆಯ ಬಳ್ಳಾಲ್‌ಭಾಗ್‌ನಲ್ಲಿರುವ ಪ್ರತಿಷ್ಠಿತ ‘ವರ್ಟೆಕ್ಸ್ ವರ್ಕ್ಸ್ ಸ್ಪೇಸ್’ ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್ 2024 ಪ್ರದಾನ ಮಾಡಲಾಯಿತು.
ಸಂಸ್ಥೆಯ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಹಾಗೂ ಮಂಗಳದೀಪ್ ಅವರು ಇರೆಟೆಕ್ಸ್ ಪ್ರೀಮಿಯರ್ ಇಂಡಿಯಾ ಪ್ರೈ.ಲಿ.ನ ಆಡಳಿತ ನಿರ್ದೇಶಕರಾದ ಜಿ.ಜಿ ಶೆಣೈ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ನಾವೀನ್ಯತೆ, ನಾಯಕತ್ವ ಸಮರ್ಪಣೆ ಮತ್ತು ಬದ್ಧತೆಯನ್ನು ಗುರುತಿಸಿ ವರ್ಟೆಕ್ಸ್ ವರ್ಕ್ಸ್ಪೇಸ್’ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಹಿಂದೆ ರಾಜ್ಯ ಸರಕಾರ “ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್’ ಯೋಜನೆಯನ್ನು ಸ್ಮಾರ್ಟ್ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತ್ತು. ಕೋವಿಡ್‌ನಿಂದಾಗಿ ಹಲವಾರು ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಮಂಗಳೂರಿಗೆ ಬರುವ ಯೋಜನೆಯನ್ನೂ ರೂಪಿಸಿತ್ತು. ಈ ಕಂಪೆನಿಗಳ ಬೇಡಿಕೆಯನ್ನು ಅರ್ಥೈಸಿ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆ ಮಂಗಳೂರಿನಲ್ಲೇ ಪ್ರಪ್ರಥಮವಾಗಿ ವರ್ಟೆಕ್ಸ್ ವರ್ಕ್ಸ್ಟೇಸ್ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದರು.
ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ಹೊಂದಿರುವಂತಹ ಸ್ಥಳ ಹುಡುಕಾಟ ಮಾಡುವಂತ ಸಾಧ್ಯತೆ ಹೆಚ್ಚುಕ್ತಿರುವುದರಿಂದ ಆಗತ್ಯ ಸೌಲಭ್ಯಗಳನ್ನು ಕೊಡುವ ಕೆಲಸ “ವರ್ಟೆಕ್ಸ್ ವರ್ಕ್ಸ್ ಸ್ಪೇಸ್’ ‘ ಪೂರೈಸಲಿದೆ. ಇಲ್ಲಿ ಕಾರ್ಯಾಚರಣೆಗೆ ಬೇಕಾದಂತಹ ಕಾಮನ್ ರಿಸೆಪ್ಟನ್ ಡೆಸ್ಕ್, ಕಾನ್ಫರೆನ್ಸ್ ರೂಮ್ಸ್, ಮೀಟಿಂಗ್ ರೂಮ್, ವೈ-ಫೈ ಇಂಟರ್‌ನೆಟ್, ವಿಶಾಲವಾದ ಕಾರ್ ಪಾರ್ಕಿಂಗ್, ಪಾಂಟ್ರಿ, ಕೆಫೆ ಮುಂತಾದ ಸೌಲಭ್ಯಗಳು ಲಭ್ಯವಿವೆ.
ಕಳೆದ 3 ವರ್ಷಗಳಲ್ಲಿ 27 ಕಾರ್ಪೋರೇಟ್ ಸಂಸ್ಥೆಗಳು ವರ್ಟೆಕ್ಸ್ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದು 1800 ಕ್ಕೂ ಹಚ್ಚುವರಿ ಉದ್ಯೋಗವಕಾಶಗಳನ್ನು ಮಂಗಳೂರಿನಲ್ಲಿ ಸೃಷ್ಟಿಸಿವೆ. ಇದೀಗ ಅನೇಕ ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳಿಂದ ಬೇಡಿಕೆ ಹೆಚ್ಚಾಗುತ್ತಿದ್ದು ಹಾಗೂ ಮಂಗಳೂರಿನ ಯುವ ಜನತೆಗೆ ಮತ್ತಷ್ಟು ಉದ್ಯೋಗವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯು ನಗರದ ಬಿಜೈ – ಕಾಪಿಕಾಡ್‌ನಲ್ಲಿ ತಮ್ಮ 3ನೇ ಯೋಜನೆಯಾದ ಅಶೋಕಾ ಬುಸಿನೆಸ್ ಸೆಂಟರ್‌ನ್ನು ನಿರ್ಮಿಸುತ್ತಿದೆ. ಇಲ್ಲಿ ಸಂಸ್ಥೆಗಳ ಕಾರ್ಯಾಚರಣೆಗೆ ಬೇಕಾದಂತಹ ಕಾನ್ಫರೆನ್ಸ್ ರೂಮ್ಸ್, ಮೀಟಿಂಗ್ ರೂಮ್ಸ್, ಬ್ಯಾಕ್ವೆಟ್ ಹಾಲ್, ಆಡಿಟೋರಿಯಮ್, ಮನೋರಂಜನಾವಲಯ, ಗೇಮಿಂಗ್ ಝೋನ್, ಸೆಕ್ಯರ‍್ಡ್ ಆಕ್ಸೆಸ್ ಕಂಟ್ರೋಲ್, ಹೆಲ್ಪ ಡೆಸ್ಕ್ ವಿದ್ ವಿಸಿಟರ್ ಲಾಬಿ, ವಿಶಾಲವಾದ 3 ಲೆವೆಲ್‌ನ ಕಾರ್ ಪಾರ್ಕಿಂಗ್, ವೈ-ಫೈ ಇಂಟರ್‌ನೆಟ್, ಕೆಫೆ ಮುಂತಾದ ಸೌಲಭ್ಯಗಳನ್ನೊಳಗೊಳ್ಳಲಿದೆ.
ಕಚೇರಿ ಹಾಗೂ ವ್ಯವಹಾರ ಸ್ಥಳಗಳನ್ನು ದೊಡ್ಡ ಕಾರ್ಪೋರೇಟ್ ಸ್ಟೇಸ್ ಆಗಿ ಸುಂದರವಾಗಿ ನಿರ್ಮಾಣ ಮಾಡುತ್ತಿದೆ. ವರ್ಟೆಕ್ಸ್ ಸಂಸ್ಥೆ ಸ್ಥಳೀಯ ಸ್ಟಾರ್ಟ್ಅಪ್ ಮತ್ತು ಕಾರ್ಪೋರೇಟ್ ಸಮುದಾಯದ ಇಂತಹ ಕಾರ್ಯಕ್ಷೇತ್ರಕ್ಕೆ ಬೇಕಾದ ಎಲ್ಲಾ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಿ ಸಮಗ್ರ ಅಭಿವೃದ್ದಿಗೆ ಬದ್ಧವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.