Moodabidri: ಸಂಚಾರ ನಿಯಮ ಉಲ್ಲಂಘನೆ; ಪೊಲೀಸರಿಂದ ಕ್ರಮ
Team Udayavani, May 24, 2023, 4:20 PM IST
ಮೂಡುಬಿದಿರೆ: ಬಸ್‌ನಿಲ್ದಾಣದ ಪ್ರವೇಶ ಭಾಗದಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಚಾಲಕರು ಕೊನೆಗೂ ಪೊಲೀಸರು ತಡೆದು ಕಾನೂನು ಕ್ರಮ ಜರಗಿಸತೊಡಗಿದ್ದಾರೆ.
ಶನಿವಾರ ಉದಯವಾಣಿ ಸುದಿನದಲ್ಲಿ ಮೂಡುಬಿದಿರೆ ಪೇಟೆಯಲ್ಲಿ, ಅದರಲ್ಲೂ ಬಸ್ ನಿಲ್ದಾಣದ ಪ್ರವೇಶ ಭಾಗದಲ್ಲಿ ದ್ವಿಚಕ್ರ, ತ್ರಿಚಕ್ರ, ಚತುಷcಕ್ರ ವಾಹನಗಳು ಎತ್ತರದಲ್ಲಿರುವ ಬಸ್‌ನಿಲ್ದಾಣದ ಕಡೆಯಿಂದ ಕೆಳಗಿಳಿದು ರಾಷ್ಟ್ರೀಯ ಹೆದ್ದಾರಿ ತಲುಪಲು ವೇಗವಾಗಿ ಬರುತ್ತಿರುವುದರ ಬಗ್ಗೆ ಸಚಿತ್ರ ವರದಿ ಮಾಡಲಾಗಿತ್ತು. ಶನಿವಾರ ಮತ್ತೆ ಪರಿವೀಕ್ಷಿಸಿದಾಗ ಹಿಂದಿನ ದಿನದ ಸ್ಥಿತಿ ಗತಿಯೇ ಮುಂದುವರಿದಿತ್ತು. ಈ ಬಗ್ಗೆ ಸೋಮವಾರದ ಸುದಿನದಲ್ಲಿ ಮತ್ತೆ ವರದಿ ಮಾಡಲಾಗಿತ್ತು.
ಇದೆಲ್ಲದಕ್ಕೆ ಸ್ಪಂದಿಸಿದ ಮೂಡುಬಿದಿರೆ ಪೊಲೀಸರು ಮಂಗಳವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು, ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಚಾಲಕರನ್ನು ತಡೆದು ಕ್ರಮ ಜರಗಿಸತೊಡಗಿರುವುದು ಕಂಡುಬಂತು.
ಇದೇ ರೀತಿ ಆಳ್ವಾಸ್ ಆಸ್ಪತ್ರೆ ರಸ್ತೆ ಯಲ್ಲಿಯೂ ಏಕಮುಖ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನಗಳು ಪೊಲೀಸರ ಕಣ್ಣಿಗೆ ಬಿದ್ದು ಚಾಲಕರು ಪೊಲೀಸರ ಕ್ರಮಕ್ಕೆ ಈಡಾಗಬೇಕಾಯಿತು. ಹೆಲ್ಮೆಟ್ ಧರಿಸದ ವಾಹನ ಚಾಲಕರು, ರಾಂಗ್ ಸೈಡ್‌ನಲ್ಲಿ ಸಾಗುವವರು, ಚಾಲನ ಅನುಜ್ಞಾ ಪತ್ರ ಇಲ್ಲದೆ ಚಾಹನ ಚಲಾಯಿಸುವವರು, ವಿಶೇಷವಾಗಿ ಬಸ್‌ನಿಲ್ದಾಣದಿಂದ ಕೆಳಗೆ ಏಕಮುಖ ಸಂಚಾರ ನಿಯಮ ಉಲ್ಲಂಘಿಸಿ ಇಳಿದವರು, ಇದೇ ರೀತಿ ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ ಯೂ ಹಲವಾರು ನಿಯಮ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಪೊಲೀಸರು ಕ್ರಮಕೈಗೊಂಡರು. ಎರಡು ತಂಡಗಳಲ್ಲಿ 15 ಮಂದಿ ಪೊಲೀಸ್ ಅಧಿಕಾರಿಗಳು, ಸಿಬಂದಿ 25ಕ್ಕೂ ಅಧಿಕ ಪ್ರಕರಣಗಳನ್ನು ಪರಿಶೀಲಿಸಿ ದಂಡ ಮತ್ತು ಇತರ ಕ್ರಮ ಜರಗಿಸಿದರು. ಸಿಬಂದಿ ಕೊರತೆ ಇದ್ದರೂ ಇದ್ದುದರಲ್ಲೇ ಹೊಂದಾಣಿಕೆ ಮಾಡಿಕೊಂಡು ಕಾರ್ಯಾ ಚ ರಣೆ ನಡೆ ಸಿದ ಪೊಲೀಸರ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.