ಒತ್ತುವರಿ, ತ್ಯಾಜ್ಯ ನಿವಾರಿಸದಿದ್ದರೆ ಸಮಸ್ಯೆ
ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ರಾಜಕಾಲುವೆಗಳು
Team Udayavani, Apr 8, 2022, 10:24 AM IST
ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಸುಮಾರು 80 ಕಿ.ಮೀ. ರಸ್ತೆಯಲ್ಲಿ ಸುಮಾರು 15 ಕಿ.ಮೀ.ಗಿಂತ ಹೆಚ್ಚು ದೂರಕ್ಕೆ ರಾಜ ಕಾಲುವೆಗಳು ಹರಿಯುತ್ತವೆ. ಸುಮಾರು 160ಕ್ಕೂ ಹೆಚ್ಚು ತೋಡುಗಳನ್ನು ಕಾಣಬಹುದಾಗಿದೆ. ಎಲ್ಲ ತೋಡುಗಳ ನಿರ್ವಹಣೆ ಅಸಮರ್ಪಕವಾಗಿದ್ದು, ಹೂಳು ತುಂಬಿದೆ. ಮಳೆ ನೀರು ಸರಿಯಾಗಿ ಹರಿಯಲು ಅಸಾಧ್ಯವಾಗುವಂಥ ಸ್ಥಿತಿ ಇದೆ. ಕೂಡಲೇ ಹೂಳೆತ್ತುವ ಕಾರ್ಯವನ್ನು ಬಿರುಸಿನಿಂದ ಮಾಡಬೇಕಿದೆ. ಇಲ್ಲವಾದರೆ ಮಳೆ ಸುರಿದ ಕೂಡಲೇ ಕೃತಕ ನೆರೆ ಸೃಷ್ಟಿಯಾಗಬಹುದು.
ರಾಜಕಾಲುವೆಯ ಬಳಿ ಇರುವ ಮನೆಗಳು ಕಾಲುವೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ಈ ಸಮಸ್ಯೆ ಬೆಳೆಯಲು ಮುಖ್ಯ ಕಾರಣ.
ಇಲ್ಲಿಯ ಬಪ್ಪನಾಡು ದೇವಸ್ಥಾನ ಬಳಿಯ ಕೊಪ್ಪಲ ಕೆರೆಯ ಬಳಿಯ ರಾಜ ಕಾಲುವೆಯ ಬಹುತೇಕ ಭಾಗ ಒತ್ತುವರಿಯಾಗಿದೆ. ಒಂದು ಭಾಗದಲ್ಲಿ ಆವರಣ ಗೋಡೆ ಇದ್ದರೆ, ಮತ್ತೂಂದು ಭಾಗದಲ್ಲಿ ಆವರಣ ಗೋಡೆ ಎಲ್ಲವನ್ನೂ ಮುಗಿಸಿ ಹಾಕಿದೆ.
ನಗರ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಿ ಕ್ರಮ ಕೈಗೊಳ್ಳಬೇಕಿದೆ. ಮಳೆ ಬಂದಾಗ ಕೃತಕ ನೆರೆಯಂತಹ ಗಂಡಾಂತರದಿಂದ ಪಾರಾ ಗಲು ಈ ಕ್ರಮ ಅತೀ ಅಗತ್ಯವಾಗಿದೆ.
ಪಂಚಮಹಲ್ ಬಳಿಯ ರಾಜಕಾಲು ವೆಯಲ್ಲಿ ಅತೀ ದೂರದಿಂದ ಬಂದ ಮಳೆ ನೀರು ಹಾದುಹೋಗುತ್ತದೆ. ಅದೇ ರೀತಿ ಕಾರ್ನಾಡು ಹರಿಹರ ಕ್ಷೇತ್ರದ ಬಳಿಯ ಧರ್ಮಸ್ಥಾನ ರಸ್ತೆಯ ಸಮೀಪದಲ್ಲೂ ಇರುವ ರಾಜಕಾಲುವೆ ಬಹಳಷ್ಟು ದೂರದ ನೀರನ್ನು ನದಿಗೆ ಸಾಗಿಸುವ ಮಾರ್ಗವಾಗಿದೆ.
ಒಳಚರಂಡಿ ನಿರ್ಮಾಣವಾಗಲಿ
ಮೂಲ್ಕಿಯಲ್ಲಿ ಒಳ ಚರಂಡಿ ವ್ಯವಸ್ಥೆ ಕೆಲವು ತಾಂತ್ರಿಕ ಕಾರಣಗಳಿಂದ ಇನ್ನೂ ಪೂರ್ಣಗೊಳ್ಳುವ ಹಂತಕ್ಕೆ ಬಂದಂತಿಲ್ಲ. ಬಹು ಮಹಡಿಯ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು ಬೆಳೆದು ನಿಂತಿವೆ. ಇಲ್ಲಿಗೆ ಅತೀ ಅಗತ್ಯವಾಗಿರುವ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಿ ನೀರು ಹರಿಯಲಾರಂಭಿಸಿದರೆ ಮಾತ್ರ ಮೂಲ್ಕಿಯ ಜನರು ನೆಮ್ಮದಿಯಿಂದ ಇರಲು ಸಾಧ್ಯ.
ಈಗಾಗಲೇ ಚರಂಡಿಯ ಕಾಮಗಾರಿಯನ್ನು ಆರಂಭಿ ಸಿರುವ ನಗರ ಪಂಚಾಯತ್ ಗೆ ಸವಾಲಾಗಿರುವುದು ಜನರು ಕಸ ಕಡ್ಡಿ ಅಥವಾ ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿಯುವುದು ಮತ್ತು ಚರಂಡಿ ಸರಿಪಡಿಸಲು ಮರೆತು ಹೋಗಿರುವುದು. ನಗರ ಪಂಚಾಯತ್‌ನ ಜತೆಗೆ ಸಾರ್ವಜನಿಕರು ಚರಂಡಿ ಸಮಸ್ಯೆ ಬಿಗಡಾಯಿಸದಂತೆ ಸಹಕರಿಸುವುದು ಅತೀ ಅಗತ್ಯವಾಗಿದೆ. ಈಗಾಗಲೇ ಕೆಲವೆಡೆ ರಸ್ತೆ ಬದಿಯಲ್ಲಿ ಕಟ್ಟಡ ಸಾಮಗ್ರಿ ಸಂಗ್ರಹಿಸಿರುವುದನ್ನು ತೆರವುಗೊಳಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸವನ್ನು ಕೂಡ ನಗರ ಪಂಚಾಯತ್ ಮಾಡಿದೆ. ಈಗಾಗಲೇ ನಗರ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ರಸ್ತೆಗಳ ಚರಂಡಿಗಳ ಸ್ವತ್ಛತೆಯ ಕೆಲಸವನ್ನು ಆರಂಭಿಸಲಾಗಿದೆ. ಇತರ ಹಲವೆಡೆ ತೋಡುಗಳನ್ನು ಸರಿಪಡಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕಿದೆ.
ಸೂಕ್ತ ಕ್ರಮ
ಸಾರ್ವಜನಿಕರು ಕಾಲುವೆಯ ಜಾಗವನ್ನು ಅತಿಕ್ರಮಿಸಿದರೆ ಸೂಕ್ತ ಕ್ರಮ ಜರಗಿಸಿ ತೆರವುಗೊಳಿಸಲು ಮುಂದಾಗುತ್ತೇವೆ. ಒಂದು ವೇಳೆ ಚರಂಡಿಯಲ್ಲಿ ನೀರು ಹರಿದು ಹೋಗಲು ಅಗತ್ಯ ಇರುವ ಜಾಗ ಯಾರದೇ ಆಗಿದ್ದರೂ ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಳ್ಳುವ ನಿಯಮವನ್ನು ಕೂಡ ನಗರ ಪಂಚಾಯತ್ ಬಳಸಿಕೊಳ್ಳಲು ಸಾಧ್ಯವಿದೆ. –ಪಿ. ಚಂದ್ರ ಪೂಜಾರಿ, ಮುಖ್ಯಾಧಿಕಾರಿ, ಮೂಲ್ಕಿ ನಗರ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.