ಅಪಾಯಕಾರಿ ಸ್ಥಿತಿಯಲ್ಲಿ ನೀರಿನ ಟ್ಯಾಂಕ್
Team Udayavani, Jun 11, 2018, 3:13 PM IST
ಎಡಪದವು : ಸಾರ್ವಜನಿಕರಿಗೆ ನೀರು ಪೂರೈಸಲು ಮಳಲಿ ಸೈಟ್ನ ದಲಿತ ಕಾಲನಿ ಪ್ರದೇಶದಲ್ಲಿರುವ ನೀರಿನ ಟ್ಯಾಂಕ್ ಕುಸಿಯುವ ಸ್ಥಿತಿಯಲ್ಲಿದೆ. ಇಲ್ಲಿ ಸಾರ್ವಜನಿಕರಿಗೆ ನೀರು ಪೂರೈಸಲು ಕೆಲವರ್ಷಗಳ ಹಿಂದೆ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಿದ್ದು, ಈಗ ಅದು ತೀರಾ ಹಳತಾಗಿದೆ. ಇದರ ಪಿಲ್ಲರ್ಗಳಿಗೆ ತುಕ್ಕು ಹಿಡಿದಿದ್ದು, ಆತಂಕಕ್ಕೆ ಕಾರಣವಾಗಿದೆ. ನೀರಿನ ಟ್ಯಾಂಕ್ ಸಮೀಪವೇ ದಲಿತ ಕಾಲನಿ ಇದ್ದು, ಐದಾರು ಮನೆಗಳಿವೆ. ಬೋರ್ವೆಲ್ನಿಂದ ತೆಗೆದ ನೀರನ್ನು ಈ ನೀರಿನ ಟ್ಯಾಂಕ್ಗೆ ತುಂಬಿಸಿ ಬಳಿಕ ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ. ನೀರು ತುಂಬುವ ಕಾರಣ ಟ್ಯಾಂಕ್ ಭಾರವಾಗಿ ಕುಸಿದು ಬೀಳುವ ಸಾಧ್ಯತೆ ಇದೆ. ಸಮೀಪದಲ್ಲೇ ಜನವಸತಿ ಪ್ರದೇಶವಿರುವುದರಿಂದ ಇಲ್ಲಿನವರು ಆತಂಕಕ್ಕೀಡಾಗಿದ್ದಾರೆ.
ಈ ನೀರಿನ ಟ್ಯಾಂಕ್ ತೆಗೆದು ಬೇರೆ ಟ್ಯಾಂಕ್ ನಿರ್ಮಿಸಿ ನೀರು ಪೂರೈಸುವಂತೆ ಇಲ್ಲಿನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟ್ಯಾಂಕ್ನ ದುರ್ಬಲತೆಯ ಬಗ್ಗೆ ಸ್ಥಳೀಯರು ಗಂಜಿಮಠ ಪಂಚಾಯತ್ಗೆ ಮಾಹಿತಿ ನೀಡಿದ್ದು, ಪಂಚಾಯತ್ನವರು ಈ ಬಗ್ಗೆ ವರದಿ ತಯಾರಿಸಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮಾಹಿತಿ ನೀಡಲಾಗಿದೆ
ಮಳಲಿ ಸೈಟ್ ಪ್ರದೇಶದ ನೀರಿನ ಟ್ಯಾಂಕ್ ಹಳತಾಗಿ ಅಪಾಯಕಾರಿಯಾಗಿ ಪರಿಣಮಿಸಿದ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ವರದಿ ತಯಾರಿಸಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರಿಗೆ ನೀಡಲಾಗಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದ್ದು, 2-3 ವರ್ಷ ಬಾಳಿಕೆ ಬರಬಹುದು. ಈ ಟ್ಯಾಂಕ್ ಬದಲಿಸಲು ಕ್ರಮ ತೆಗೆದುಕೊಂಡು ಅದಕ್ಕೆ ಬೇಕಾದ ಹಣ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಿದ್ದಾರೆ.
– ಜಗದೀಶ್
ಪಿಡಿಒ, ಗಂಜಿಮಠ
ಗಿರೀಶ್ ಮಳಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.