ವಿಶ್ವ ಅರೆಭಾಷೆ ಹಬ್ಬ ; ಫೇಸ್‌ಬುಕ್‌ನಲ್ಲಿ ಅನುರಣಿಸಿದ ಅರೆಭಾಷೆಯ ರಂಗು
Team Udayavani, Aug 4, 2020, 12:38 PM IST
ವಿಶ್ವ ಅರೆಭಾಷೆ ಹಬ್ಬದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು: ಮೇಳೈಸಿದ ಕೃಷಿ ಪರಂಪರೆ… ಮತ್ತೆ ನೆನಪಿಸಿದ ಹಳ್ಳಿ ಬದುಕಿನ ಸೊಗಡು… ನೇಜಿ ಹಾಡು, ಡೆನ್ನಾನ ಡೆನ್ನನ ಪದ್ಯಕ್ಕೆ ಸೊಗಸಾದ ನೃತ್ಯ… ಇದರೊಂದಿಗೆ ಒಂದಷ್ಟು ಸಾಧಕರಿಂದ ವಿಚಾರ ಮಂಡನೆ…
ಆಂಗಿಕ ಮಲ್ಟಿಮೀಡಿಯಾ ಫೇಸ್‌ಬುಕ್ ಪೇಜ್‌ನಲ್ಲಿ ಸೋಮವಾರ ನಡೆದ ವಿಶ್ವ ಅರೆಭಾಷೆ ಹಬ್ಬದ ಚಿತ್ರಣವಿದು. ಕೊರೊನಾ ಕಾರಣದಿಂದಾಗಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್ ಅನ್ನೇ ಬಳಸಿಕೊಂಡು ವಿಶ್ವ ಅರೆಭಾಷೆ ಹಬ್ಬವನ್ನು ರಂಗ ಕಲಾವಿದ ಲೋಕೇಶ್ ಊರುಬೈಲು ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಅರೆಭಾಷಿಗ ಸಮುದಾಯದವರು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಅರೆಭಾಷಿಗರ ಮೂಲ ಪರಂಪರೆ, ಸಂಪ್ರದಾಯ, ಆಚಾರ-ವಿಚಾರ ಸಾರುವ ಹಾಡು, ನೃತ್ಯ ಮೂಡಿಬಂತು. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಲೈವ್‌ನಲ್ಲಿ ಬರಲು ಸಾಧ್ಯವಾಗದವರು ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಡಿಯೋಗಳನ್ನು ಆಂಗಿಕ ಮಲ್ಟಿಮೀಡಿಯಾ ತಂಡಕ್ಕೆ ಮೊದಲೇ ಕಳುಹಿಸಿದ್ದು, ಸೋಮವಾರ ಅದನ್ನು ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು. ವಿಚಾರ ಮಂಡನೆಗಳು ಲೈವ್ ಆಗಿಯೇ ನಡೆದವು.
ವಿವಿಧ ವಿಚಾರಗಳ ಮಂಡನೆ
“ಜನಪದ ಬೊದ್ದ್ಕ್ ಲಿ ಆಟಿನ ಗುಟ್ಟ್’ ಕುರಿತು ಜಾನಪದ ವಿದ್ವಾಂಸ ಡಾ| ಸುಂದರ್ ಕೇನಾಜೆ, “ಅಮರ ಸುಳ್ಯದ ಸ್ವಾತಂತ್ರ್ಯಸಮರ’ ಕುರಿತು ವಿದ್ಯಾಧರ ಕುಡೆಕಲ್ಲು, “ಕೃಷಿ ಜೀವನದೊಟ್ಟಿಗೆ ಅರೆಭಾಷೆ ಸಂಸ್ಕೃತಿ’ ಬಗ್ಗೆ ಲೇಖಕ ದೊಡ್ಡಣ್ಣ ಬರೆಮೇಲು, “ಅರೆಭಾಷೆಲಿ ಯಕ್ಷಗಾನನ ದಿನಂಗ’ ಕುರಿತು ಯಕ್ಷಗಾನ ಕಲಾವಿದ ಜಬ್ಟಾರ್ ಸಮೋ, “ಸಮಾಜಲಿ ಸಂಘಟನೆನ ಬಲ ಮತ್ತೆ ಮಹತ್ವ’ ಕುರಿತು ದಿನೇಶ್ ಮಡಪ್ಪಾಡಿ, “ಕೊಡಗ್ ನಾಡ್‌ಲಿ ಆಟಿ ತಿಂಗಳ ಗೌಜಿ’ ಕುರಿತು ಉಪನ್ಯಾಸಕ ಪಟ್ಟಡ ಶಿವಕುಮಾರ್, “ಮೊನ್ಸ ಸಂಬಂಧ ಮತ್ತೆ ಭಾಷೆ’ ಕುರಿತು ಪತ್ರಕರ್ತ ಲೈನ್ಕಜೆ ರಾಮಚಂದ್ರ, “ಬೊದ್ಕ್ ಮತ್ತೆ ಕಥೆ’ ಬಗ್ಗೆ ಲೇಖಕ ಬಾರಿಯಂಡ ಜೋಯಪ್ಪ, “ಗದ್ದೆ ಬೇಸಾಯದ ಹಸಿರ್ ನೆಂಪ್’ ಕುರಿತು ಸುಳ್ಯ ಕೆವಿಜಿ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ| ಎನ್. ಎ. ಜ್ಞಾನೇಶ್ ನಿಡ್ಯಮಲೆ, “ಭೇಟೆನೊಳಗೆ ಅರೆಭಾಷೆ ಸಂಸ್ಕೃತಿ’ ಬಗ್ಗೆ ತೇಜಕುಮಾರ್ ಬಡ್ಡಡ್ಕ, “ಬೊದ್ಕ್ ನ ಅನುಭವದ ಕಥೆ’ ಕುರಿತು ಭವಾನಿಶಂಕರ ಅಡ್ತಲೆ, “ಅರೆಭಾಷೆಲಿ ಯಕ್ಷಗಾನದ ಸಾಧ್ಯತೆ ಮತ್ತೆ ಸವಾಲು’ ಕುರಿತು ಭವ್ಯಶ್ರೀ ಮಂಡೆಕೋಲು, “ಬೊದ್R ಮತ್ತೆ ರಂಗಭೂಮಿ’ ಬಗ್ಗೆ ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ, “ಕಾರ್ತಿಂಗಳ ಗೌಜಿ’ ಬಗ್ಗೆ ಲೋಕನಾಥ್ ಅಮೆಚೂರ್, “ಅರೆಭಾಷೆ ಸಂಸ್ಕೃತಿಲಿ ಪ್ರದರ್ಶನ ಕಲೆ’ ಕುರಿತು ಗೀತಾ ಮೋಂಟಡ್ಕ, “ಹಿರಿಯವ್ವನ ಕೈರುಚಿ ಮತ್ತು ಅಡುಗೆ’ ಬಗ್ಗೆ ಉಪನ್ಯಾಸಕಿ ಕಾಂಚನಾ ಕೆದಂಬಾಡಿ, “ಆಟಿ ತಿಂಗಳ ನಾಟಿ ಮೊದ್ª’ ಕುರಿತು ವೈದ್ಯ ಡಾ| ಪುನಿತ್ ರಾಘವೇಂದ್ರ ಕುಂಟುಕಾಡು, “ಭಾಷೆ ಮತ್ತೆ ಸಂಸ್ಕೃತಿನ ಬೆಳೆಸುವಲ್ಲಿ ಅಕಾಡೆಮಿಗಳ ಪಾತ್ರ’ ಕುರಿತು ಅರೆಭಾಷೆ ಸಂಸ್ಕೃತಿ ಮತ್ತೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಡಾ| ಪುರುಷೋತ್ತಮ ಬಿಳಿಮಲೆ “ಸ್ವಾಸ್ಥ್ಯ ಸಮಾಜಕ್ಕೆ ಬಾಂಧವ್ಯದ ನಂಟ್ ಮತ್ತೆ ಭಾಷೆನ ಸಾಮರಸ್ಯ’ದ ಬಗ್ಗೆ ಮಾತನಾಡಿದರು.
ಸಿದ್ಧವೇಷ ಕಲೆಯನ್ನು ಜಾಗೃತಿಗೊಳಿಸುವ ಪ್ರಬಲ ಸಿದ್ಧವೇಷ ತಂಡ ಸುಳ್ಯದಲ್ಲಿ ರೂಪು ತಳೆಯಬೇಕು. ಈ ಭಾಷೆಯಲ್ಲಿ ಯಕ್ಷಗಾನಕ್ಕೆ ಪ್ರೋತ್ಸಾಹ ಕೊಡುವ ಅಗತ್ಯ ಇದೆ. ನಾಟಕದಲ್ಲಿ ಇನ್ನಷ್ಟು ಹೊಸತುಗಳು ಬರಬೇಕು. ಅರೆಭಾಷೆ ಸಾಹಿತ್ಯ ಬರೆಯುವ ಮಾತ್ರವಲ್ಲ, ಓದುವ ಕೆಲಸವೂ ಆಗಬೇಕು. ಅರೆಭಾಷೆ ಮೇಲೆ ಭಾಷಿಕ ಸಮುದಾಯವು ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಡಾ| ಪ್ರಭಾಕರ ಶಿಶಿಲ ಅವರು ಹೇಳಿದರು.
ಅರೆಭಾಷೆ ಸಂಸ್ಕೃತಿ ವಿಶಿಷ್ಟವಾದುದು
“ನಾನ್ ಮತ್ತೆ ಅರೆಭಾಷೆ’ ವಿಷಯದಲ್ಲಿ ವಿಚಾರ ಮಂಡಿಸಿದ ಸಾಹಿತಿ ಡಾ| ಪ್ರಭಾಕರ ಶಿಶಿಲ, ಅರೆಭಾಷೆ ಸಂಸ್ಕೃತಿ ವಿಶಿಷ್ಟ ಸಂಸ್ಕೃತಿ. ಇದರಲ್ಲಿ ಪ್ರದರ್ಶನ ಸಂಸ್ಕೃತಿ ಮತ್ತು ಆಚರಣ ಸಂಸ್ಕೃತಿ ಎಂದು ಎರಡು ವಿಭಾಗಗಳಿವೆ. ಆಚರಣ ಸಂಸ್ಕೃತಿಯಡಿಯಲ್ಲಿ ಭಾಷಿಗರು ಆಚರಿಸುವ ವಿವಿಧ ಹಬ್ಬ, ವಿಶೇಷತೆಗಳು ಸೇರಿವೆ. ಪ್ರದರ್ಶನ ಸಂಸ್ಕೃತಿಯಲ್ಲಿ ಸಿದ್ಧವೇಷ, ಯಕ್ಷಗಾನ, ನಾಟಕ ಕಲೆಗಳು ಮುನ್ನೆಲೆಗೆ ಬರುತ್ತವೆ. ಅರೆಭಾಷೆ ಕಲೆ ಎಂದೇ ಹೇಳಲಾಗುವ ಸಿದ್ಧವೇಷ ಸುಳ್ಯದ ವಿಶಿಷ್ಟ ಪ್ರದರ್ಶನ ಕಲೆ. ಆದರೆ ಪ್ರಸ್ತುತ ಸಿದ್ಧವೇಷ ತಂಡಗಳು ಕಾಣಸಿಗುವುದು ಅಪರೂಪವಾಗಿದೆ ಎಂದು ಅಭಿಪ್ರಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.