ಧರ್ಮಸ್ಥಳದ ಮುಖೇನ 100 ಕೆರೆಗಳ ಅಭಿವೃದ್ಧಿ: ಸಚಿವ ರೇವಣ್ಣ ಚಾಲನೆ
Team Udayavani, Feb 9, 2019, 1:13 AM IST
ಧರ್ಮಸ್ಥಳ: ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ಕೆರೆ ಸಂಜೀವಿನಿ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖೀ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮಾದರಿ ಹಾಗೂ ಆದರ್ಶ. ಈಗ ಕೆರೆ ಸಂಜೀವಿನಿ ಯೋಜನೆಯನ್ನು ಅನುಷ್ಠಾನಿಸುವ ಸಂಕಲ್ಪ ತೊಟ್ಟಿರುವುದು ಅತ್ಯಂತ ಆದರ್ಶ ಕಾರ್ಯ ಎಂದು ಶ್ಲಾಘಿಸಿದರು.
ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶಾಶ್ವತ ಯೋಜನೆಯಡಿಯಲ್ಲಿ ಕೆರೆ ಸಂಜೀವಿನಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 28 ಕೋ.ರೂ. ವೆಚ್ಚದಲ್ಲಿ 100 ಕೆರೆಗಳ ಅಭಿವೃದ್ಧಿಯ ಗುರಿಯಿದೆ. ಇದರಲ್ಲಿ 16 ಕೋ.ರೂ.ಗಳನ್ನು ಶ್ರೀ ಕ್ಷೇತ್ರದಿಂದ ನೀಡಲಾಗುತ್ತಿದ್ದು, ಉಳಿದ ಮೊತ್ತವನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ. ಮುಂದೆ 100 ಕೆರೆಗಳ ಅಭಿವೃದ್ಧಿಯ ಗುರಿ ಇದೆ ಎಂದರು.
ಎಚ್‌ಡಿಕೆಯನ್ನು ಅಲುಗಾಡಿಸಲೂ ಸಾಧ್ಯವಿಲ್ಲ
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಅಲುಗಾಡಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆಪರೇಷನ್‌ಗಿಳಿದ ಬಿಜೆಪಿಯವರು ಸುಸ್ತಾಗಿದ್ದಾರೆ ಎಂದರು.
ಅದೃಷ್ಟವಂತ ಮಹಿಳೆ!
ಸಂತ ಸಮ್ಮೇಳನವನ್ನು ಉದ್ಘಾಟಿಸಬೇಕಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗೈರಾಗಿದ್ದರೂ ತಮ್ಮ ಪರವಾಗಿ ಪತ್ನಿ ಚೆನ್ನಮ್ಮ ಅವರನ್ನು ಪುತ್ರ ಎಚ್.ಡಿ. ರೇವಣ್ಣ ಜತೆಗೆ ಕಳುಹಿಸಿದ್ದರು. ಅವರು ಆಗಮಿಸುವ ಸಮಯಕ್ಕೆ ಸಮ್ಮೇಳನದ ಉದ್ಘಾಟನೆ ನೆರವೇರಿತ್ತು.
ದೇಶದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ತಾಯಿಯಾಗಿ ಚೆನ್ನಮ್ಮ ಅವರು ದೇಶದ ಅದೃಷ್ಟವಂತ ಮಹಿಳೆ ಎಂದು ಡಾ| ಹೆಗ್ಗಡೆ ತಮ್ಮ ಮಾತಿನ ನಡುವೆ ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.