ಗ್ರಾ.ಪಂ.ಗಳಿಂದ ಮೆಸ್ಕಾಂಗೆ ಪವರ್ ಶಾಕ್
2.12 ಕೋ.ರೂ. ದಾಟಿದ ಗ್ರಾ.ಪಂ. ಬಾಕಿ ಮೊತ್ತ
Team Udayavani, Jun 18, 2019, 5:02 AM IST
ಬೆಳ್ತಂಗಡಿ: ಗ್ರಾಮ ಪಂಚಾಯತ್‌ಗಳು ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ವಿದ್ಯುತ್ ಕಡಿತಗೊಳಿಸದಿರುವುದರಿಂದ 48 ಗ್ರಾಮ ಪಂಚಾಯತ್‌ಗಳಿಂದ ಮೆಸ್ಕಾಂಗೆ 2.12 ಕೋ.ರೂ. ಅಧಿಕ ಮೊತ್ತದ ಬಿಲ್ ಬಾಕಿಯಾಗಿದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ, ಬೀದಿ ದೀಪ ವ್ಯವಸ್ಥೆ ಕಲ್ಪಿಸಿರುವುದರಿಂದ ಹೆಚ್ಚಿನ ವಿದ್ಯುತ್ ವ್ಯಯವಾಗುತ್ತಿದೆ. ತೆರಿಗೆ, ನೀರಿನ ಶುಲ್ಕ ಸಂಗ್ರಹದಲ್ಲಿ ಗ್ರಾಮ ಪಂಚಾಯತ್ ಹಿಂದೆ ಬಿದ್ದಿರುವುದರಿಂದ ವಿದ್ಯುತ್ ಬಿಲ್ ಪಾವತಿಗೆ ಹೊರೆಯಾಗುತ್ತಿದೆ. ಈ ಕಾರಣಕ್ಕೆ ಸರಕಾರ ಶುಲ್ಕ ಮನ್ನಾಗೊಳಿಸಿದ ಬಳಿಕವೂ 48 ಗ್ರಾ.ಪಂ. ಗಳ ಪೈಕಿ 23 ಗ್ರಾ.ಪಂ. ಗಳಿಂದಲೇ 2,12,41,222 ರೂ. ಮೊತ್ತ ಪಾವತಿಗೆ ಬಾಕಿ ಉಳಿದಿದೆ.
7.94 ಕೋ.ರೂ. ಮನ್ನಾ
ಗ್ರಾ.ಪಂ.ಗಳಿಗೆ ವಿದ್ಯುತ್ ಶುಲ್ಕ ಹೊರೆಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸರಕಾರ ಈ ಹಿಂದೆ ಬೆಳ್ತಂಗಡಿ ತಾಲೂಕಿಗೆ ಮಾರ್ಚ್ 2015ರ ಅಂತ್ಯದ ವರೆಗಿನ 7,94,23,011 ರೂ. ಮನ್ನಾಗೊಳಿಸಿತ್ತು. ಕೆಲವೆಡೆ ಮುಂಚಿತವಾಗಿ ಪಾವತಿ ಸಿದ್ದ ಗ್ರಾ.ಪಂ. ಮೊತ್ತ ವನ್ನು ಮೆಸ್ಕಾಂ ಮೈನಸ್ ಮೊತ್ತವಾಗಿ ಕಡಿತ ಗೊಳಿಸಿತ್ತು. ಇಷ್ಟಾದ ಬಳಿಕವೂ ಹೆಚ್ಚುವರಿ ಹಣ ಬಾಕಿ ಉಳಿಸಿದೆ.
23 ಗ್ರಾ.ಪಂ.ನಿಂದ 2.12 ಕೋ.ರೂ. ಬಾಕಿ
2019 ಮಾರ್ಚ್ ತಿಂಗಳಾಂತ್ಯಕ್ಕೆ ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯತ್‌ಗಳು ಮೆಸ್ಕಾಂಗೆ ಒಟ್ಟು 2,12,41,222 ರೂ. ಪಾವತಿಸಲು ಬಾಕಿ ಉಳಿದಿದೆ. ಕೆಲವು ಗ್ರಾಮ ಪಂಚಾಯತ್‌ಗಳು ಪಾವ ತಿಸಿದ್ದು, ಲೆಕ್ಕಾಚಾರ ಹಂತದಲ್ಲಿದೆ. ತಾಲೂಕಿನ ಅತಿ ಹೆಚ್ಚು ಆದಾಯ ತರುವ ಉಜಿರೆ ಗ್ರಾ.ಪಂ. ಅತೀಹೆಚ್ಚು ಅಂದರೆ 27.92 ಲಕ್ಷ ರೂ., ಮಾಲಾಡಿ 18.47 ರೂ., ಲಾೖಲ 17.10 ಲಕ್ಷ ರೂ., ಕಳಿಯ 12.14 ಲಕ್ಷ ರೂ. ಪಾವತಿಸಿಲ್ಲ. ಶಿಬಾಜೆ, ಧರ್ಮಸ್ಥಳ, ಕೊಯ್ಯೂರು, ಅಳದಂಗಡಿ, ಪಡಂಗಡಿ ಗ್ರಾ.ಪಂ. 5 ಲಕ್ಷಕ್ಕೂ ಹೆಚ್ಚು ಬಾಕಿ ಉಳಿಸಿಕೊಂಡಿದೆ. 12 ಗ್ರಾ.ಪಂ. ಗಳು 5 ಲಕ್ಷಕ್ಕಿಂತ ಕಡಿಮೆ ಬಾಕಿ ಮೊತ್ತ ಉಳಿಸಿವೆ. ಒಟ್ಟು 23 ಗ್ರಾ.ಪಂ ಗಳ ಪೈಕಿ ನೀರಿನ ಪೂರೈಕೆಯ 14.35 ಲಕ್ಷ ರೂ., ದಾರಿದೀಪದ 68.83 ಲಕ್ಷ ರೂ. ಬಾಕಿ ಉಳಿದಿರುವುದಾಗಿ ಮೆಸ್ಕಾಂ ತಿಳಿಸಿದೆ.
ಡಿಮಾಂಡ್ ಬಿಲ್
ಪ.ಪಂ. ಸಂಪರ್ಕ ಮಾಹಿತಿ ಕಂಪ್ಯೂಟರ್‌ಗೆ ವರ್ಗಾವಣೆಯಾಗಿಲ್ಲ. ಇನ್ನೂ ಕಡತದಲ್ಲೆ ಲೆಕ್ಕಾಚಾರ ನಮೂದಿಸಲಾಗುತ್ತಿದೆ. ನೀರು ಸರಬರಾಜು ಸಹಾಯಕರೊಬ್ಬರೆ ಇರುವುದರಿಂದ ಮಾಸಾಂತ್ಯಕ್ಕೆ ಬಿಲ್ ಸಂಗ್ರಹಿಸಲಾಗುತ್ತಿಲ್ಲ. ಸಿಂಪ್ಯೂಟರ್ ಬಳಸುವ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿರುವುದರಿಂದ ಎಲ್ಲ ಲೆಕ್ಕಾಚಾರಗಳು ಕಡತಕ್ಕೇ ಸೀಮಿತವಾಗಿವೆ.
ಪ.ಪಂ.: 10 ಲಕ್ಷ ರೂ. ನೀರಿನ ಬಿಲ್ ಬಾಕಿ
ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ಬೇಸಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆ ಸವಾಲಾಗಿರುವ ನಡುವೆ ನೀರಿನ ಬಿಲ್ ಸಂಗ್ರಹವೂ ತಲೆನೋವಾಗಿ ಪರಿಣಮಿಸಿದೆ. ಪ.ಪಂ.ನಿಂದ ಗೃಹ-1,304, ಗೃಹೇತರ 60, ವಾಣಿಜ್ಯ 93 ಸೇರಿ ಒಟ್ಟು 1,457 ನೀರಿನ ಸಂಪರ್ಕ ನೀಡಲಾಗಿದೆ. ನೀರು ಬಾರದಿರುವ ಕಾರಣ ನೀಡಿ ಸುಮಾರು 8 ವಾರ್ಡ್‌ಗಳಲ್ಲಿ ಅಂದಾಜು 10 ಲಕ್ಷ ರೂ.ಗೂ ಅಧಿಕ ನೀರಿನ ಶುಲ್ಕ ಸಂಗ್ರಹಿಸಲು ಬಾಕಿ ಉಳಿದಿದೆ. ವಾಣಿಜ್ಯ ಸಂಪರ್ಕ ಬಿಲ್‌ಗಳು ಈಗಾಗಲೇ ಪಾವತಿ ಹಂತದಲ್ಲಿದ್ದು, ಗೃಹಬಳಕೆ ಸಂಪರ್ಕದ ಶುಲ್ಕ ಸಂಗ್ರಹಿಸುವುದು ಸವಾಲಾಗಿ ಪರಿಣಮಿಸಿದೆ.
ಮ್ಯಾನ್ಯುವಲ್ ಬಿಲ್ಲಿಂಗ್
ಹಲವು ವರ್ಷಗಳಿಂದ ಮ್ಯಾನ್ಯುವಲ್ ಬಿಲ್ಲಿಂಗ್ ಚಾಲ್ತಿಯಲ್ಲಿದೆ. ಇದರಿಂದ ಸಿಂಪ್ಯೂಟರ್ ಅಳವಡಿಸುವ ಪ್ರಸ್ತಾವನೆಗೆ ಹಿನ್ನಡೆಯಾಗಿದೆ. ಕಂಪ್ಯೂಟರ್‌ಗೆ ಡೇಟಾ ವರ್ಗಾಯಿಸಿದಲ್ಲಿ ಕೆಲಸ ಸುಲಲಿತವಾಗಲಿದೆ. ಈ ಕುರಿತು ಅಧಿಕಾರಿ ವರ್ಗದಲ್ಲಿ ಚರ್ಚೆಯಾಗಬೇಕಿದೆ.
- ಅರುಣ್ ಬಿ. ಬೆಳ್ತಂಗಡಿ ಪ.ಪಂ. ಮುಖ್ಯಾಧಿಕಾರಿ
ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ
ಕುಡಿಯುವ ನೀರು ಹಾಗೂ ದಾರಿದೀಪ ವ್ಯವಸ್ಥೆಯಲ್ಲಿ ವ್ಯತ್ಯಯವಾಗಬಾರದು ಎಂಬ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಗ್ರಾ.ಪಂ.ಗಳು ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸದಿದ್ದಲ್ಲಿ ನೋಟಿಸ್ ನೀಡಲಾಗುತ್ತದೆ. ಹೆಚ್ಚಿನ ಗ್ರಾ.ಪಂಗಳು ಸ್ಪಂದಿಸುತ್ತಿವೆ.
- ಶಿವಶಂಕರ್, ಎಇಇ, ಮೆಸ್ಕಾಂ, ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.