2 ಕೋ.ರೂ. ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಪೂರ್ಣ
Team Udayavani, Apr 17, 2021, 4:30 AM IST
ಬಂಟ್ವಾಳ: ಗ್ರಾಮೀಣ ಭಾಗಗಳ ಕೃಷಿ ನೀರಾವರಿ ಜತೆಗೆ ಅಂತರ್ಜಲ ವೃದ್ಧಿಗೆ ಕಿಂಡಿ ಅಣೆಕಟ್ಟುಗಳು ದೊಡ್ಡ ಕೊಡುಗೆಗಳನ್ನೇ ನೀಡಿದ್ದು, ಇದೀಗ ಸರಕಾರ ಕಿಂಡಿ ಅಣೆಕಟ್ಟಿನ ಜತೆಗೆ ಸೇತುವೆಯನ್ನೂ ನಿರ್ಮಿಸಿ ಒಂದೇ ಯೋಜನೆಯಲ್ಲಿ ಎರಡು ಪ್ರಯೋಜನಗಳನ್ನು ನೀಡುತ್ತಿದೆ. ಬಂಟ್ವಾಳದ ವಿಟ್ಲಪಟ್ನೂರು ಗ್ರಾಮದ ಎರ್ಮನಿಲೆಯಲ್ಲಿ ಇಂತಹದ್ದೇ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಗೊಂಡು ಜನತೆಯ ಉಪಯೋಗಕ್ಕೆ ಮುಕ್ತಗೊಂಡಿದೆ.
ನೂತನ ಕಿಂಡಿ ಅಣೆಕಟ್ಟು/ಸೇತುವೆಯು ವಿಟ್ಲಪಟ್ನೂರು ಹಾಗೂ ಕೊಳ್ನಾಡು ಗ್ರಾಮವನ್ನು ಸಂಪರ್ಕಿಸಲಿದ್ದು, ಕೊಡಂಗಾಯಿ ಹೊಳೆಗೆ ಅಡ್ಡಲಾಗಿ ನಿರ್ಮಾಣಗೊಂಡಿದೆ. ವಿಟ್ಲಪಟ್ನೂರು ಗ್ರಾಮದ ಎರ್ಮನಿಲೆ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳ ಅನುಕೂಲದ ದೃಷ್ಟಿಯಿಂದ ಇದು ನಿರ್ಮಾಣಗೊಂಡಿದೆ.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಪ್ರಸ್ತಾವನೆಯಂತೆ ಸಣ್ಣ ನೀರಾವರಿ ಇಲಾಖೆಯ 2 ಕೋ.ರೂ.ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಹಲಗೆ ಅಳವಡಿಕೆಯನ್ನೂ ಮಾಡಲಾಗಿದೆ. ಆದರೆ ಹಲಗೆ ಅಳವಡಿಕೆಯ ವೇಳೆ ಹೊಳೆಯಲ್ಲಿ ನೀರು ಬತ್ತಿ ಹೋಗಿದ್ದು, ನಿರಂತರ ಮಳೆ ಬಂದರೆ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ.
45.50 ಮೀ. ಉದ್ದದ ಸೇತುವೆ
ಎರ್ಮನಿಲೆಯಲ್ಲಿ ನಿರ್ಮಾಣಗೊಂಡಿರುವ ಬ್ರಿಡ್ಜ್ ಕಂ ಬ್ಯಾರೇಜ್ ಸುಮಾರು 45.50 ಮೀ. ಉದ್ದವನ್ನು ಹೊಂದಿದ್ದು, 3 ಮೀ. ಎತ್ತರಕ್ಕೆ ನೀರು ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಹೊಳೆಯ ಎರಡೂ ಬದಿಗಳಲ್ಲೂ ಮಣ್ಣು ಕುಸಿಯದಂತೆ ತಡೆಗೋಡೆಯನ್ನೂ ನಿರ್ಮಾಣ ಮಾಡಲಾಗಿದೆ. ಸೇತುವೆಯ ಮೇಲ್ಭಾಗದಲ್ಲಿ 3 ಮೀ. ಅಗಲದ ಸ್ಲಾÂಬ್ ನಿರ್ಮಾಣವಾಗಿದ್ದು, ಲಘು ವಾಹನಗಳು(ಲೈಟ್‌ವೈಟ್ ವೆಹಿಕಲ್) ಮಾತ್ರ ಸಂಚರಿಸಬಹುದಾಗಿದೆ.
ಸೇತುವೆಯ ಎರಡೂ ಬದಿಗಳಲ್ಲೂ ಕಚ್ಚಾ ರಸ್ತೆಯಿದ್ದು, ಅದರ ದುರಸ್ತಿ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಪ್ರಸ್ತುತ ಸಣ್ಣ ನೀರಾವರಿ ಇಲಾಖೆಯಲ್ಲಿ ರಸ್ತೆ ಅಭಿವೃದ್ಧಿಗೆ ಯಾವುದೇ ಅವಕಾಶಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಗ್ರಾಮಗಳ ಕೃಷಿಕರಿಗೆ ಅನುಕೂಲ
ಕೊಳ್ನಾಡು ಗ್ರಾಮದ ಪೇರಪಡು³ ಹಾಗೂ ವಿಟ್ಲಪಟ್ನೂರು ಗ್ರಾಮದ ಎರ್ಮನಿಲೆ ಮಧ್ಯೆ ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಎರಡೂ ಗ್ರಾಮಗಳ ಕೃಷಿಕರಿಗೆ ಅನುಕೂಲ
ವಾಗಲಿದೆ. ನೀರಿನ ನೇರ ಬಳಕೆಗಿಂತಲೂ ಅಂತರ್ಜಲ ವೃದ್ಧಿಯ ಜತೆಗೆ ಹೊಳೆ ಬದಿಯ ತೋಟಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಎರ್ಮನಿಲೆಯಿಂದ ಮೂರ್ಕಾಜೆ ಭಾಗದವರೆಗೆ ಇಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಎಫ್‌ಆರ್‌ಪಿ ತಂತ್ರಜ್ಞಾನ
ಹಿಂದೆ ಸಾಮಾನ್ಯವಾಗಿ ಕಿಂಡಿ ಅಣೆಕಟ್ಟುಗಳಿಗೆ ಕಿರಾಲ್ ಬೋಗಿ ಮರಗಳ ಹಲಗೆಗಳನ್ನು ಹಾಕಿ ನೀರನ್ನು ತಡೆಯಲಾಗುತ್ತಿತ್ತು. ಆದರೆ ಅದಕ್ಕೆ ಬಾಳಿಕೆ ಕಡಿಮೆ. ಹೀಗಾಗಿ ಪ್ರಸ್ತುತ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟುಗಳಿಗೆ ಇಲಾಖೆಯು ಪೈಬರ್ ತಂತ್ರಜ್ಞಾನದ ಹಲಗೆ(ಎಫ್‌ಆರ್‌ಪಿ)ಯನ್ನು ಅಳವಡಿಸುತ್ತಿದೆ. ಇದು ನೀರನ್ನು ಸಮರ್ಪಕವಾಗಿ ತಡೆಹಿಡಿಯುವ ಜತೆಗೆ ಹೆಚ್ಚು ಬಾಳಿಕೆ ಬರುವುದರಿಂದ ಎಫ್‌ಆರ್‌ಪಿ ಫ್ಲಾಂಕ್‌ಗಳನ್ನು ಅಳವಡಿಸುತ್ತಿರುವುದಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲದಲ್ಲಿ ಈ ಫೈಬರ್ ಹಲಗೆಗಳನ್ನು ಇಡುವುದಕ್ಕೆ ಇಲಾಖೆಯಿಂದಲೇ ಗೋಡೌನ್ ಕೂಡ ನಿರ್ಮಾಣಗೊಂಡಿದೆ.
ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ
ನೀರಿನ ಬಳಕೆ, ಅಂತರ್ಜಲ ವೃದ್ಧಿ ಹಾಗೂ ಹೊಳೆ ದಾಟುವ ಸೇತುವೆಯಾಗಿ ಸುಮಾರು 2 ಕೋ.ರೂ.ವೆಚ್ಚದಲ್ಲಿ ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಗೊಂಡಿದೆ. ಮುಖ್ಯವಾಗಿ ವಿಟ್ಲಪಟ್ನೂರು ಗ್ರಾಮದ ಎರ್ಮನಿಲೆ ಪ.ಜಾ.ಕಾಲನಿಯ ನಿವಾಸಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ. ಪ್ರಸ್ತುತ ಹಲಗೆ ಅಳವಡಿಸುವ ಕಾರ್ಯವೂ ನಡೆದಿದೆ.
-ಶಿವಪ್ರಸನ್ನ, ಸಹಾಯಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.