ಅರಣ್ಯ ಸಂಪತ್ತು ವೃದ್ಧಿಗೆ 2,000 ಬೀಜದುಂಡೆ ಸಿದ್ಧ
Team Udayavani, Jun 5, 2019, 6:00 AM IST
ಪುತ್ತೂರು: ಹಸಿ ಮಣ್ಣನ್ನು ಚೆಂಡಿನಾಕೃತಿಯಲ್ಲಿ ಸಿದ್ಧಗೊಳಿಸಿ ಅದರ ಒಳಗೆ ಬೀಜವಿಟ್ಟು ಮಳೆಗಾಲದ ಆರಂಭದಲ್ಲಿ ಅರಣ್ಯದೊಳಗೆ ಎಸೆದು ಹಸಿರು ಸಂಪತ್ತು ಹೆಚ್ಚಿಸುವ ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಈ ಬಾರಿ ಪುತ್ತೂರು ವ್ಯಾಪ್ತಿಯಲ್ಲಿ 2 ಸಾವಿರ ಬೀಜದುಂಡೆಗಳು ಸಿದ್ಧಗೊಂಡಿವೆ.
ನೀರಿಗಾಗಿ ಅರಣ್ಯ ಉಳಿಸಿ, ಅರಣ್ಯ ಬೆಳೆಸಲು ಬೀಜದುಂಡೆ ಬಳಸಿ ಧ್ಯೇಯ ವಾಕ್ಯದ ಅಭಿಯಾನವನ್ನು ಅರಣ್ಯ ಇಲಾಖೆ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದೆ. ಎಲ್ಲ ತಾಲೂಕುಗಳಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಈ ಅಭಿಯಾನವನ್ನು ಮುನ್ನಡೆಸುತ್ತಿದೆ.
ತಯಾರಿ ಹೀಗೆ…
ಹಸಿ ಮಣ್ಣು, ಸೆಗಣಿ, ಗಂಜಲ ಮಿಶ್ರಣದ ಉಂಡೆ ತಯಾರಿಸಲಾಗುತ್ತದೆ. ಅದರೊಳಗೆ ಬೀಜವನ್ನು ಇರಿಸಲಾಗುತ್ತದೆ. ಮಳೆ ಆರಂಭವಾದ ಕೂಡಲೇ ಸಾರ್ವಜನಿಕರ ಸಹಕಾರದೊಂದಿಗೆ ಅದನ್ನು ಅರಣ್ಯ ಪ್ರದೇಶಗಳಲ್ಲಿ ಎಸೆಯಲಾ ಗುತ್ತದೆ. ಈ ಬಾರಿ ವಿವಿಧ ವಿದ್ಯಾಸಂಸ್ಥೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಯೋಜನೆಯಲ್ಲಿ ಸೇರಿಸಿಕೊಳ್ಳಲು ನಿರ್ದೇಶನ ಬಂದಿದೆ. ವನ ಸಂಪತ್ತು ಹೆಚ್ಚಳದಿಂದ ಮಳೆ ಸಕಾಲದಲ್ಲಿ ಸುರಿದು ನೀರಿನ ಅಭಾವವನ್ನು ತಪ್ಪಿಸುವ ಕಾಳಜಿ ಈ ಅಭಿಯಾನದಲ್ಲಿದೆ.
ಪುತ್ತೂರು ವಲಯ ವ್ಯಾಪ್ತಿಯ ಬಲ್ಲೇರಿ, ಆನೆಗುಂಡಿ, ಬಂಟಾಜೆ ಅರಣ್ಯ, ಕನ್ನಡ್ಕ, ಕಳೆಂಜಮಲೆ, ನರಿಮೊಗರು, ಕನಕ ಮಜಲು, ಕಣಿಯಾರು ಮಲೆಗಳಲ್ಲಿ ಈ ಬೀಜದುಂಡೆಗಳನ್ನು ಎಸೆಯಲು ನಿರ್ಧರಿಸಲಾಗಿದೆ. ಆದರೆ ಬೀಜ ದುಂಡೆ ಮೊಳಕೆ ಬರಲು ಒಂದಷ್ಟು ಮಳೆಯ ಆವಶ್ಯಕತೆಯೂ ಇದೆ. ಈ ಕಾರಣದಿಂದ ಬೀಜದುಂಡೆ ಎಸೆಯಲು ವಿಳಂಬವಾಗಬಹುದು.
ಬೀಜದುಂಡೆ ಸಿದ್ಧ
ಮುಕ್ವೆ ನರ್ಸರಿಯಲ್ಲಿ ಸಾಮಾಜಿಕ ಅರಣ್ಯ ವಲಯ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ಬೀಜದುಂಡೆ ತಯಾರಿಸುವ ಕಾರ್ಯ ನಡೆಸಲಾಗಿದೆ. ಹಲಸು, ಮಾವು, ಪೇರಳೆ, ಪುನರ್ಪುಳಿ, ಬೇಂಗ, ಈಂದ್, ರೆಂಜೆ, ರಾಮಫಲ ಹೀಗೆ 8 ಬಗೆಯ ಮರಗಳ ಸುಮಾರು 2,000 ಬೀಜದುಂಡೆಗಳನ್ನು ತಯಾರಿಸಲಾಗಿದೆ.
ಪುತ್ತೂರು ವಲಯ ಸಾಮಾಜಿಕ ಅರಣ್ಯ ಅರಣ್ಯಾಧಿಕಾರಿ ವಿದ್ಯಾರಾಣಿ ಪಿ.ಕೆ., ಜಿಲ್ಲಾ ಸಂಘಟಕ ಭರತ್‌ರಾಜ್ ಕೆ., ಪುತ್ತೂರು ಸ್ಥಳೀಯ ಸಂಸ್ಥೆಯ ಜತೆ ಕಾರ್ಯದರ್ಶಿ ಸುನೀತಾ, ಮುಕ್ವೆ ಸರಕಾರಿ ಹಿರಿಯ ಪ್ರಾ. ಶಾಲೆಯ ಮುಖ್ಯ ಗುರು ಚರಣ್‌ಕುಮಾರ್, ಗೈಡ್ ಶಿಕ್ಷಕಿ ವೇದಾವತಿ, ಮೇಬಲ್ ಡಿ’ಸೋಜಾ, ಸಂತ ಫಿಲೋಮಿನಾ ಕಾಲೇಜಿನ ರೋವರ್ ವಿದ್ಯಾರ್ಥಿ ಚಂದ್ರಾಕ್ಷ ಹಾಗೂ ರಾಮಕೃಷ್ಣ ಪ್ರೌಢ ಶಾಲೆ ಮತ್ತು ಮುಕ್ವೆ ಸ.ಉ.ಹಿ.ಪ್ರಾ. ಶಾಲೆಯ ಒಟ್ಟು 50 ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭಾಗಿಯಾಗಿದ್ದಾರೆ. ಆದರೆ ಬೀಜ ದುಂಡೆ ಮೊಳಕೆ ಬರಲು ಒಂದಷ್ಟು ಮಳೆಯ ಆವಶ್ಯಕತೆಯೂ ಇದೆ. ಈ ಕಾರಣದಿಂದ ಬೀಜದುಂಡೆ ಎಸೆಯಲು ವಿಳಂಬವಾಗಬಹುದು.
ಮಳೆ ಬಂದ ಮೇಲೆ
ಪುತ್ತೂರು ವಲಯದಲ್ಲಿ ಸುಮಾರು 2 ಸಾವಿರ ಬೀಜದುಂಡೆ ಗಳನ್ನು ಮುಕ್ವೆ ನರ್ಸರಿಯಲ್ಲಿ ಸಿದ್ಧಪಡಿ ಸಲಾಗಿದೆ. ಪರಿಸರ ದಿನಾಚರಣೆಯ ಬಳಿಕ, ಒಂದಷ್ಟು ಮಳೆ ಸುರಿಯಲು ಆರಂಭಿಸಿದ ಮೇಲೆ ವಿದ್ಯಾರ್ಥಿಗಳನ್ನೂ ಬಳಸಿಕೊಂಡು ಅರಣ್ಯ ಪ್ರದೇಶ ಗಳಲ್ಲಿ ಬೀಜದುಂಡೆಗಳನ್ನು ಎಸೆಯಲಾಗುತ್ತದೆ.
– ವಿದ್ಯಾರಾಣಿ ಪಿ.ಕೆ. ಪುತ್ತೂರು ವಲಯ ಸಾಮಾಜಿಕ ಅರಣ್ಯ ಅರಣ್ಯಾಧಿಕಾರಿ
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.