ಕೆಪಿಎಸ್ ಅಂಗಳದಲ್ಲಿ 22 ಕ್ವಿಂಟಾಲ್ ಭತ್ತ ಬೆಳೆ ! ಅಕ್ಷರದೊಂದಿಗೆ ಅನ್ನದ ಪಾಠ
Team Udayavani, Nov 24, 2021, 5:22 AM IST
ಪುತ್ತೂರು: ಅಕ್ಷರದೊಂದಿಗೆ ಅನ್ನದ ಪಾಠ ಹೇಳುವ ವಿನೂತನ ಪ್ರಯತ್ನ ಪ್ರಾರಂಭಿಸಿದ ಕುಂಬ್ರ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆಟದ ಅಂಗಳದಲ್ಲಿ ಮೊದಲ ಪ್ರಯೋಗದಲ್ಲಿ ಬರೋಬ್ಬರಿ 22 ಕ್ವಿಂಟಾಲ್ ಭತ್ತ ಕೈ ಸೇರಿದೆ.
ಜುಲೈಯಲ್ಲಿ ಮೈದಾನದ 1.15 ಎಕರೆ ಯಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಶಾಲಾ ಆಡಳಿತ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಘ-ಸಂಸ್ಥಗಳು, ಗ್ರಾಮಸ್ಥರು ಇದಕ್ಕೆ ಸಾಥ್ ನೀಡಿದ್ದರು.
ಮೈದಾನದಲ್ಲಿ ಮಣ್ಣು ಹಾಸಿ ಟ್ಯಾಕ್ಟರ್ ಬಳಸಿ ಉಳುಮೆ ಮಾಡಲಾಗಿತ್ತು. ಎಸ್‌ಡಿ ಎಂಸಿ ಕಾರ್ಯಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ ಅವರ ಮನೆಯ ತಾರಸಿ ಯಲ್ಲಿ ಸಿದ್ಧಗೊಳಿಸಿದ ನೇಜಿಯನ್ನು ನಾಟಿ ಮಾಡಲಾಗಿತ್ತು. ಮರಕ್ಕೂರು ನಾರ್ಣಪ್ಪ ಸಾಲಿಯಾನ್ 30 ಕೆಜಿ ಬಿತ್ತನೆ ಬೀಜ ಉಚಿತವಾಗಿ ನೀಡಿದ್ದರು. ಹಲವು ಮಂದಿ ಶ್ರಮದಾನದಲ್ಲಿ ಮಾಡಿದ್ದರು. ನ. 23ರಂದು ಕಟಾವು ಪೂರ್ಣಗೊಂಡಿದ್ದು, 22 ಕ್ವಿಂಟ್ವಾಲ್ ಭತ್ತ ಕೈಸೇರಿದೆ.
ಇದನ್ನೂ ಓದಿ:20 ವರ್ಷಗಳ ನಂತರ ಸಿಕ್ಕಿಬಿದ್ದ ಕೊಲೆಗಾರ
ರಾಜ್ಯದಲ್ಲಿಯೇ ಪ್ರಥಮ
ನ. 23ರಂದು ಉದ್ಯಮಿ ಕುಂಬ್ರ ಮೋಹನದಾಸ್ ರೈ ಕಟಾವಿಗೆ ಚಾಲನೆ ನೀಡಿ ದರಲ್ಲದೆ 5,000 ರೂ. ದೇಣಿಗೆ ನೀಡಿ ದರು. ಶ್ರೀ ಕ್ಷೇತ್ರ ಧ.ಗ್ರಾ.ಯೋ. ಕೃಷಿ ಅಧಿಕಾರಿ ಉಮೇಶ್ ಗೌಡ ಮಾತನಾಡಿ, ಆಟದ ಮೈದಾನದಲ್ಲಿ ಭತ್ತ ಬೆಳೆದಿರುವುದು ರಾಜ್ಯದಲ್ಲಿಯೇ ಮೊದಲು. ಇಷ್ಟು ದೊಡ್ಡ ಪ್ರಮಾಣದಲ್ಲಂತೂ ಎಲ್ಲೂ ಬೆಳೆದಿಲ್ಲ. ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿರುವುದು ಪ್ರೇರಣೆಯಾಗಲಿದೆ ಎಂದರು.
ಕೆಪಿಎಸ್ ಕಾರ್ಯಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ಪ್ರಕೃತಿ ನಮ್ಮ ಕೈ ಬಿಟ್ಟಿಲ್ಲ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದೆ ಎಂದರು. ಕುಂಬ್ರ ಕಾಲೇಜಿನ ಮಾಜಿ ಕಾರ್ಯಾಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಶುಭ ಹಾರೈಸಿದರು. ಪ್ರಾಂಶುಪಾಲ ಕೃಷ್ಣ ಉಪಾಧ್ಯಾಯ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.