323 ಅಂಗನವಾಡಿಗೂ ಸ್ವಂತ ಕಟ್ಟಡ; ಬೆಳ್ತಂಗಡಿ ತಾಲೂಕಿನ 81 ಗ್ರಾಮ ಪಂಚಾಯತ್‌ ವ್ಯಾಪ್ತಿ

ಬಾಂಜಾರು ಮಲೆ, ಬಾರ್ಯದ ದೊಡ್ಡಕಲ್ಲುವಿನಲ್ಲಿ ಅಂಗನವಾಡಿಗೆ ಪ್ರಸ್ತಾವನೆ

Team Udayavani, Oct 13, 2022, 2:17 PM IST

13

ಬೆಳ್ತಂಗಡಿ: ಆಂಗ್ಲ ಮಾಧ್ಯಮ ಶಿಕ್ಷಣ ಕಂಪನ ಹಳ್ಳಿ ಹಳ್ಳಿಗೂ ವ್ಯಾಪಿಸಿರುವುದು ಒಂದೆಡೆಯಾದರೆ ಗ್ರಾಮೀಣ ಬದಕುಕಿನ ಸೊಗಡು ಕನ್ನಡ ಮಾಧ್ಯಮದ ಕಂಪು ಇನ್ನು ಹಚ್ಚಹಸುರಾಗಿಯೇ ಉಳಿದಿದೆ. ಈ ವರೆಗೆ ಅತ್ಯಂತ ಬೇಡಿಕೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಅತ್ಯಂತ ಕಟ್ಟಕಡೆಯ ಜತೆಗೆ ಅರಣ್ಯದಂಚಿನ ಬಾಂಜಾರು ಮಲೆಯಲ್ಲಿ ನೂತನ ಅಂಗನವಾಡಿ ಸ್ಥಾಪನೆಯ ಕನಸು ಈಡೇರುವ ಹಂತದಲ್ಲಿರುವುದು ಹರ್ಷದಾಯಕ.

13,262 ಚಿಣ್ಣರ ಸುರಕ್ಷತೆಗೆ ಕ್ರಮ

ಬೆಳ್ತಂಗಡಿ ತಾಲೂಕಿನಲ್ಲಿ 81 ಗ್ರಾಮಗಳಿಗೆ ಒಳಪಟ್ಟಂತೆ 18 ಮಿನಿ ಅಂಗನವಾಡಿ ಸೇರಿ 324 ಅಂಗನವಾಡಿಗಳಲ್ಲಿ 13,262 ಚಿಣ್ಣರಿದ್ದಾರೆ. ಇದರಡಿ 3,390 ಗರ್ಭಿಣಿಯರು, ಬಾಣಂತಿಯರಿದ್ದಾರೆ. ಈ ಪೈಕಿ 323 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಈ ಪೈಕಿ 4 ಅಂಗನವಾಡಿಗೆ ನೂತನ ಕಟ್ಟಡ ಪ್ರಗತಿಯ ಹಂತದಲ್ಲಿದೆ. ಈ ಮಧ್ಯೆ ತಾಲೂಕಿನ ಬಾರ್ಯ ಗ್ರಾಮದ ದೊಡ್ಡಕಲ್ಲು ಹಾಗೂ ಕಟ್ಟಡಕಡೆಯ ಕಾಡಿನಮಧ್ಯೆ ಇರುವ ನೆರಿಯ ಗ್ರಾ.ಪಂ. ವ್ಯಾಪ್ತಿಯ ಬಾಂಜಾರು ಮಲೆಯಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬಾಂಜಾರು ಮಲೆಯಲ್ಲಿ 44ಕ್ಕೂ ಅಧಿಕ ಕುಟುಂಬಗಳಿದ್ದು 130 ಕ್ಕೂ ಅಧಿಕ ಜನಸಂಖ್ಯೆಯಿದೆ. ಅಂಗನವಾಡಿಯಿಂದ ಕಾಲೇಜು ಶಿಕ್ಷಣವರೆಗೆ ತೆರಳುವ 20ಕ್ಕೂ ಅಧಿಕ ಮಕ್ಕಳಿದ್ದಾರೆ. ಇಲ್ಲಿಂದ ಅಂಗನವಾಡಿ ತೆರಳಲು 36 ಕಿ.ಮೀ. ಕ್ರಮಿಸಿ ಕಕ್ಕಿಂಜೆಗೆ ಬರುವ ಅನಿವಾರ್ಯವಿದೆ. ಹೀಗಾಗಿ ಬಹು ವರ್ಷಗಳ ಬೇಡಿಕೆಯೊಂದು ಹಾಗೆ ಉಳಿದಿತ್ತು. ಪ್ರಸಕ್ತ ವರ್ಷದಲ್ಲಿ ಬಾರ್ಯ ಹಾಗೂ ಬಾಂಜಾರು ಮಲೆ ಅಂಗನವಾಡಿ ಮಂಜೂರುಗೊಂಡರೆ ಅಂಗನವಾಡಿಗಳ ಸಂಖ್ಯೆ 326ಕ್ಕೇರಲಿದೆ. ಕೋವಿಡ್‌ ಸಂದರ್ಭದಲ್ಲಿಯೂ ಬಾಂಜಾರು ಮಲೆಗೆ ಲಸಿಕೆ ಸಹಿತ ಅಗತ್ಯ ಸವಲತ್ತು ಒದಗಿಸಲು ಆರೋಗ್ಯ ಇಲಾಖೆಯೆ ಹರಸಾಹಸ ಪಡುವಂತಾಗಿತ್ತು. ಇದರಿಂದ ರಾಜ್ಯದಲ್ಲೇ ಕಟ್ಟಕಡೆಗೆ ಲಸಿಕೆ ತಲುಪಿದ ಗ್ರಾಮವಾಗಿಯೂ ಗೋಚರಿಸಿತ್ತು.

ಈಗಿರುವ 324 ಅಂಗನವಾಡಿಗಳ ಪೈಕಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆಲ್ಲಗುತ್ತು ಅಂಗನವಾಡಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಉಳಿದಂತೆ 2019-20ನೇ ಸಾಲಿನ ಆರ್‌.ಐ.ಡಿ.ಎಫ್‌.-25 ಮಳೆ ಹಾನಿಗೊಂಡ ಕಟ್ಟಡಗಳ ಪುನರ್‌ ನಿರ್ಮಾಣ ಯೋಜನೆಯಡಿ ಜಿಲ್ಲೆಗೆ ಮಂಜೂರಾದ 25 ಅಂಗನವಾಡಿಗಳಲ್ಲಿ ಬೆಳ್ತಂಗಡಿ ತಾಲೂಕಿನ ಹಾನಿ ಪ್ರಮಾಣ ಅಂದಾಜಿಸಿ ಅತೀ ಹೆಚ್ಚು 14 ಅಂಗನವಾಡಿ ಮಂಜೂರುಗೊಂಡಿತ್ತು. ಅವುಗಳಲ್ಲಿ 14 ಅಂಗನವಾಡಿಗೂ ಕಟ್ಟಡ ರಚನೆಗೊಂಡು ಚಿಣ್ಣರ ಕಲರವ ಬೀರಿದೆ.

14 ಅಂಗನವಾಡಿಗೆ ನೂತನ ಕಟ್ಟಡ

ತಾಲೂಕಿನ 14 ಕಡೆಗಳಲ್ಲಿ ಪ್ರತೀ ಕಟ್ಟಡಕ್ಕೆ 16 ಲಕ್ಷ ರೂ. ಘಟಕ ವೆಚ್ಚದಲ್ಲಿ ಇಂದಬೆಟ್ಟುವಿನ ಬಂಗಾಡಿ-2 ಕೇಂದ್ರ, ಕಣಿಯೂರು, ಕಳಿಯದ-ರಕ್ತೇಶ್ವರಿ ಪದವು, ಬೆಳಾಲು ಗ್ರಾಮದ ಮಾಯಾ ಹಾಗೂ ಬೆಳಾಲು, ಕೊಕ್ಕಡದ-ಸೌತಡ್ಕ, ಪಟ್ರಮೆಯ-ಪಟ್ಟೂರು, ಉಜಿರೆಯ-ದೊಂಪದಪಲ್ಕೆ, ಮಿತ್ತಬಾಗಿಲಿನ -ಕುಕ್ಕಾವು, ಕವೆಟ್ಟು ಗ್ರಾಮದ- ಗುರುವಾಯನಕೆರೆ, ನಾವೂರು, ನಡ ಗ್ರಾಮದ ಸುರಿಯ, ಧರ್ಮಸ್ಥಳದ- ದೊಂಡೋಲೆ, ಬೆಳಾಲು, ಮೇಲಂತಬೆಟ್ಟು-1 ಇಷ್ಟು ಕಡೆಗಳಲ್ಲಿ ನೂತನ ಕಟ್ಟಡ ರಚನೆಯಾಗಿ ಉದ್ಘಾಟನೆಯ ಭಾಗ್ಯವೂ ದೊರೆತಿದ್ದರಿಂದ ಚಿಣ್ಣರ ಕಲರವ ಮೂಡಿದೆ.

ನಿರ್ಮಾಣ ಹಂತದಲ್ಲಿವೆ 6 ಕಟ್ಟಡ

ಈಗಾಗಲೆ 2020-21ನೇ ಸಾಲಿನಲ್ಲಿ ಪ.ಪಂ. ವ್ಯಾಪ್ತಿಯ ಸುದೆಮುಗೇರು, ಉಜಿರೆಯ ನೀರಚಿಲುಮೆ, ಕೊಕ್ಕಡದ ಕೊಕ್ಕಡ, ಮಾಲಾಡಿಯ ಪುರಿಯದಲ್ಲಿ ಉಳಿದಂತೆ 2021-22ನೇ ಸಾಲಿನ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ನಾವೂರು ಗಿರಿಜನ ಕಾಲನಿಯಲ್ಲಿ ಹಾಗೂ ಧರ್ಮಸ್ಥಳದ ಮುಳಿಕ್ಕಾರು ಸೇರಿ ಒಟ್ಟು 6 ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ. ಈ ಮೂಲಕ ಶಾಸಕ ಹರೀಶ್‌ ಪೂಂಜ ಅವರ ಮುತುವರ್ಜಿಯಿಂದ ತಾಲೂಕಿಗೆ 20 ನೂತನ ಅಂಗನವಾಡಿ ಕಟ್ಟಡದ ಭಾಗ್ಯ ದೊರೆತಿದೆ.

ಪ್ರಸ್ತಾವನೆ ಸಲ್ಲಿಕೆ: ಬೆಳ್ತಂಗಡಿ ತಾಲೂಕಿನಲಿ ತೀರ ಗುಡ್ಡಗಾಡು ಹಾಗೂ ಅತೀ ದೂರದ ಬಾಂಜಾರು ಮಲೆ ಹಾಗೂ ಬಾರ್ಯದ ದೊಡ್ಡಕಲ್ಲು ಎಂಬಲ್ಲಿ ನೂತನ ಅಂಗನವಾಡಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೆ 20 ಅಂಗನವಾಡಿಗಳ ಪೈಕಿ 14 ನೂತನ ಸುಸಜ್ಜಿತ ಕಟ್ಟಡ ರಚನೆಗೊಂಡು ಉದ್ಘಾಟನೆಯನ್ನು ಶಾಸಕರು ನೆರವೇರಿಸಿದ್ದಾರೆ. -ಪ್ರಿಯಾ ಆ್ಯಗ್ನೆಸ್‌ ಚಾಕೊ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

byndoor

Sullia: ಆತ್ಮಹ*ತ್ಯೆಗೆ ಯತ್ನಿಸಿದ್ದ ಯುವಕ ಸಾವು

13

Belthangady: ಅಸೌಖ್ಯದಿಂದ ಯುವ ಪ್ರತಿಭೆ ಸಾವು

Kukke-Kanchi-Sri-visit

Kanchi Sri Visit: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಂಚಿ ಸ್ವಾಮೀಜಿ ಭೇಟಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.