“ಪಂಚ’ ಸೂತ್ರಗಳ ಯಶಸ್ವಿ ಗೇರು ಕೃಷಿಕ ಕಡಮಜಲು ಸುಭಾಸ್‌ ರೈ

ಕಳೆದ ವರ್ಷದಲ್ಲಿ 5 ಲಕ್ಷ ರೂ. ಮೌಲ್ಯದ ಗೇರು ಫಸಲು

Team Udayavani, Dec 18, 2019, 5:37 AM IST

cv-34

ಹೆಸರು: ಕಡಮಜಲು ಸುಭಾಸ್‌ ರೈ
ಏನೇನು ಕೃಷಿ: ಗೇರು, ರಬ್ಬರ್‌, ಅಡಿಕೆ, ಇತ್ಯಾದಿ
ಎಷ್ಟು ವಯಸ್ಸು: 70
ಕೃಷಿ ಪ್ರದೇಶ: 50 ಎಕ್ರೆ

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ “ಉದಯವಾಣಿ’ಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಪುತ್ತೂರು: ಸಾಂಪ್ರದಾಯಿಕ ಮಿಶ್ರ ಕೃಷಿಯ ಜತೆಗೆ ವೈಜ್ಞಾನಿಕ ಹಾಗೂ ವ್ಯವಸ್ಥಿತ ಗೇರು ಕೃಷಿಯನ್ನು ಅಳವಡಿಸಿಕೊಂಡು ತಮ್ಮ ಕೃಷಿ ಕ್ಷೇತ್ರವನ್ನು ದೇಶದ ವಿವಿಧ ರಾಜ್ಯಗಳ ಅಧ್ಯಯನಕಾರರು, ಕೃಷಿಕರಿಗೆ ಅಧ್ಯಯನ ಕೇಂದ್ರವಾಗಿ ರೂಪಿಸಿದ ಹೆಗ್ಗಳಿಕೆಯ ಪ್ರಗತಿಪರ ಕೃಷಿಕ ಕಡಮಜಲು ಸುಭಾಸ್‌ ರೈ.

ಸುಮಾರು 50 ಎಕ್ರೆ ಕೃಷಿ ಭೂಮಿ ಹೊಂದಿರುವ ಸುಭಾಸ್‌ ರೈ, 18 ಎಕ್ರೆ ರಬ್ಬರ್‌, 14 ಎಕ್ರೆ ಗೇರು ಕೃಷಿ, 14 ಎಕ್ರೆ ಅಡಿಕೆ ತೋಟ, 1 ಎಕ್ರೆಯಲ್ಲಿ ತೆಂಗು ಹಾಗೂ ಉಪ ಬೆಳೆಯಾಗಿ ಕೊಕ್ಕೋ, ಕರಿಮೆಣಸು, ಬಾಳೆ, ಕೃಷಿಗೆ ಪೂರಕವಾಗಿ 4 ದನ, ಊರಿನ ಕೋಳಿ ಸಾಕಾಣಿಕೆ, ಗೋಬರ್‌ ಗ್ಯಾಸ್‌, ಸ್ಲರಿ, ಅಸ್ತ್ರ ಒಲೆ, ಸ್ಮೋಕಿಂಗ್‌ ಹೌಸ್‌ ಹೊಂದಿದ್ದಾರೆ.

ಕಳೆದ ವರ್ಷದಲ್ಲಿ 5 ಲಕ್ಷ ರೂ. ಮೌಲ್ಯದ ಗೇರು ಫಸಲು ಪಡೆದಿರುವ ಸುಭಾಸ್‌ ರೈ, ಖರ್ಚು ಕಳೆದ 3 ಲಕ್ಷ ರೂ. ಲಾಭ ಮಾಡಿಕೊಂಡಿದ್ದಾರೆ. ಈ ಬಾರಿ 150 ಕ್ವಿಂಟಲ್‌ ಗೇರು ಫಸಲಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಒಟ್ಟು ಕೃಷಿ ಭೂಮಿಯಲ್ಲಿ ಎಲ್ಲ ರೀತಿಯ ಖರ್ಚುಗಳನ್ನು ಕಳೆದು ವಾರ್ಷಿಕ 10 ಲಕ್ಷ ರೂ. ಲಾಭ ನಿಶ್ಚಿತವಾಗಿ ಪಡೆಯುತ್ತೇನೆ ಮತ್ತು ಎಲ್ಲಕ್ಕಿಂತ ಮೇಲಾಗಿ ಕೃಷಿಯಲ್ಲಿ ಖುಷಿ ಕಾಣುತ್ತಿದ್ದೇನೆ ಎನ್ನುವ ಅಭಿಪ್ರಾಯ ಸುಭಾಸ್‌ ರೈ ಅವರದ್ದು.

ಕೃಷಿಯ ಪ್ರೇರಣೆ, ಸಾಧನೆ
1950 ರಲ್ಲಿ ಮುಂಡಾಳಗುತ್ತು ಮಾçಲ ರೈ ಮತ್ತು ಕರಿಯಾಳ ಪೊçಲ ಪದ್ಮಾವತಿ ರೈ ಅವರ ಪುತ್ರನಾಗಿ ಜನಿಸಿದ ಕಡಮಜಲು ಸುಭಾಸ್‌ ರೈ ಪದವೀಧರ. ಸೋದರಮಾವ ಸ್ವಾತಂತ್ರÂ ಹೋರಾಟಗಾರ ಎನ್‌.ಎಸ್‌. ಕಿಲ್ಲೆ ಹಾಗೂ ಬಾಕತ್ತಿಮಾರುವಿನ ಕೃಷಿ ಸಾಧಕ ಚಿಲ್ಮೆತ್ತಾರು ರಾಮಣ್ಣ ರೈ ಅವರಿಂದ ಕೃಷಿ ಬದುಕಿನ ಪ್ರೇರಣೆ ಪಡೆದು 15ನೇ ಹರೆಯದಲ್ಲಿ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. 1968ರಿಂದ ಕೃಷಿ ಆರಂಭಿಸಿ ಕೃಷಿ ಬದುಕಿನ 52 ವರ್ಷಗಳಲ್ಲಿ ಸಾಧಕ, ಕೃಷಿಯ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಸ್ವೇದಬಿಂದು ಗೇರು ತೋಟ
14 ಎಕ್ರೆ ಜಾಗದಲ್ಲಿ ಸ್ವೇದಬಿಂದು ಗೇರು ತೋಟ ಹೆಸರಿನಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿರುವ ಕಡಮಜಲು ಸುಭಾಸ್‌ ರೈ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.  2013ರಿಂದ ಅವರು ಗೇರು ಕೃಷಿಯಲ್ಲಿ ತೊಡಗಿಕೊಂಡಿದ್ದು, ಗೇರು ಸಂಶೋಧನ ನಿರ್ದೇಶನಾಲಯಗಳು, ಕೃಷಿ ವಿಶ್ವವಿದ್ಯಾನಿಲಯ ಗಳಿಗೆ ಅಧ್ಯಯನ ಯೋಗ್ಯ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ದೇಶದ ವಿವಿಧ ರಾಜ್ಯಗಳಿಂದ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು, ರೈತರು ಇಲ್ಲಿಗೆ ಅಧ್ಯಯನ ಭೇಟಿ ಕೈಗೊಳ್ಳುತ್ತಿದ್ದಾರೆ. ವಿವಿಗಳಲ್ಲಿ ಗೇರು ಹಾಗೂ ಇತರ ಕೃಷಿಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಕಡಮಜಲು ಸುಭಾಸ್‌ ರೈ ಅವರು ಭಾಗವಹಿಸುತ್ತಿದ್ದಾರೆ.

ಕೃಷಿ ಸಾಧನೆಗೆ ಪ್ರಶಸ್ತಿ
 ಗೋವಾದಲ್ಲಿ ನಡೆದ ರಾಷ್ಟ್ರೀಯ ಗೇರು ಮತ್ತು ಕೊಕ್ಕೋ ವಿಚಾರಗೋಷ್ಠಿ ಸಮಾವೇಶದಲ್ಲಿ ಉತ್ತಮ ಕೃಷಿಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ
 ರಾಜ್ಯ ತೋಟಗಾರಿಕೆ ಇಲಾಖೆಯಿಂದ ಉತ್ತಮ ತೋಟಗಾರಿಕಾ ಪ್ರಶಸ್ತಿ.
 ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಅರಣ್ಯ ಮಿತ್ರ ಪ್ರಶಸ್ತಿ
 ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಕೃಷಿ ಸಾಧನೆಗಾಗಿ ಕಾಪು ಮುದ್ದಣ್ಣ ಶೆಟ್ಟಿ ಚಿನ್ನದ ಪದಕ.
 ಮೈಸೂರಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ನಡೆದ ಗೇರು ಅಧ್ಯಯನ ಕಾರ್ಯಾಗಾರದಲ್ಲಿ ಕುಲಪತಿ ಡಾ| ಡಿ.ಎಲ್‌. ಮಹೇಶ್ವರ್‌ ಅವರಿಂದ ಕೃಷಿ -ಋಷಿ ಬಿರುದು ಹಾಗೂ ರಾಜ್ಯಮಟ್ಟದ ವೈಜ್ಞಾನಿಕ ಕೃಷಿ ರಾಯಭಾರಿಯಾಗಿ ಘೋಷಣೆ.
 ಬೀದರ್‌ ತೋಟಗಾರಿಕಾ ವಿವಿ, ಮಂಡ್ಯ, ಮಂಗಳೂರು, ಬ್ರಹ್ಮಾವರ ಸೇರಿದಂತೆ ದೇಶದ ವಿವಿಧೆಡೆ ಕೃಷಿ ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡನೆ.
 ಹಲವು ಸಂಘ ಸಂಸ್ಥೆಗಳಿಂದ ಕೃಷಿ ಸಾಧನೆಗಾಗಿ ಸಮ್ಮಾನ.

ಕೃಷಿಯಿಂದ ಬದುಕು ಕಟ್ಟಿಕೊಳ್ಳಬಹುದು
ಕೃಷಿಯಲ್ಲಿ ಬದುಕಬಹುದು ಎಂಬ ದೃಢನಿಲುವಿನಿಂದ ಸಣ್ಣ ವಯಸ್ಸಿನಲ್ಲೇ ಕೃಷಿಯಲ್ಲಿ ತೊಡಗಿಸಿಕೊಂಡು ನಿಶ್ಚಿಂತೆಯಿಂದ ಬದುಕುತ್ತಿದ್ದೇನೆ. ಕೃಷಿಕ ಕೃಷಿಯಲ್ಲಿ ಆಸಕ್ತಿ, ಶ್ರಮದಿಂದ ಕೆಲಸ ಮಾಡಬೇಕು. ಕೃಷಿಕನ ಯಶಸ್ಸಿನಲ್ಲಿ 5 “ಪ ‘ಗಳ ಪ್ರಮುಖ ಪಾತ್ರ ವಹಿಸುತ್ತವೆ. ಪರಿಣತಿ (ಅಧ್ಯಯನ), ಪರಿಜ್ಞಾನ (ಆಳ ಜ್ಞಾನ), ಪರಿಶ್ರಮ, ಪರಿಪೂರ್ಣ ನಿರ್ವಹಣೆಯಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಈ ಕಾರಣದಿಂದ 70ರ ವಯಸ್ಸಿನಲ್ಲೂ ನಾನು ಕೃಷಿಯಲ್ಲಿ ಯಶಸ್ವಿಯಾಗಿದ್ದೇನೆ.
– ಕಡಮಜಲು ಸುಭಾಸ್‌ ರೈ, ಪ್ರಗತಿಪರ ಕೃಷಿಕರು

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.