ಕೋವಿಡ್ ಚಿಕಿತ್ಸೆಗೆ 50 ಬೆಡ್ ಮೀಸಲು
Team Udayavani, May 5, 2021, 4:20 AM IST
ಬೆಳ್ತಂಗಡಿ: ತಾಲೂಕಿನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಯಲ್ಲಿ 50 ಆಕ್ಸಿನೇಟೆಡ್ ಬೆಡ್ ಸಿದ್ಧ ಪಡಿಸಲಾಗಿದೆ. ತಾಲೂಕೊಂದರಲ್ಲೆ ಎಪ್ರಿಲ್ 1ರಿಂದ ಈವರೆಗೆ ಒಟ್ಟು 734 ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಸರಕಾರಿ ಆಸ್ಪತ್ರೆಯಲ್ಲಿ ಪ್ರಸಕ್ತ ಒಟ್ಟು 75 ಹಾಸಿಗೆಗಳಿದ್ದು, ಅವುಗಳ ಪೈಕಿ 50 ಆಕ್ಸಿನೇಟೆಡ್ ಬೆಡ್ ಸಿದ್ಧಪಡಿಸಲಾಗಿದೆ. ಪ್ರಸಕ್ತ 24 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 10 ಬೆಡ್‌ಗಳನ್ನು ಕೋವಿಡ್ ಸಂಶಯಾಸ್ಪದ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಐಸಿಯುವಿನಲ್ಲಿ 3 ಬೆಡ್‌ಗಳಿದ್ದು ಅಗತ್ಯ ಆಧರಿಸಿ ಬಳಕೆ ಮಾಡಲಾಗುತ್ತಿದೆ.
ಪ್ರಸಕ್ತ ತಾಲೂಕು ಆಸ್ಪತ್ರೆಯಲ್ಲಿ 34 ಜಂಬೋ ಸಿಲಿಂಡರ್ ಲಭ್ಯವಿದ್ದು, 9 ಸಣ್ಣ ಸಿಲಿಂಡರ್‌ಗಳಿವೆ. ಪ್ರತಿದಿನ ತಲಾ 2 ಸಿಲಿಂಡರ್ ಬೇಕಾಗುತ್ತದೆ. ಈಗಾಗಲೇ ಎಸ್‌ಡಿಆರ್‌ಎಫ್‌ನಿಂದ ನೂತನ ಆಮ್ಲ ಜನಕ ಘಟಕ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ.
ಹೋಮ್ ಐಸೋಲೇಶನ್ :
ಗುಣಲಕ್ಷಣ ಹೊಂದಿರುವ ಸೋಂಕಿ ತರಿಗೆ ಮನೆಯಲ್ಲೇ ಚಿಕಿತ್ಸೆಗೆ ಅಗತ್ಯ ಕ್ರಮ ವಹಿಸಲಾಗಿದೆ. ಮನೆಯಲ್ಲಿ ಜಾಗದ ಸಮಸ್ಯೆ ಇರುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವ್ಯಸನಮುಕ್ತಿ ಕೇಂದ್ರಕ್ಕೆ ಸ್ಥಳಾಂತರಿಸಲು ಈಗಾಗಲೇ ಶಾಸಕರ ಸಮ್ಮುಖದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಅಲ್ಲಿ 200 ಹಾಸಿಗೆಗಳುಳ್ಳ ಸುಸಜ್ಜಿತ ಕೇಂದ್ರ ತೆರೆಯಲಾಗಿದೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ಗೆ 2 ವೈದ್ಯರನ್ನು, ಓರ್ವ ಸ್ಟಾಫ್ ನರ್ಸ್ ಅವರನ್ನು ನೇಮಿಸಲಾಗಿದೆ. ಪ್ರಸಕ್ತ 7 ಮಂದಿ ವೈದ್ಯರಿದ್ದಾರೆ.
ಒಟ್ಟು 24 ಸ್ಟಾಫ್ ನರ್ಸ್‌ಗಳ ಹುದ್ದೆಯ ಪೈಕಿ 16 ಮಂದಿಯಿದ್ದು ಉಳಿದ 4 ಹುದ್ದೆ ಎನ್‌ಆರ್‌ಎಚ್‌ಎಂ ಮೂಲಕ ಪಡೆಯ ಲಾಗಿದೆ. ಹೀಗಾಗಿ 20 ನರ್ಸ್ ಗಳು ಸೇವೆ ಸಲ್ಲಿಸುತ್ತಿದ್ದಾರೆ. ಡಿ ಗ್ರೂಪ್ ಪೈಕಿ ಓರ್ವ ಸರಕಾರಿ ಹಾಗೂ 15 ಮಂದಿ ಅರೆ ಗುತ್ತಿಗೆಯಲ್ಲಿ ನೇಮಿಸಲಾಗಿದೆ. 1938 ಮಂದಿಗೆ 2ನೇ ಡೋಸ್ ಬಾಕಿ ಪ್ರಸಕ್ತ ವ್ಯಾಕ್ಸಿನೇಶನ್ ಖಾಲಿಯಾಗಿದೆ.
ಮೇ 5ರಂದು ಪೂರೈಕೆಯಾಗುವ ಕುರಿತು ಆರೋಗ್ಯ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ಜ.16ರಿಂದ ಕೊವಿಶೀಲ್ಡ್ 3,040 ಡೋಸ್, ಕೋವ್ಯಾಕ್ಸಿನ್ 860 ಡೋಸ್ ಒದಗಿಸಲಾಗಿದೆ. ಕೊವಿಶೀಲ್ಡ್ ಮೊದಲ ಡೋಸ್ 2,118 ಮಂದಿಗೆ, 2ನೇ ಡೊಸ್ 838 ಮಂದಿ ಪಡೆದಿದ್ದಾರೆ. ಕೋವ್ಯಾಕ್ಸಿನ್ ಮೊದಲ ಡೋಸ್ 691 ಮಂದಿ, 2ನೇ ಡೋಸ್ 33 ಮಂದಿ ಪಡೆದಿದ್ದಾರೆ. ಒಟ್ಟು 1,280 ಮಂದಿಗೆ ಕೊವಿಶೀಲ್ಡ್ ಹಾಗೂ 658 ಮಂದಿಗೆ ಕೋವ್ಯಾಕ್ಸಿನ್ 2ನೇ ಡೋಸ್ ನೀಡಲು ಬಾಕಿ ಉಳಿದಿದೆ. ಮೇ ತಿಂಗಳಲ್ಲಿ ಪೂರೈಕೆಯಾಗುವ ವ್ಯಾಕ್ಸಿನ್ 1,938 ಮಂದಿಗೆ ನೀಡಿದ ಬಳಿಕವೇ 18 ವಯೋಮಿತಿಯ ಮೇಲ್ಪಟ್ಟವರಿಗೆ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
100 ಕೆ.ವಿ. ಜನರೇಟರ್ ಆವಶ್ಯಕತೆ :
ಪ್ರಸಕ್ತ ತಾಲೂಕು ಆಸ್ಪತ್ರೆಯಲ್ಲಿ 35 ಕೆ.ವಿ. ಜನರೇಟರ್ ವ್ಯವಸ್ಥೆಯಿದೆ. ಒಟ್ಟು 6 ಡಯಾಲಿಸಿಸ್ ಯಂತ್ರಗಳು ಕಾರ್ಯಾಚರಿಸುವುದರಿಂದ 18ಗಂಟೆಯಷ್ಟು ಯಂತ್ರ ಕೆಲಸ ನಿರ್ವಹಿಸುತ್ತಿದೆ.
68 ಮಂದಿಗೆ ಡಯಾಲಿಸಿಸ್ : ಒಟ್ಟು 68 ಮಂದಿ ಡಯಾಲಿಸಿಸ್ ರೋಗಿಗಳಿದ್ದಾರೆ. ಹೀಗಾಗಿ 100 ಕೆ.ವಿ. ಜನರೇಟರ್ ಅಳವಡಿಸಿದಲ್ಲಿ ವಿದ್ಯುತ್ ವ್ಯತ್ಯಯವಾದರೂ ಯಂತ್ರಗಳ ಬಳಕೆಗೆ ಸರಾಗವಾಗಲಿದೆ.
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.