Mobile ಕದ್ದು ಯುಪಿಐ ಆ್ಯಪ್ ಬಳಸಿ 61 ಸಾವಿರ ರೂ. ನಗದು ಲಪಟಾವಣೆ
Team Udayavani, Nov 24, 2023, 9:56 PM IST
ಬೆಳ್ತಂಗಡಿ: ಕುವೆಟ್ಟು ಗ್ರಾಮದಲ್ಲಿ ಮನೆಗೆ ಆಗಮಿಸಿದ ಆರೋಪಿಯೋರ್ವ ಮಹಿಳೆಯ ಮೊಬೈಲ್ ಕದ್ದಿರುವ ಜತೆಗೆ ಅದರಲ್ಲಿದ್ದ ಯುಪಿಐ ಆ್ಯಪ್ ಮೂಲಕ ಬ್ಯಾಂಕ್ ಖಾತೆಯಿಂದ 61 ಸಾವಿರ ರೂ. ನಗದು ವರ್ಗಾವಣೆ ಮಾಡಿದ್ದು, ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆ ತಡವಾಗಿ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಕುವೆಟ್ಟು ಗ್ರಾಮ ನಿವಾಸಿ ಅಭಿದಾ ಬಾನು ಅವರು ದೂರು ನೀಡಿದ್ದು, ಆಕೆಯ ಪತಿಯ ಸ್ನೇಹಿತ ಸಿದ್ದೀಕ್ ಮೊಬೈಲ್ ಕದ್ದು ನಗದು ವರ್ಗಾವಣೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ಮನೆಯಲ್ಲಿ ಇಲ್ಲದ ವೇಳೆಗೆ ಆತ ಮನೆಗೆ ಬಂದು ಮೊಬೈಲ್ ಕದ್ದು, ಬ್ಯಾಂಕ್ ಖಾತೆಯಲ್ಲಿದ್ದ 64 ಸಾವಿರ ರೂ.ಗಳ ಪೈಕಿ 61 ಸಾವಿರ ರೂ.ಗಳನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿದ್ದಾನೆ.
ಆರೋಪಿ ಸಿದ್ದೀಕ್ ಸ್ನೇಹಿತನಾಗಿರುವ ಕಾರಣದಿಂದ ಈ ಕುಟುಂಬದ ಜತೆ ಆತ್ಮೀಯನಾಗಿದ್ದು, ಆತ ಫೋನ್ ಪೇ ಪಾಸ್ವರ್ಡ್ ಕೂಡ ತಿಳಿದುಕೊಂಡಿದ್ದ. ಆತ ಹಣ ಹಾಗೂ ಮೊಬೈಲ್ ಹಿಂದಿರುಗಿಸುತ್ತಾನೆ ಎಂದು ಮಹಿಳೆ ಸುಮ್ಮನಿದ್ದು, ಹಲವು ಸಮಯ ಕಳೆದರೂ ಹಿಂದಿರುಗಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.