ಶಾಲೆಯಲ್ಲಿದ್ದಾಗಲೇ ಸೈನಿಕನಾಗ್ತೀನಿ ಅಂದಿದ್ದ ಹುಡುಗ!
Team Udayavani, Feb 28, 2018, 12:55 PM IST
ಸೈನಿಕನಾಗಲು ಬಾಲ್ಯದಲ್ಲೇ ಕನಸು ಕಾಣುವುದು ಎಂದರೆ.. ಅದೇ ದೇಶಪ್ರೇಮದ ಬಗೆಗಿರುವ ನಿಜವಾದ ಬದ್ಧತೆ. ಇದಕ್ಕೆ ಶಿಕ್ಷಕರಿಂದ ಶಹಬ್ಟಾಸ್‌ಗಿರಿಯೂ ಪಡೆದಿದ್ದೂ ಅಲ್ಲದೇ ಅದನ್ನೇ ಧ್ಯಾನಿಸಿ ಮುಂದೊಂದು ದಿನ ದೇಶಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿದರು. ರಾಷ್ಟ್ರರಕ್ಷಣೆಯನ್ನೇ ಉಸಿರಾಗಿಸಿದರು.
ಬೆಳ್ತಂಗಡಿ : ಅದು ಅಳದಂಗಡಿಯ ಸರಕಾರಿ ಪ್ರೌಢಶಾಲೆಯ 10ನೇ ತರಗತಿ. ಶಿಕ್ಷಕ ಅನಂತಕೃಷ್ಣ ಕೋರ್ನಾಯರು, ಮಕ್ಕಳಲ್ಲಿ ದೊಡ್ಡವರಾದ ಮೇಲೆ ಏನಾಗ್ತೀರಿ ಅಂತ ಸಾಮಾನ್ಯ ಪ್ರಶ್ನೆ ಕೇಳಿದ್ರು. ಹಲವು ವಿದ್ಯಾರ್ಥಿಗಳು, ವಿವಿಧ ಉದ್ಯೋಗ, ಎಂಜಿನಿಯರ್, ಡಾಕ್ಟರ್, ಡ್ರೈವರ್ ಹೀಗೆಲ್ಲ ಹೇಳಿದರು. ಆದರೆ ಆ ಬಾಲಕ ಸೈನಿಕನಾಗುತ್ತೇನೆ ಎಂದು ಹೇಳಿದ್ದ! ಪ್ರತಿಯಾಗಿ ಶಿಕ್ಷಕರು ಬೆನ್ನುತಟ್ಟಿ ಶಹಬ್ಟಾಸ್ ಗಿರಿ ನೀಡಿದ್ದರು.
ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಹವಾಲ್ದಾರ್ ಮೋಹನ್ .ಕೆ
ಶಿಕ್ಷಕರ ಈ ಶಹಬ್ಟಾಸ್‌ಗಿರಿಯೇ ಅಳದಂಗಡಿಯ ಆನೆಮಹಲ್‌ನ ಹವಾಲ್ದಾರ್ ಮೋಹನ್ ಕೆ. ಅವರನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ (ಸಿಆರ್‌ಪಿಎಫ್)ಗೆ ಸೇರಿಸಿತು. ಮೂಲತಃ ಬಳಂಜದವರಾದ ಶಿಕ್ಷಕ ಕಾಂತಪ್ಪ ಮೂಲ್ಯ- ಜಾನಕಿ ದಂಪತಿಯ 6 ಪುತ್ರರು, ಇಬ್ಬರು ಪುತ್ರಿಯರಲ್ಲಿ ನಾಲ್ಕನೆಯವರು ಮೋಹನ್. ಪತ್ನಿ ಚಂದ್ರಕಲಾ ಗೃಹಿಣಿ. ಪ್ರಥಮ ಪುತ್ರಿ ದೀಕ್ಷಾ ವಾಣಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ದ್ವಿತೀಯ ಪುತ್ರಿ ಧನ್ಯಾ ಕೆ. ವಾಣಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾರೆ.
ಬಸ್ ಏಜೆಂಟ್ ಸೇನೆಗೆ
ಬೆಳ್ತಂಗಡಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಬಳಿಕ ತಂದೆಯ ಅಂಗಡಿಯಲ್ಲಿ ನಾಲ್ಕೈದು ತಿಂಗಳು ಕೆಲಸ ಮಾಡಿ ಬಳಿಕ ಮೋಹನ್ ಕಾರ್ಕಳದಲ್ಲಿ ಬಸ್ ಏಜೆಂಟ್ ಆಗಿದ್ದರು. ಆದರೆ ಅವರಿಗೆ ಸೈನಿಕನಾಗಬೇಕೆಂಬ ತುಡಿತ ವ್ಯಾಪಕವಾಗಿತ್ತು. ಮಿಲಿಟರಿ ಹಾಗೂ ಪ್ಯಾರಾಮಿಲಿಟರಿ ಎರಡಕ್ಕೂ ಸೇರಲು ಯತ್ನಿಸಿ ಎರಡರಲ್ಲೂ ಆಯ್ಕೆಯಾಗಿ 1993ರಲ್ಲಿ ಪ್ಯಾರಾಮಿಲಿಟರಿಗೆ ಸೇರಿದರು. ತಂದೆ ಖುಷಿಯಿಂದ ಹಾರೈಸಿ ಮಗನನ್ನು ಕಳುಹಿಸಿದ್ದರು.
ವಿವಿಧೆಡೆ ಭದ್ರತೆ ಕೆಲಸ
ಸಂಸತ್ತಿಗೆ ಉಗ್ರ ದಾಳಿ ಬಳಿಕ 2003ರಲ್ಲಿ ಸಂಸತ್ತು ಭದ್ರತೆ, ಗೃಹಸಚಿವರಾಗಿದ್ದ ಲಾಲ್ ಕೃಷ್ಣ ಆಡ್ವಾಣಿ ಅವರ ಭದ್ರತೆ ನಿರ್ವಹಿಸಿದ್ದಾರೆ. ಅನಂತರ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯಾಚರಣೆ ಪಡೆ)ಗೆ ವರ್ಗವಾದರು. 5 ವರ್ಷ ಬಳಿಕ ಸಿಆರ್‌ಪಿಎಫ್ ಬೆಟಾಲಿಯನ್ ಜಮ್ಮುವಿಗೆ ವರ್ಗವಾಯಿತು. ಅಲ್ಲಿಂದ ವಿವಿಧೆಡೆ ಚುನಾವಣಾ ಕರ್ತವ್ಯ, ಗಡಿ ಭದ್ರತೆ, ತುರ್ತು ನೆರವು, ರಾಜ್ಯಪಾಲರು, ಝೆಡ್ ಶ್ರೇಣಿಯವರಿಗೆ ಸಂಬಂಧಿಸಿದ ಭದ್ರತೆ ಹೀಗೆ ಅನೇಕ ಕಡೆ ನಿಯೋಜನೆಯಾಗಿದೆ. ಸದ್ಯ ನಾಗಾಲ್ಯಾಂಡ್ ರಾಜ್ಯಪಾಲರಾದ ಪಿ.ಬಿ. ಆಚಾರ್ಯ ಅವರ ಭದ್ರತೆಯಲ್ಲಿರುವ ಮೋಹನ್ ಅವರು ಮಣಿಪುರದಿಂದ ಇಂಫಾಲ್‌ಗೆ ಹೋಗುವ ತೈಲ ಟ್ಯಾಂಕರ್ ಗಳಿಗೆ ಬೆಂಗಾವಲಾಗಿ ಹೋಗಲು ಇರುತ್ತದೆ. ಬೆಂಗಾವಲು ಪಡೆ ಇಲ್ಲದಿದ್ದರೆ ಉಗ್ರದಾಳಿಯ ಭೀತಿ ಇರುತ್ತದೆ ಎನ್ನುತ್ತಾರೆ.
ಅಮರನಾಥ್ ಯಾತ್ರೆ
ಜಲಂಧರ್‌ನಲ್ಲಿ ತರಬೇತಿ ಮುಗಿಸಿ ಪಂಜಾಬ್ ರಾಜಭವನದಲ್ಲಿ ರಾಜ್ಯಪಾಲ ಲೆ|ಜ| ಬಿ.ಕೆ.ಎನ್. ಚಿಬ್ಬರ್ ಅವರ ಭದ್ರತೆಗೆ ಮೊದಲಿಗೆ ಮೋಹನ್ ನಿಯೋಜಿತರಾಗಿದ್ದರು. ಬಳಿಕ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಣೆ ವೇಳೆ 5 ವರ್ಷ ಅಮರನಾಥ ಯಾತ್ರಿಕರಿಗೆ ನೆರವಾಗಲು ಅವಕಾಶ ದೊರೆಯಿತು. ಇದು ಜೀವನದಲ್ಲಿ ಮರೆಯಲು ಅಸಾಧ್ಯ ಸನ್ನಿವೇಶ. ಪೆಹಲ್‌ಗಾಂವ್, ಚಂದನ್‌ವಾಡಿ, ಪಂಚತರಣಿ, ಶೇಷನಾಗ್, ಅಮರ್‌ನಾಥ್ ಮೊದಲಾದೆಡೆ ಬೆದರಿಕೆಯ ವಾತಾವರಣದಲ್ಲಿ ಯಾತ್ರಿಗಳಿಗೆ ಧೈರ್ಯ ತುಂಬಿ ಯಶಸ್ವಿ ಯಾತ್ರೆ ಮಾಡಿಸಿದ ಹೆಮ್ಮೆ ಇದೆ ಎನ್ನುತ್ತಾರೆ.
ಹೊಂಚುದಾಳಿಯ ಅನುಭವ
ತ್ರಿಪುರಾದಲ್ಲಿ ಸಾರ್ವಜನಿಕರನ್ನು ಭದ್ರತೆಯಲ್ಲಿ ಕರೆದೊಯ್ಯುವಾಗ ಸ್ಥಳೀಯ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಇವರ ವಿರುದ್ಧ ಕಾರ್ಯಾಚರಣೆಗೆ ಬಸ್ಸಿಂದ ಇಳಿದು 15 ಕಿ.ಮೀ. ಕಾಡಿನಲ್ಲೇ ನಡೆದು ದಾಳಿ ನಡೆಸಿದ್ದೆವು. ಈ ವೇಳೆ ಜೊತೆಗಾರರು ಗಾಯಗೊಂಡಿದ್ದರು. ಮತ್ತೂಮ್ಮೆ ಚುನಾವಣಾ ಕರ್ತವ್ಯದಲ್ಲಿದ್ದಾಗ ನಮ್ಮದೇ ಪ್ಲಟೂನ್‌ನ ನಾಲ್ವರು ಇಂತಹ ದಾಳಿಗೆ ಬಲಿಯಾಗಿದ್ದರು. ಸುಮಾರು 60 ಕಿಮೀ. ದೂರ ನಾವೇ ಜನರನ್ನು ಬಸ್ಸಲ್ಲಿ ಕರೆದೊಯ್ಯಬೇಕು. ಅಂತಹ ಸಂದರ್ಭ ಆಗಾಗ್ಗೆ ಹೊಂಚು ದಾಳಿ ನಡೆಯುತ್ತಿರುತ್ತದೆ ಎನ್ನುತ್ತಾರೆ.
ಸೇನೆಯಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚು
ಬಡವರು, ಮಧ್ಯ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುತ್ತಾರೆ. ನಾವು ಊರಿಗೆ ಬಂದಾಗ ಊರಿನವರು ಗೌರವ ನೀಡುವಾಗ ಸಂತಸವಾಗತ್ತದೆ. ಆದರೆ ದೇಶಭಕ್ತಿ ಕುರಿತು ಮಾತನಾಡುವ ರಾಜಕಾರಣಿಗಳ ಮಕ್ಕಳೇಕೆ ಸೇನೆಗೆ ಸೇರುವುದಿಲ್ಲ?
-ಹವಾಲ್ದಾರ್ ಮೋಹನ್ ಕೆ.
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.