ಕಬ್ಬಿಣದ ತಂತಿ ಬಳಸಿ ಗೂಡು ಕಟ್ಟಿದ ಕಾಗೆ!
Team Udayavani, Sep 29, 2022, 2:05 PM IST
ಸುಳ್ಯ: ಸಾಮಾನ್ಯವಾಗಿ ಪಕ್ಷಿಗಳು ಮರದ ಎಲೆ, ಹುಲ್ಲು, ಸಣ್ಣ- ಪುಟ್ಟ ಕಡ್ಡಿ, ನಾರು ಪದಾರ್ಥದಂತಹ ಒಣ ವಸ್ತುಗಳಿಂದ ಗೂಡುಗಳನ್ನು ಕಟ್ಟಿಕೊಂಡು ಜೀವಿಸುತ್ತವೆ. ಆದರೆ ಇಲ್ಲೊಂದು ಪಕ್ಷಿ ಕಬ್ಬಿಣದ ತಂತಿಗಳನ್ನು ಬಳಸಿ ಗೂಡು ಕಟ್ಟಿಕೊಂಡಿದ್ದುದು ಬೆಳಕಿಗೆ ಬಂದಿದೆ. ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಈ ಘಟನೆ ಬೆಳಕಿದೆ ಬಂದಿದೆ.
ಇಲ್ಲಿನ ಆವರಣದೊಳಗಿನ ಮರದ ಗೆಲ್ಲನ್ನು ಅಪಾಯಕಾರಿ ಸ್ಥಿತಿಯ ಹಿನ್ನೆಲೆಯಲ್ಲಿ ತೆರವುಗೊಳಿಸಲು ಮುಂದಾದಾಗ ಅಲ್ಲಿ ಕಾಗೆಯ ಎರಡು ಗೂಡುಗಳು ಪತ್ತೆಯಾಗಿದೆ. ಆ ಪೈಕಿ ಒಂದರಲ್ಲಿ ಕಾಗೆ ವಾಸ್ತವ್ಯ ಮಾಡುತ್ತಿತ್ತು. ಇದರಿಂದಾಗಿ ಕೊಂಬೆ ತೆರವು ಮಾಡದೆ ಕಾಗೆಗಳ ವಾಸ್ತವ್ಯ ಇಲ್ಲದ ಗೂಡನ್ನು ಪರಿಶೀಲನೆ ಮಾಡಿದ ವೇಳೆ ಸುಮಾರು ಎರಡು ಕೆಜಿಯಷ್ಟು ಸಣ್ಣ-ಪುಟ್ಟ ಕಬ್ಬಿಣದ ತಂತಿಗಳಿಂದಲೇ ಗೂಡು ರಚಿಸಿರುವುದು ಕಂಡು ಬಂದಿದೆ.
ಕಾಗೆಗಳು ವಾಸವಿದ್ದ ಇನ್ನೊಂದು ಗೂಡು ಕೂಡಾ ಕಬ್ಬಿಣದ ತಂತಿಗಳಿಂದಲೇ ನಿರ್ಮಾಣವಾಗಿತ್ತು. ಅದನ್ನು ಮರದಲ್ಲೇ ಉಳಿಸಲಾಗಿದೆ. ಇದೀಗ ಈ ಖಾಲಿ ಕಾಗೆ ಗೂಡನ್ನು ಇದೇ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.