ಸಾವಯವ ಗೊಬ್ಬರ ತಯಾರಿಕೆಗೆ ಪ್ರಾಯೋಗಿಕ ಪ್ರಯತ್ನ

 ಬಂಟ್ವಾಳ ಪುರಸಭೆಯಲ್ಲಿ ಹಸಿಕಸ ಸದ್ಬಳಕೆ; ಮುಖ್ಯಾಧಿಕಾರಿ ನೇತೃತ್ವ

Team Udayavani, Jan 12, 2020, 5:21 AM IST

22

ಬಂಟ್ವಾಳ: ನಗರ ಪ್ರದೇಶದಲ್ಲಿ ಸಂಗ್ರಹ ವಾಗುವ ಹಸಿಕಸವನ್ನು ಸದುಪಯೋಗಪಡಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ಸಾವಯವ ಗೊಬ್ಬರ ತಯಾರಿಸುವ ಆಲೋಚನೆ ಮಾಡಿದ್ದು, ಇದೀಗ ಪ್ರಯೋಗಿಕವಾಗಿ ಬಂಟ್ವಾಳದಲ್ಲಿರುವ ತನ್ನ ಕಚೇರಿಯ ಹಿಂಭಾಗದಲ್ಲಿ ಸಾವಯವ ಗೊಬ್ಬರ ತಯಾರಿಕೆಯ ಪ್ರಯತ್ನ ನಡೆಯುತ್ತಿದೆ.

ಬಂಟ್ವಾಳ ಪುರಸಭೆಗೆ ಹೊಸದಾಗಿ ಬಂದಿರುವ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ನೇತೃತ್ವದಲ್ಲಿ ಈ ಪ್ರಾಯೋಗಿಕ ಪ್ರಯತ್ನ ಆರಂಭಗೊಂಡಿದ್ದು, ಅವರು ಈ ಹಿಂದೆ ಹೊನ್ನಾವರದಲ್ಲಿ ಕರ್ತವ್ಯ ನಿರ್ವಹಿಸುವಾಗ ಇಂತಹ ಪ್ರಯತ್ನದಿಂದ ಯಶಸ್ವಿಯಾಗಿದ್ದರು. ತ್ಯಾಜ್ಯ ದಿಂದ ಗೊಬ್ಬರ ತಯಾರಿಸುವ ಕುರಿತು ಬಂಟ್ವಾಳ ಪುರಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ಚರ್ಚೆ ಗಳು ನಡೆಯುತ್ತಿದ್ದರೂ ಇದೀಗ ಅದರ ಪ್ರಯೋಗಿಕ ಪ್ರಯತ್ನ ಆರಂಭಗೊಂಡಿದೆ.

ಪ್ರಸ್ತುತ ಈ ಗೊಬ್ಬರ ತಯಾರಿಕೆಯ ಅನುಭವ ಇಲ್ಲಿನ ಪೌರ ಕಾರ್ಮಿಕರಿಗೆ ಹೊಸದಾಗಿದ್ದು, ಹೀಗಾಗಿ ಗೊಬ್ಬರ ತಯಾ ರಿಕೆಯ ಕಾರ್ಯ ಕೊಂಚ ನಿಧಾನಗತಿ ಯಲ್ಲಿ ಸಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸೂಕ್ತ ರೀತಿಯಲ್ಲಿ ಜೋಡಿಸಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸಿ ದರೆ ಸಾವಯವ ಗೊಬ್ಬರ ತಯಾರಿ ಯಶಸ್ವಿ ಯಾಗುವ ಕುರಿತು ಪುರಸಭಾಧಿಕಾರಿಗಳು ತಿಳಿಸಿದ್ದಾರೆ.

ಪುರಸಭೆಯ ಹೊರೆ ತಪ್ಪಲಿದೆ
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಸಗಳ ವಿಲೇವಾರಿಗಾಗಿ ಸೂಕ್ತವಾದ ಡಪ್ಪಿಂಗ್‌ ಯಾರ್ಡ್‌ ಹಾಗೂ ತ್ಯಾಜ್ಯ ಸಂಸ್ಕರಣ ಘಟಕವಿಲ್ಲದೆ ಇರುವುದ ರಿಂದ, ಇಲ್ಲಿ ಸಂಗ್ರಹಗೊಂಡ ಕಸ ವನ್ನು ಮಂಗಳೂರು ಡಪ್ಪಿಂಗ್‌ ಯಾರ್ಡ್‌ಗೆ ಸಾಗಿಸಬೇಕಾದ ಹೊರೆ ಪುರಸಭೆಯ ಮೇಲಿದೆ. ಹೀಗಾಗಿ ಇಲ್ಲಿನ ಮನೆ, ಹೊಟೇಲ್‌ ಮೊದಲಾದ ಕಡೆಗಳಲ್ಲಿ ಸಂಗ್ರಹಗೊಂಡ ಹಸಿ ಕಸವನ್ನು ಗೊಬ್ಬರ ಮಾಡಬೇಕಾದ ಅನಿವಾರ್ಯ ಎದುರಾಗಿದೆ.

ಈ ರೀತಿ ಪ್ರಾಯೋಗಿಕವಾಗಿ ಆರಂಭಗೊಂಡಿ ರುವ ಪ್ರಯತ್ನ ಯಶಸ್ವಿಯಾದರೆ, ನಗರದ ತ್ಯಾಜ್ಯ ವನ್ನು ಮಂಗಳೂರು ಡಪ್ಪಿಂಗ್‌ ಯಾರ್ಡ್‌ಗೆ ಸಾಗಿಸುವ ಹೊರೆ ಕಡಿಮೆಯಾಗುವ ಜತೆಗೆ, ಗೊಬ್ಬರ ದಿಂದ ಒಂದಷ್ಟು ಆದಾಯವೂ ಪುರಸಭೆಗೆ ಲಭ್ಯ ವಾಗಲಿದೆ. ಮುಂದೆ ಒಣ ಕಸವನ್ನು ಮಾತ್ರ ಡಪ್ಪಿಂಗ್‌ ಯಾರ್ಡ್‌ಗೆ ಸಾಗಿಸಲಾಗುತ್ತದೆ.

45 ದಿನಗಳಲ್ಲಿ ಗೊಬ್ಬರ
ಪುರಸಭೆ ಹಿಂಭಾಗದಲ್ಲಿ ಪ್ರಾಯೋಗಿಕ ವಾಗಿ ನಿರ್ಮಿಸಲಾದ ತೊಟ್ಟಿಗಳಲ್ಲಿ ತ್ಯಾಜ್ಯ ಹಾಕಿ ಮಣ್ಣು ಹಾಕಲಾಗುತ್ತಿದ್ದು, ಒಟ್ಟು 45 ದಿನಗಳಲ್ಲಿ ಸಾವಯವ ಗೊಬ್ಬರ ಸಿದ್ಧವಾಗುತ್ತದೆ. ಪುರಸಭೆಯ ಪೌರಕಾರ್ಮಿಕರು ಬಿದಿರಿನ ಸಲಾಕೆಯ ಆಧಾರದಲ್ಲಿ ನಿರ್ಮಿಸಿದ ತೊಟ್ಟಿಗೆ ತೆಂಗಿನ ಹೆಣೆದ ಗರಿ (ತಟ್ಟಿಗಳು)ಗಳನ್ನು ಇಟ್ಟು ಅದಕ್ಕೆ ಹಸಿಕಸವನ್ನು ತುಂಡು ಮಾಡಿ ಹಾಕಿ ಸೆಗಣಿ ನೀರನ್ನು ಹಾಕಲಾಗುತ್ತಿದೆ.

ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಸೂಕ್ತ ಜಾಗದ ಆವಶ್ಯಕತೆ ಇದೆ. ಅಂದರೆ ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ಗಳಲ್ಲೂ ಇಂತಹ ಘಟಕ ಸ್ಥಾಪನೆಗೆ ಪ್ರಯತ್ನ ನಡೆಯಬೇಕಿದೆ. ಮುಖ್ಯವಾಗಿ ನಗರದ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಜನರು ಕಸ ನೀಡುವಾಗ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡಿದರೆ ಗೊಬ್ಬರ ತಯಾರಿಕೆಗೆ ಅನುಕೂಲವಾಗಲಿದೆ.

 ಯಶಸ್ವಿಯಾಗುವ ವಿಶ್ವಾಸ
ಈ ಹಿಂದೆ ಹೊನ್ನಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ರೀತಿ ಗೊಬ್ಬರ ತಯಾರಿಸುವ ಪ್ರಯತ್ನ ಮಾಡಿದ್ದು, ಅದು ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿಯೂ ಪ್ರಾಯೋಗಿಕ ಪ್ರಯತ್ನ ಆರಂಭಿಸಲಾಗಿದೆ. ಇಲ್ಲಿನ ಸಿಬಂದಿಗೆ ಹೊಸ ಅನುಭವವಾದ ಕಾರಣ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮುಂದೆ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ.
 - ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

  ಕಿರಣ್‌ ಸರಪಾಡಿ

ಟಾಪ್ ನ್ಯೂಸ್

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.